
ಬೀದರ: ಮಾ.13:ನಗರದ ಮಹಾದೇವ ಬಡಾವಣೆಯಲ್ಲಿರುವ ಧನರಾಜ ಸ್ವಾಮಿ ಅವರ ಅಂಜು-ಸದನ ನಿಲಯದಲ್ಲಿ ಅವರ ಧರ್ಮಪತ್ನಿ ಶಿವಕಾಂತಾ ಸ್ವಾಮಿ ಅವರು ತಮ್ಮ ಕೈತೋಟದಲ್ಲಿ ಗೆಣಸು ಬೆಳೆದು ಕೈತೋಟ ಬೆಳೆಗಾರರಿಗೆ ಮಾದರಿಯಾಗಿದ್ದಾರೆ.
ಸುಮಾರು ನಾಲ್ಕೈದು ತಿಂಗಳ ಹಿಂದೆ ಪೆÇ್ರ. ಎಸ್.ವಿ. ಕಲ್ಮಠ ಅವರ ಕುಮಾರ ಕೃಪಾ ಕೊವಿಡ್ ಗೆದ್ದವರ ಕೈತೋಟದಿಂದ ಗೆಣಸಿನ ಸಸಿಗಳನ್ನು ತಂದು ತಮ್ಮ ಮನೆಯ ಕೈತೋಟದಲ್ಲಿ ನೆಟ್ಟು ಪೆÇೀಷಣೆ ಮಾಡಿದ್ದಾಗಿ ಶಿವಕಾಂತಾ ಸ್ವಾಮಿ ತಿಳಿಸಿದ್ದಾರೆ. ಸಾವಯವ ಪದ್ಧತಿಯಲ್ಲಿ ಬೆಳೆದ ಈ ಗೆಣಸು ಬೆಳೆ ಉತ್ತಮವಾಗಿ ಬೆಳೆಯುವುದರಿಂದ ಕುಟುಂಬಕ್ಕೆ ಸಂತೋಷ ತಂದಿದೆ ಎಂದು ಅವರು ಹೇಳಿದ್ದಾರೆ.
ಪೆÇ್ರ. ಕಲ್ಮಠ ಅವರ ಮಾರ್ಗದರ್ಶನದಲ್ಲಿ ಕೈತೋಟದಲ್ಲಿ ಗೆಣಸು ಸೇರಿದಂತೆ ವಿವಿಧ ತರಕಾರಿ ಹಾಗೂ ಹೂವಿನ ಗಿಡಗಳನ್ನು ಬೆಳೆಸಲಾಗುತ್ತಿದೆ. ಸುಮಾರು 10 ರಿಂದ 15 ವರ್ಷಗಳಿಂದ ತಮ್ಮ ಮನೆಯ ಅಂಗಳದಲ್ಲಿ ಕೈತೋಟವನ್ನು ನಿರ್ವಹಿಸಿಕೊಂಡು ಬರುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ರೈತರು ತರಕಾರಿ ಬೆಳೆಗಳಿಗೆ ಅತಿಯಾಗಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ತರಕಾರಿಗಳ ಮೇಲೆ ನಡೆಸಿದ ಪರೀಕ್ಷೆಯಲ್ಲಿ 19 ತರಕಾರಿಗಳಲ್ಲಿ 17 ತರಕಾರಿಗಳಲ್ಲಿ ಮೊನೊಕ್ರೋಟೊಫಾಸ್ ಎಂಬ ವಿಷಪದಾರ್ಥ ಪತ್ತೆಯಾಗಿದೆ ಎಂಬ ವರದಿಯೂ ಇದೆ ಎಂದು ಹೇಳಿದರು.
ಆದ್ದರಿಂದ ನಗರ ನಿವಾಸಿಗಳು ತಮ್ಮ ಮನೆಯ ಅಂಗಳದಲ್ಲೇ ಕೈತೋಟ ಬೆಳೆಸಿ, ಆರೋಗ್ಯಕರ ತರಕಾರಿಗಳನ್ನು ತಿನ್ನುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಿವಕಾಂತಾ ಸ್ವಾಮಿ ಸಲಹೆ ನೀಡಿದ್ದಾರೆ.




















