
ನವಲಗುಂದ,ಸೆ೭: ಗುರುಸ್ಮರಣೆ ಪರಂಪರೆ ನಮ್ಮ ನೆಲೆದ ಸಂಸ್ಕೃತಿಯಾಗಿದ್ದು ಗುರುವಾದವರು ಕೇವಲ ಗಣಿತದ ಸೂತ್ರಗಳನ್ನ,ವಿಜ್ಞಾನಗಳ ಪ್ರೋಗಗಳನ್ನು ತಿಳಿಸಿ,ಇತಿಹಾಸದ ಜತೆಗೆ ಬದುಕಿನ ಮೌಲ್ಯಗಳನ್ನು ಹಾಗೂ ಸಂಸ್ಕಾರಗಳನ್ನು ಶಿಷ್ಯರಿಗೆ ಧಾರೆಯರೆಯುವವರೇ ನಿಜವಾದ ಶಿಕ್ಷರು ಎಂದು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಬಿ.ಕೊಪ್ಪದ ಅಭಿಪ್ರಾಯಪಟ್ಟರು.
ಭಾನುವಾರ ಸ್ಥಳೀಯ ಮಾಡೆಲ್ ಹೈಸ್ಕೂಲ್ನ ೧೯೯೧-೯೨ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದ ಅವರು ಕಳೆದ ೩೪ ವರ್ಷಗಳ ಹಿಂದೆ ಕಲಿಸಿದ ಗುರುಗಳ ಸ್ಮರಣೆಯನ್ನು ಮಾಡುವ ಮೂಲಕ ಅಂದಿನ ಆಟ.ಪಾಠಗಳನ್ನು ನೆನೆದುಕೊಂಡು ಎಲ್ಲೋ ಇದ್ದವರು ಒಂದೆಡೆ ಸೇರಿ ಗುರುವಂದನೆ ಕಾರ್ಯಕ್ರಮ ನಡೆಸುವ ಮೂಲಕ ಮಾಡೆಲ್ ಹೈಸ್ಕೂಲ್ ವಿದ್ಯಾರ್ಥಿಗಳು ಇಂದಿನ ಪೀಳಿಗೆಗೆ ಮಾಡೆಲ್ ಆಗುತ್ತಿರುವುದು ಶ್ಲಾಘನೀಯ ಎಂದರು.
ಗುರುವAದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯೋದ್ಯಾಪಕ ಎಸ್.ಎಮ್.ಪಟ್ಟಣಶೆಟ್ಟಿ ೩೪ ವರ್ಷಗಳ ಹಿಂದಿನ ನೆನಪುಗಳನ್ನು ಮಲಕು ಹಾಕುತ್ತಾ ಶಿಕ್ಷಕರಾದ ನಾವು ವಿದ್ಯಾರ್ಥಿಗಳಿಗೆ ಎಷ್ಟರ ಮಟ್ಟಿಗೆ ಶಿಕ್ಷಣ ನೀಡಿದ್ದೇವೆಂಬುದನ್ನು ಆತ್ಮಾವಲೋಕನ ಮಾಡಿಕೊಂಡು ಶಿಕ್ಷಕರನ್ನು ಸ್ಮರಿಸಿ ಸತ್ಕರಿಸಲು ಮುಂದಾಗಿರುವ ವಿದ್ಯಾರ್ಥಿಗಳು ಗುರುಪರಂಪರೆಯನ್ನು ಎತ್ತಿ ಹಿಡಿಯುವ ಮೂಲಕ ತಮ್ಮ ಜೀವನದ ಭವೀಷ್ಯ ರೂಪಿಸಿಕೊಂಡಿರುವುದು ಶಿಕ್ಷಕರಲ್ಲಿ ಹೆಮ್ಮೆ ಮೂಡಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಡೆಲ್ ಹೈಸ್ಕೂಲ್ ಮುಖ್ಯೋದ್ಯಾಪಕ ಬಿ.ಎಮ್.ಮಾಕಣ್ಣವರ ಶತಮಾನಗಳ ಇತಿಹಾಸ ಹೊಂದಿರುವ ಈ ಮಾಡೆಲ್ ಹೈಸ್ಕೂಲನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೆಳೆದು ದೊಡ್ಡವರಾಗಿ ಶಾಲೆಯ ಅಭಿವೃದ್ಧಿ ಹಾಗೂ ಬಡ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕಾಗಿ ಈಗಲೂ ಶ್ರಮಿಸುವ ಮೂಲಕ ಕಲಿತ ಶಾಲೆಯ ಹೆಮ್ಮೆಯ ವಿದ್ಯಾರ್ಥಿಗಳಾಗಿದ್ದಾರೆಂದರು.
ನಿವೃತ್ತ ಶಿಕ್ಷರಾದ ವ್ಹಿ.ಎನ್.ಪದಕಿ, ಆರ್.ಬಿ.ಕಮತರ, ಗುರುಮಾತೆ ಎಸ್.ಡಿ.ಪಾಟೀಲ್ (ಗೋಸಾವಿ) ಎಸ್.ಎ.ಬಾರಕೇರ, ಎಸ್.ಬಿ.ತೋಟಿ, ಕೆ.ಜಿ.ಸದರಜೋಶಿ, ಸಿಬ್ಬಂದಿಗಳಾದ ಶಿವಪ್ಪ ಚುಳಕಿ, ಯಂಕಣ್ಣ ದೊಡ್ಡಮನಿ ಅವರನ್ನು ಸತ್ಕರಿಸಲಾಯಿತು.
ಕೆ.ನಾಗರಾಜ್ ವಿದ್ಯಾರ್ಥಿಗಳ ಪರವಾಗಿ ಅನಿಕೆಗಳನ್ನು ವ್ಯಕ್ತಪಡಿಸಿದರು. ವಿಕಾಸ ಸೊಪ್ಪಿನ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ. ಮಹೇಶ ಹಿರೇಮಠ, ಮಲ್ಲಿಕಾರ್ಜುನ ಧೂಳಪ್ಪನವರ, ಬಿ.ವಿ.ಮುದಿಗೌಡರ, ಎ.ಬಿ.ಹೊಂಗಲ, ನಾಗರಾಜ ಜೋಶಿ, ಗುರು ಅಡವಿ, ವಿಠಲ ಮೆಣಸಗಿ, ಶಿವಾನಂದ ಹೂಗಾರ, ಪರಾಗ ಭಿಡೆ, ಮುರಳಿಧರ ಹೆಗಡೆ, ರವಿ ಮುರಗೋಡ, ಮನು ಬಿಜಾಪುರ ಸೇರಿದಂತೆ ೧೯೯೧-೯೨ನೇ ಸಾಲಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಲ್ಲಿಕಾರ್ಜುನ ನಿಡವಣಿ,ಐ.ಎಂ.ನದಾಫ್ ನಿರೂಪಿಸಿದರು.ಹುಚ್ಚಪ್ಪ ಭೋವಿ ಪಿ.ಎಚ್.ಕೋನರಡ್ಡಿ ಸ್ವಾಗತಿಸಿದರು. ಬಸವರಾಜ ಕೊಟಗಿ ವಂದಿಸಿದರು.























