
ಬೆಂಗಳೂರು, ಜು.೧೦- ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ನಗರ ಪ್ರದಕ್ಷಿಣೆ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ವಿವಿಧ ಪ್ರಮುಖ ಪ್ರದೇಶಗಳಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಹಾಗೂ ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಬೆಳಗಾವಿಯಿಂದ ನೇರವಾಗಿ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಅಲ್ಲಿಂದಲೇ ನಗರ ಸುತ್ತಾಟ ಆರಂಭಿಸಿದರು. ಮೊದಲಿಗೆ ಹೆಚ್‌ಎಎಲ್ ಮುಂಭಾಗದ ಫುಟ್‌ಪಾತ್ ಕಾಮಗಾರಿಯನ್ನು ವೀಕ್ಷಿಸಿದ ಅವರು, ಬಳಿಕ ದೊಡ್ಡನೆಕ್ಕುಂದಿ ಮೆಟ್ರೊ ಪಿಲ್ಲರ್ ಕೆಳಭಾಗದ ರಸ್ತೆ ಹಾಗೂ ದೊಡ್ಡನೆಕ್ಕುಂದಿ ರಸ್ತೆಯ ಫುಟ್‌ಪಾತ್‌ಗಳ ಸ್ಥಿತಿಯನ್ನು ಪರಿಶೀಲಿಸಿದರು.
ನಂತರ ಔಟರ್ ರಿಂಗ್ ರೋಡ್‌ನ ಬೆಳ್ಳಂದೂರಿನಿಂದ ಇಬ್ಲೂರು ಜಂಕ್ಷನ್‌ವರೆಗೆ ನಿರ್ಮಿಸಿರುವ ಪಾದಚಾರಿ ಮಾರ್ಗವನ್ನು ವೀಕ್ಷಿಸಿದ ಮುಖ್ಯಮಂತ್ರಿ, ಇದೇ ಮಾದರಿಯಲ್ಲಿ ನಗರದ ಇತರೆ ಫುಟ್‌ಪಾತ್‌ಗಳನ್ನೂ ಅಭಿವೃದ್ಧಿಪಡಿಸಿ ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಹೆಚ್‌ಎಸ್‌ಆರ್ ಲೇಔಟ್‌ಗೆ ತೆರಳಿದ ವೇಳೆ ಕಾರ್ಯಕರ್ತರು ಮುಖ್ಯಮಂತ್ರಿಗೆ ಹೂಮಾಲೆ ಹಾಕಿ ಸ್ವಾಗತಿಸಿದರು. ಅಲ್ಲಿಯೂ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಪಾದಚಾರಿ ಮಾರ್ಗಗಳ ನಿರ್ವಹಣೆಯನ್ನು ಪರಿಶೀಲಿಸಿದರು.
ಮುಖ್ಯಮಂತ್ರಿಯವರೊಂದಿಗೆ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೇರಿದಂತೆ ಜಿಬಿಎ ಅಧಿಕಾರಿಗಳು ಉಪಸ್ಥಿತರಿದ್ದರು.
ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಕೆಲ ಬೀದಿಬದಿ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದ ಮುಖ್ಯಮಂತ್ರಿ, ಪಾದಚಾರಿಗಳ ಸುರಕ್ಷತೆಗೆ ಆದ್ಯತೆ ನೀಡುವುದರ ಜೊತೆಗೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಂತರ ನಂದಿನಿ ಸರ್ಕಲ್ ಬಳಿ ಕೆಂಪೇಗೌಡ ಪುತ್ಥಳಿ.ಯೋಗಿ ವೇಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಸಿಎಂ.ನೇರವಾಗಿ ಬೊಮ್ಮನಹಳ್ಳಿಗೆ ತೆರಳಿದರು.
ಅಲ್ಲಿ ಉಮಾಪತಿಗೌಡ ನೇತೃತ್ವದಲ್ಲಿ ಕಾರ್ಯರ್ತರಿಂದ ಸಿಎಂಗೆ ಸ್ವಾಗತ ಮಾಡಿದರು..ಅಲ್ಲಿ ಕೂಡ ಪುಟ್ ಪಾತ್ ತೆರವು ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪಾದಚಾರಿ ಮಾರ್ಗ ಸ್ವಚ್ಚತೆ ಕಾಪಾಡಲು ಸೂಚನೆ ನೀಡಿದರು.ಅಲ್ಲಿಂದ ಜಯನಗರ.ಅಶೋಕ ಫೀಲರ್ ಬಳಿ ಒತ್ತುವರಿ ತೆರವು ಕಾರ್ಯ ವೀಕ್ಷಣೆ ನಡೆಸಿ.ಮೆಜೆಸ್ಟಿಕ್ ನ ಧನ್ವಂತರಿ ರಸ್ತೆ.ಮಲ್ಲೇಶ್ವರ ಮುಖ್ಯ ರಸ್ತೆಗಳನ್ನು ವೀಕ್ಷಣೆ ನಡೆಸಿ. ಮುಂದಿನ ದಿನಗಳಲ್ಲಿ ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ನಡೆಸುವ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟರು.
































