Home ಜಿಲ್ಲೆ ಉತ್ತಮ ಕಾವ್ಯದಿಂದ ಸಮಾಜದ ಪ್ರಗತಿ ಸಾಧ್ಯ:ಸಾಹಿತಿ ಪ್ರೊ. ಎ. ಎಚ್. ಕೊಳಮಲಿ

ಉತ್ತಮ ಕಾವ್ಯದಿಂದ ಸಮಾಜದ ಪ್ರಗತಿ ಸಾಧ್ಯ:ಸಾಹಿತಿ ಪ್ರೊ. ಎ. ಎಚ್. ಕೊಳಮಲಿ

ಸಂಜೆವಾಣಿ ವಾರ್ತೆ,
ವಿಜಯಪುರ, ಏ. ೧೪:ಯುವ ಕವಿಗಳು ಹೆಚ್ಚು ಓದಿನತ್ತ ಒಲವು ತೋರಿಸಬೇಕು. ಶ್ರೇಷ್ಠ ಸಾಹಿತಿಗಳ ಕಥೆ, ಕಾದಂಬರಿ, ಸಾಹಿತ್ಯ ಕೃತಿಗಳನ್ನು ಓದಿದಾಗ ಜ್ಞಾನ ವೃದ್ಧಿಗೊಂಡು ಗಟ್ಟಿತನದ ಸಾಹಿತ್ಯವನ್ನು ರಚಿಸಲು ಸಾಧ್ಯ, ಕಾವ್ಯಕ್ಕೆ ಅದ್ಭುತವಾದ ಶಕ್ತಿಯಿದೆ. ಉತ್ತಮ ಕಾವ್ಯದಿಂದ ಸಮಾಜದ ಪ್ರಗತಿ ಸಾಧ್ಯ ಎಂದು ಸಾಹಿತಿ ಪ್ರೊ ಎ. ಎಚ್. ಕೊಳಮಲಿ ಹೇಳಿದರು.
ರವಿವಾರ ಸಂಜೆ ದರ್ಬಾರ ಹೈಸ್ಕೂಲ್ ಮೈದಾನದಲ್ಲಿ ವಿಜಯಪುರ ಸಾಹಿತ್ಯ ಬಳಗ ಹಾಗೂ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ನಡೆದ ಬುದ್ಧ, ಬಸವ, ಅಂಬೇಡ್ಕರ ಪುಸ್ತಕ ಮೇಳದಲ್ಲಿ ಯುವ ಕವಿಗೋಷ್ಠಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಬುದ್ಧ, ಬಸವ, ಅಂಬೇಡ್ಕರ್ ಅವರು ಈ ದೇಶದ ಅಮೂಲ್ಯ ರತ್ನಗಳು. ದೇಶಕ್ಕೆ ಅವರ ಕೊಡುಗೆ ಅಪಾರ. ಅವರ ವಿಚಾರಧಾರೆಗಳು ಮನುಕುಲವನ್ನು ಉದ್ಧಾರ ಮಾಡಿವೆ. ಯುವ ಪೀಳಿಗೆ ಹೆಚ್ಚೆಚ್ಚು ದೇಶದ ಮಹಾನ ಚೇತನರ ಚರಿತ್ರೆಯನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಬದುಕನ್ನು ಕಟ್ಟಿಕೊಡುವ ಸಾಹಿತ್ಯವನ್ನು ರಚಿಸುವಂತಹ ಕವಿಗಳ ಸಂಖ್ಯೆ ಹೆಚ್ಚಾಗಬೇಕೆಂದು ಹೇಳಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ ಪತ್ರಕರ್ತ ಪರಶುರಾಮ ಶಿವಶರಣ ಮಾತನಾಡಿ, ಸಾಹಿತ್ಯ ಎಂದೆAದಿಗೂ ಸ್ವರಗದೇ ಇರುವ ಸಂಪತ್ತು. ಜಗತ್ತಿನ ಭವಿಷ್ಯ ಯುವಕರ ಮೇಲೆ ನಿಂತಿದೆ. ಯುವಕರು ಸೃಜನಶೀಲ ಸಾಹಿತ್ಯವನ್ನು ರಚಿಸಬೇಕೆಂದು ಹೇಳಿದರು.
ಉದಯೋನ್ಮುಖ ಕವಿಗಳಾದ, ಲಾಯಪ್ಪ ಇಂಗಳೆ, ಕಲ್ಲು ಶಿವಶರಣ, ಭರತ ಕುಮಾರ ಸೇರಿದಂತೆ ೧೫ ಕ್ಕೂ ಹೆಚ್ಚು ಕವಿಗಳು ಕವನವನ್ನು ವಾಚಿಸುವದರ ಮುಖೇನ ಸಮಾಜದ ಅವ್ಯವಸ್ಥೆಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಸವರಾಜ ಸೂಳಿಬಾವಿ, ಅನಿಲ್ ಹೊಸಮನಿ, ಚನ್ನು ಕಟ್ಟಿಮನಿ, ವೈ. ಎಸ್. ಗುಣಕಿ, ಸಂಘರ್ಷ ಹೊಸಮನಿ, ಸುರೇಶ ಬಿಜಾಪುರ, ಶಿವು ಕಟ್ಟಿಮನಿ, ಕಾಶಿನಾಥ ಕೆ, ಭೋಗೇಶ ಸೋಲಾಪುರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.