Home ಜಿಲ್ಲೆ ಬೆಂಕಿ: ಬಣವೆ ಭಸ್ಮ

ಬೆಂಕಿ: ಬಣವೆ ಭಸ್ಮ

ನವಲಗುಂದ,ಏ6 : ಪಟ್ಟಣದ ನೀಲಮ್ಮನ ಜಲಾಶಯ ಬಿಳಿ ಇರುವ ಮೇವು ಹಾಗೂ ಹೊಟ್ಟಿನ ಬಣವಿ ಸುಟ್ಟು ಕರಕಲಾದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಸ್ಥಳೀಯ ಸಿದ್ದಾಪುರ ಓಣಿಯ ನಿವಾಸಿ ಪಕ್ಕೀರಪ್ಪ ಗುರಪ್ಪ ಗಡ್ಡಿಯವರು ನೀಲಮ್ಮನ ಜಲಾಶಯದ ಬದುವಿನಲ್ಲಿರುವ ಬಣವಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಆರು ಟ್ರಿಪ್‍ಗಳಷ್ಟು ಮೇವು ಹಾಗೂ ಹೊಟ್ಟಿನ ಬಣವವಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಾಯದಿಂದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

ಮಾಜಿ ಪುರಸಭಾ ಸದಸ್ಯ ಶಂಕ್ರಪ್ಪ ತೋಟದ ಮಾತನಾಡಿ, `ಜಾನುವಾರುಗಳಿಗೆ ಸಂಗ್ರಹಿಸಿಟ್ಟಿದ್ದ ಬಡ ರೈತನ ಜೋಳದ ಬಣವೆ ಸಂಪೂರ್ಣವಾಗಿ ಸುಟ್ಟು ಹೋಗಿರುವುದು ದುಃಖಕರ ಸಂಗತಿ. ಸರ್ಕಾರವು ಶೀಘ್ರವೇ ಸೂಕ್ತ ಪರಿಹಾರವನ್ನು ನೀಡಬೇಕು’ ಎಂದು ಆಗ್ರಹಿಸಿದರು.

ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಮುತ್ತು ಚಿಕ್ಕನರಗುಂದ ಅವರು ಸ್ಥಳಕ್ಕೆ ಭೇಟಿ ನೀಡಿ ತಹಶೀಲ್ದಾರ ಸುಧೀರ ಸಾಹುಕಾರ ಅವರ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.