
ಲಕ್ಷ್ಮೇಶ್ವರ,ಮಾ11: ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಯಾರೋ ಅಪರಿಚಿತರು ಜಮೀನಿನ ಕಸಕ್ಕೆ ಬೆಂಕಿ ಹಚ್ಚಿದ್ದು ಬೀಸುತ್ತಿದ್ದ ಗಾಳಿಯಿಂದ ಅಕ್ಕಪಕ್ಕದ ಜಮೀನುಗಳಿಗೂ ಹಬ್ಬಿ ರೈತರು ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ಹೊಟ್ಟು ಮೇವು ಮತ್ತು ನೀರಾವರಿ ಸ್ಪಿಂಕ್ಲರ್ಗಳು ಬೆಂಕಿಗೆ ಆಹುತಿಯಾಗಿವೆ.
ಸುದ್ದಿ ತಿಳಿಯುತ್ತಿದ್ದಂತೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಸಾಹಸಪಟ್ಟು ಸ್ಥಳೀಯರ ಸಹಕಾರದೊಂದಿಗೆ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ಆಗ್ರಹ ಃ ಬೆಂಕಿಯಲ್ಲಿ ಐದಾರು ರೈತರ ಜಮೀನುಗಳಲ್ಲಿನ ನೀರಾವರಿ ಪರಿಕರಗಳು, ಮೇವು, ಕಡಲೆ, ಶೇಂಗಾ, ಗೋವಿನ ಜೋಳದ ಹೊಟ್ಟು ಸುಟ್ಟು ಕರಕಲಾಗಿದ್ದು ಹಾನಿಗಿಡಾದ ರೈತರಿಗೆ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.






















