
ಭಾಲ್ಕಿ:ಮೇ.2:ತಾಲ್ಲೂಕಿನ ಹಾಲಹಳ್ಳಿ (ಕೆ) ಸಮೀಪ ಗುರುವಾರ ತೆಲಂಗಾಣಕ್ಕೆ ಕಳಕಿ ಹೊತ್ತೊಯ್ಯುತ್ತಿದ್ದ ಲಾರಿಗೆ ವಿದ್ಯುತ್ ಕಂಬಗಳ ತಂತಿ ತಗಲಿದ ಪರಿಣಾಮ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ತಗುಲಿದೆ.
ಕಳಕಿಗೆ ಬೆಂಕಿ ಹೊತ್ತಿಕೊಂಡ ವಿಷಯವನ್ನು
ಲಾರಿ ಚಾಲಕನಿಗೆ ಪ್ರತ್ಯಕ್ಷದರ್ಶಿಗಳು ಮತ್ತು ಲಾರಿಯ ಹಿಂದುಗಡೆ ಬರುತ್ತಿದ್ದ ವಾಹನ ಚಾಲಕರು, ಬೈಕ್ ಸವಾರರು ಮಾಹಿತಿ ನೀಡಿದ್ದಾರೆ.
ತಕ್ಷಣವೇ ಎಚ್ಚೆತ್ತುಕೊಂಡ ಚಾಲಕ ಲಾರಿಯನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದಾನೆ. ನಂತರ ಜೆಸಿಬಿ ಸಹಾಯದಿಂದ ಲಾರಿಯಲ್ಲಿದ್ದ ಜೋಳದ ಕಳಕಿಯನ್ನು ಲಾರಿಯಿಂದ ಹೊರ ತೆಗೆಯಲಾಯಿತು. ಈ ದುರ್ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಲಾರಿಯ ಕೆಲ ಭಾಗ ಸುಟ್ಟಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಮಾಹಿತಿಯನ್ನು ಅರಿತು ಕೂಡಲೇ ಸ್ಥಳಕ್ಕೆ ಆಗಮಿಸಿದ ಬೀದರ್ ಅಗ್ನಿಶಾಮಕ ಠಾಣಾಧಿಕಾರಿ ನವೀನ ಮತ್ತು ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.






















