
ಲಕ್ಷೆö್ಮÃಶ್ವರ,ಏ.೮: ಪಟ್ಟಣದ ಉಳ್ಳಟ್ಟಿ ರಸ್ತೆಗೆ ಹೊಂದಿಕೊAಡಿರುವ ಜಮೀನಿನಲ್ಲಿ ಹೊಟ್ಟಿನ ಬಣವಿ, ತಗಡಿನ ಶೆಡ್ಡಿಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದ ಘಟನೆ ಮಂಗಳವಾರ ನಡೆದಿದೆ.
ಪಟ್ಟಣದ ನಾಗಪ್ಪ ತಿಪ್ಪಣ್ಣ ಇಚ್ಚಂಗಿ ಅವರು ತಮ್ಮ ಜಮೀನಿನಲ್ಲಿ ಈ ವರ್ಷದಿಂದ ಹೈನುಗಾರಿಕೆ ಮಾಡಲು ಲಕ್ಷಾಂತರ ರೂ ಖರ್ಚು ಮಾಡಿ ಬೋರ್ವೆಲ್ ಹಾಕಿ, ತಗಡಿನ ಶೆಡ್ ನಿರ್ಮಿಸಿ ೪ ಟ್ರಾö್ಯಕ್ಟರ್ ಹೊಟ್ಟು ಸಂಗ್ರಹಿಸಿದ್ದರು. ಯಾರೋ ಕಿಡಗೇಡಿಗಳು ಹೊತ್ತಿಸಿದ ಕಿಡಿಯಿಂದ ಬೋರ್ವೆಲ್ ವೈಯರ್, ಹೊಟ್ಟು, ಶೆಡ್ಡು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸುವಷ್ಟರಲ್ಲಾಗಲೇ ಎಲ್ಲವೂ ಬೂದಿಯಾಗಿತ್ತು.
ಹೊರ ವಲಯದಲ್ಲಿ ಹಗಲು ಹೊತ್ತಲ್ಲೇ ಹೆಚ್ಚುತ್ತಿರುವ ಸಿಗರೇಟು, ಗಾಂಜಾ, ಮದ್ಯದ ವ್ಯಸನಿಗಳಿಂದ ಬೇಸಿಗೆಯಲ್ಲಿ ಇಂತಹ ಘಟನೆಗಳಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಇಂತಹ ಅನೇಕ ದುರ್ಘಟನೆಗಳು ನಡೆದಿವೆ. ನಷ್ಟಕ್ಕೊಳಗಾದ ಬಡ ರೈತನಿಗೆ ಸರ್ಕಾರದಿಂದ ಪರಿಹಾರಧನ ಕಲ್ಪಿಸುವ ನಿಟ್ಟಿನಲ್ಲಿ ಸಂಬAಧಪಟ್ಟ ಇಲಾಖೆಯವರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ರೈತ ಮುಖಂಡ ವಿರೂಪಾಕ್ಷ ಆದಿ ಆಗ್ರಹಿಸಿದ್ದಾರೆ.






















