Home ಜಿಲ್ಲೆ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಿ

ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಿ

ಲಕ್ಷೆ÷್ಮÃಶ್ವರ,ಮೇ೨೯: ಪಟ್ಟಣ ಹೊಸ ಬಸ್ ನಿಲ್ದಾಣದ ಎದುರಿಗಿರುವ ಪುರಸಭೆಯ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆಯ ವಾಣಿಜ್ಯ ಸಂಕಿರಣ ಸೇರಿದಂತೆ ಖಾಸಗಿ ಕಟ್ಟಡಗಳ ಮೇಲೆ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಕಟ್ಟಲಾಗುತ್ತಿದೆ.


ಆದರೆ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ನಿರ್ದೇಶನಾದಂತೆ ಯಾವುದೇ ಫ್ಲೆಕ್ಸ್ ಮತ್ತು ಬ್ಯಾನರ್ ಕಟ್ಟಲು ಪುರಸಭೆಯ ಅನುಮತಿಯೊಂದಿಗೆ ನಿರ್ದಿಷ್ಟ ಶುಲ್ಕ ಪಾವತಿಸಿ ನಂತರ ಅದನ್ನು ತೆಗೆದು ಹಾಕಬೇಕಾಗುತ್ತದೆ.


ಆದರೆ ಹಾಕಿರುವ ಫ್ಲೆಕ್ಸ್ ಮತ್ತು ಬ್ಯಾನರ್ಗಳು ಛಿದ್ರವಾದರೂ ಅವುಗಳನ್ನು ಪುರಸಭೆಯವರಾಗಲಿ ಅಥವಾ ಜಾಹಿರಾತುದಾರರಾಗಲಿ ತೆಗೆದು ಹಾಕುವುದಿಲ್ಲ.


ನಿನ್ನೆ ಸಂಜೆ ಏಕಾಏಕಿ ಬೃಹತ್ ಬ್ಯಾನರ್ ಒಂದು ಬೀಸಿದ ಗಾಳಿಗೆ ಹಾರಿ ವಿದ್ಯುತ್ ತಂತಿಗಳ ಮೇಲೆ ಬೀಳುತ್ತಿದ್ದಂತೆ ಭಾರಿ ಶಬ್ದದೊಂದಿಗೆ ವಿದ್ಯುತ್ ಕೈಕೊಟ್ಟಿದ್ದು, ಇನ್ನಾದರೂ ಪುರಸಭೆಯವರು ಭಾರಿ ಗಾಳಿ ಮಳೆಗೆ ಅವಘಡಗಳು ಸಂಭವಿಸಿ ಸಾವು ನೋವು ಸಂಭವಿಸುವ ಮೊದಲೇ ಇಂಥವುಗಳನ್ನು ತೆರವು ಗೊಳಿಸಬೇಕು ಯುವ ಮುಖಂಡ ಯಲ್ಲಪ್ಪ ಹಂಜಗಿ ಪುರಸಭೆಗೆ ಒತ್ತಾಯಿಸಿದ್ದಾರೆ.