Home ಮುಖಪುಟ ಸುದ್ದಿ ಜಿಬಿಎ ಚುನಾವಣೆಗೆ ಮತ್ತೆ ವಿಘ್ನ ೩ ತಿಂಗಳು ಮುಂದೂಡಿಕೆಗೆ ಮನವಿ

ಜಿಬಿಎ ಚುನಾವಣೆಗೆ ಮತ್ತೆ ವಿಘ್ನ ೩ ತಿಂಗಳು ಮುಂದೂಡಿಕೆಗೆ ಮನವಿ

ಮಹೇಶ್. ಸಿ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗಳು ಗರಿಗೆದರಿರುವ ಬೆನ್ನಲ್ಲೇ ಇದೀಗ ಮುಂದೂಡುವಿಕೆಯ ವಿಘ್ನ ಎದುರಾಗಿದೆ.
ಸರ್ಕಾರ ಜಿಬಿಎ ಐದೂನಗರ ಪಾಲಿಕೆ ಸೃಜಿಸಿ ವಾರ್ಡ್ ಪಟ್ಟಿ ಅಂತಿಮಗೊಳಿಸಿ, ಸಮುದಾಯವಾರು ಮೀಸತಿ ಹಂಚಿಕೆ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಲ್ಲಿ ಹುರುಪು ತಂದಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಕಾರ್ಪೊರೇಟ್ ಸೇರಿದಂತೆ ಹುರಿಯಾಳಗಳು ವಾರ್ಡ್ ವಾರು ಚುನಾವಣಾ ತಯಾರಿ ನಡೆಸಿದ್ದಾರೆ.

ಆದರೆ ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಯನ್ನು ಮತ್ತಷ್ಟು ದಿನ ಮುಂದೂಡುವ ಸಾಧ್ಯತೆ ಎದುರಾಗಿದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಜನಗಣತಿ ಚುನಾವಣೆಗೆ ಅಡ್ಡಿಯಾಗಿ ನಿಂತಿದೆ.
ಈಗಾಗಲೇ ರಾಷ್ಟ್ರೀಯ ಜನಗಣತಿಗೆ ಜಿಬಿಎ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಜಿಬಿಎ ಚುನಾವಣಾ ಕಾರ್ಯಗಳ ಕಾರ್ಯಕ್ಕೆ ಸಿಬ್ಬಂದಿ ಕೊರತೆ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಜಿಬಿಎ ಚುನಾವಣೆಯನ್ನು ಮೂರು ತಿಂಗಳು ಮುಂದೂಡಲು ಗ್ರೇಟರ್ ಬೆಂಗಳೂರು ನಗರ ಪಾಲಿಕೆಯ ಹಿರಿಯ ಅಧಿಕಾರಿಗಳು ಸರ್ಕಾರಕ್ಕೆ ಮನವರಿಕೆ ಮಾಡಲು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಮೂರು ತಿಂಗಳು ಮಂದೂಡಿಕೆಗೆ ಮನವಿ:


ಈಗಾಗಲೇ ಸುಪ್ರೀಂ ಕೋರ್ಟ್ ಜೂನ್ -೩೦ ರ ಒಳಗೆ ಜಿಬಿಎನ ಐದೂ ನಗರ ಪಾಲಿಕೆ ಚುನಾವಣೆ ನಡೆಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಆದರೆ ಈಗ ಕೇಂದ್ರ ಜನಗಣತಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸುವುದು ಕಷ್ಟಕರವಾಗಲಿದೆ.
ಇದನ್ನೂ ಮೀರಿ, ವಾರ್ಡ್‌ಗಳ ಗಡಿ ಗುರುತಿಸುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಹೆಚ್ಚಿನ ಕಾಲಾವಕಾಶ ಅಗತ್ಯವಿರುವುದರಿಂದ ಕನಿಷ್ಠ ಮೂರು ತಿಂಗಳು ಮುಂದೂಡುವಂತೆ ಸರ್ಕಾರಕ್ಕೆ ಜಿಬಿಎ ಅಧಿಕಾರಿಗಳು ಮನವಿ ಮಾಡುವ ನಿರೀಕ್ಷೆಯಿದೆ.

ನಗರಾಭಿವೃದ್ಧಿ ಇಲಾಖೆಗೆ ಪತ್ರ:


ಚುನಾವಣೆ ಮುಂದೂಡಿಕೆ ವಿಚಾರವಾಗಿ ಜಿಬಿಎ ಮುಖ್ಯ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು, ಚುನಾವಣೆಯನ್ನು ಕನಿಷ್ಠ ಎರಡು ರಿಂದ ಮೂರು ತಿಂಗಳುಗಳ ಕಾಲ ಮುಂದೂಡಲು ಅನುಮತಿ ಕೋರುವ ಸಾಧ್ಯತೆ ಇದೆ ಎಂದು ಜಿಬಿಎ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಅಗಸ್ಟ್ ಅಂತ್ಯದೊಳಗೆ ಚುನಾವಣೆ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಜೂನ್ ಒಳಗೆ ಚುನಾವಣೆ ನಡೆಸಲು ಸುಪ್ರೀಂ ಸೂಚಿಸಿತ್ತು.
ಸುಪ್ರೀಂ ಕೋರ್ಟ್ ಕೂಡ ಜೂನ್ ೩೦ ರೊಳಗೆ ಜಿಬಿಎ ವ್ಯಾಪ್ತಿಯ ೫ ನಗರಪಾಲಿಕೆ ಗಳಿಗೆ ಚುನಾವಣೆ ನಡೆಸಿ ಅಂತಿಮ ವರದಿ ಸಲ್ಲಿಸುವಂತೆ ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಿಬಿಎ ಚುನಾವಣೆಗೆ ಪೂರ್ವ ತಯಾರು ನಡೆಸಿ ೫ ನಗರಪಾಲಿಕೆ ಗಳಿಗೆ ನಗರಪಾಲಿಕೆ ಅಯುಕ್ತರನ್ನು ಚುನಾವಣೆ ಮುಖ್ಯಸ್ಥರನ್ನಾಗಿ ಮಾಡಿ ಮತದಾರರ ಪಟ್ಟಿ ತಯಾರಿಸಲು ಸೂಚನೆ ನೀಡಿತ್ತು.

೩೬೯ ವಾರ್ಡ್ ಗಳ ರಚನೆ ಮಾಡಿದ್ದ ನಗರಾಭಿವೃದ್ಧಿ ಇಲಾಖೆ
ಈ ಹಿಂದೆ ೨೨೫ ವಾರ್ಡ್‌ಗಳನ್ನು ೩೬೯ ವಾರ್ಡ್‌ಗಳಾಗುವ ವಿಂಗಡಣೆ ಮಾಡಿ ಕೆಲ ವಾರ್ಡ್‌ಗಳ ಹೆಸರು ಬದಲಾವಣೆ ಮಾಡಿ ಕರಡು ಪ್ರತಿಯನ್ನು ಬಿಡುಗಡೆ ಮಾಡಿತ್ತು. ಸಾರ್ವಜನಿಕರ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿತ್ತು. ಇನ್ನೂ ವಾರ್ಡ್ ವಿಂಗಡಣೆ ವೇಳೆ ಅನೇಕ ಸಲಹೆ. ಲೋಪಗಳ ಬಗ್ಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಿದರು.
ಆಕ್ಷೇಪಣೆಗಳನ್ನು ಕ್ರೂಢೀಕರಿಸಿ ಸರ್ಕಾರ ಕೆಲ ವಾರ್ಡ್‌ಗಳ ಹೆಸರು ಬದಲಾವಣೆ ಮಾಡಿತ್ತು . ಕೆಲ ವಾರ್ಡ್‌ಗಳನ್ನು ಕ್ಷೇತ್ರವಾರು ವಿಂಗಡಣೆ ನಡೆಸಿ ಅಂತಿಮ ವಾರ್ಡ್ ವಿಂಗಡಣೆ ಪಟ್ಟಿ ಬಿಡುಗಡೆ ಮಾಡಿತು. ಇನ್ನೂ ವಾರ್ಡ್ ವಿಂಗಡಣೆ ನಂತರ ಮೀಸಲಾತಿ ಪಟ್ಟಿಯನ್ನು ಸಿದ್ದ ಮಾಡಿ ಕರಡು ಪಟ್ಟಿಯನ್ನು ಕಳೆದ ತಿಂಗಳು ಬಿಡುಗಡೆ ಮಾಡಿ ಸಾರ್ವಜನಿಕರ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿತ್ತು.ಮೀಸಲಾತಿ ಪಟ್ಟಿಯಲ್ಲಿ ಅನೇಕ ಲೋಪಗಳು ಕಂಡು ಬಂದಿದ್ದು .ಕೆಲ ವಾರ್ಡ್‌ಗಲ್ಲಿ ಮೀಸಲಾತಿ ಬದಲಾವಣೆ ಮಾಡಲು ಅನೇಕ ಆಕ್ಷೇಪಣೆಗಳು ಬಂದಿದವು.ಇತ್ತ ಬಂದಂತಹ ಆಕ್ಷೇಪಣೆಗಳನ್ನು ಸರಿದೂಗಿಸಿ ಅಂತಿಮ ಮೀಸಲಾತಿ ಪಟ್ಟಿ ಯನ್ನು ಬಿಡುಗಡೆ ಮಾಡಿ.ಜಿಬಿಎ ಚುನಾವಣೆಗೆ ಸಿದ್ಧತೆ ಕೈಗೊಳ್ಳಲು ೫ ನಗರಪಾಲಿಕೆ ಅಯುಕ್ತರಿಗೆ ಸೂಚನೆ ನೀಡಿತ್ತು..