
ನವದೆಹಲಿ,ಮೇ.೩೧-ಪಶ್ಚಿಮ ಏಷ್ಯಾದಲ್ಲಿ (ಮಧ್ಯಪ್ರಾಚ್ಯ) ಮುಂದುವರಿದಿರುವ ಉದ್ವಿಗ್ನತೆಯ ನಡುವೆಯೇ, ಕೇಂದ್ರ ಸರ್ಕಾರವು ದೇಶೀಯ ರಫ್ತುದಾರರಿಗೆ ಬಿಗ್ ರಿಲೀಫ್ ನೀಡಿದೆ. ಪೆಟ್ರೋಲ್, ಡೀಸೆಲ್ ಹಾಗೂ ವಿಮಾನ ಇಂಧನ ಮೇಲಿನ ರಫ್ತು ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಿ ಆದೇಶ ಹೊರಡಿಸಿದೆ.
ಈ ಪರಿಷ್ಕೃತ ದರಗಳು ಜೂನ್ ೧, ೨೦೨೬ ರಿಂದಲೇ ಜಾರಿಗೆ ಬರಲಿವೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.ಪ್ರತಿ ಹದಿನೈದು ದಿನಗಳಿಗೊಮ್ಮೆ ನಡೆಯುವ ಜಾಗತಿಕ ತೈಲ ಬೆಲೆಗಳ ಪರಾಮರ್ಶೆ ಸಭೆಯ ಬಳಿಕ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪೆಟ್ರೋಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ ೩ ರೂಪಾಯಿಯಿಂದ ೧.೫ ರೂಪಾಯಿಗೆ ಇಳಿಸಲಾಗಿದೆ.
ಅದೇ ರೀತಿ, ಡೀಸೆಲ್ ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್ಗೆ ೧೬.೫ ರೂಪಾಯಿಯಿಂದ ೧೩.೫ ರೂಪಾಯಿಗೆ ಹಾಗೂ ವಿಮಾನ ಇಂಧನ (ಂಖಿಈ) ಮೇಲಿನ ಸುಂಕವನ್ನು ಲೀಟರ್ಗೆ ೧೬ ರೂಪಾಯಿಯಿಂದ ೯.೫ ರೂಪಾಯಿಗೆ ಕಡಿತಗೊಳಿಸಲಾಗಿದೆ. ದೇಶೀಯ ದರಗಳಲ್ಲಿ ಬದಲಾವಣೆ ಇಲ್ಲರಫ್ತು ಸುಂಕವನ್ನು ಕಡಿತಗೊಳಿಸಲಾಗಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಸಾರ್ವಜನಿಕರ ಬಳಕೆಗೆ ಮಾರಾಟವಾಗುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಹೀಗಾಗಿ ಸದ್ಯಕ್ಕೆ ಸ್ಥಳೀಯವಾಗಿ ಇಂಧನ ಬೆಲೆ ಇಳಿಕೆಯಾಗುವ ಸಾಧ್ಯತೆಯಿಲ್ಲ.ಡೀಸೆಲ್ ರಫ್ತು ಶೇ. ೨೦ ರಷ್ಟು ಏರಿಕೆಇರಾನ್ ಮತ್ತು ಅಮೆರಿಕ ನಡುವಿನ ಬಿಕ್ಕಟ್ಟಿನಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್ಗಿಂತ ಡೀಸೆಲ್ ಮೇಲಿನ ಲಾಭದ ಪ್ರಮಾಣ ಹೆಚ್ಚಿರುವುದರಿಂದ ಭಾರತದ ತೈಲ ಶುದ್ಧೀಕರಣ ಸಂಸ್ಥೆಗಳು ಡೀಸೆಲ್ ರಫ್ತಿಗೆ ಹೆಚ್ಚಿನ ಆದ್ಯತೆ ನೀಡಿವೆ.
ಕಳೆದ ಮಾರ್ಚ್ ತಿಂಗಳೊಂದರಲ್ಲೇ ಭಾರತದ ಡೀಸೆಲ್ ರಫ್ತು ಶೇಕಡಾ ೨೦ ರಷ್ಟು ಜಿಗಿತ ಕಂಡಿದ್ದು, ಒಟ್ಟು ೧೨.೯೦ ಮಿಲಿಯನ್ ಬ್ಯಾರೆಲ್ಗಳಿಗೆ ತಲುಪಿದೆ. ಇದೇ ಅವಧಿಯಲ್ಲಿ ಪೆಟ್ರೋಲ್ ರಫ್ತು ಪ್ರಮಾಣದಲ್ಲಿ ಶೇಕಡಾ ೩೩ ರಷ್ಟು ಕುಸಿತ ದಾಖಲಾಗಿದೆ.ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಕೊರತೆಯಾಗದಂತೆ ತಡೆಯಲು ಸರ್ಕಾರ ಈ ವರ್ಷದ ಮಾರ್ಚ್ ೨೭ ರಂದು ಮೊದಲ ಬಾರಿಗೆ ಈ ರಫ್ತು ಸುಂಕವನ್ನು ವಿಧಿಸಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಇಂಧನಗಳ ಸರಾಸರಿ ಬೆಲೆಯನ್ನು ಆಧರಿಸಿ ಈ ಸುಂಕವನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ.




























