
ಲಕ್ಷ್ಮೇಶ್ವರ,ಮಾ1: ತಾಲೂಕಿನಲ್ಲಿ ಹಿಂಗಾರಿನ ಪ್ರಮುಖ ವಾಣಿಜ್ಯ ಬೆಳೆಯಾದ ಕಡಲೆ ಉತ್ಪನ್ನ ಈಗ ಬಂದಿದ್ದು ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಸ್ಥಾಪನೆ ಮಾಡಿದ್ದು ಆದರೆ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ರೈತರು ನಿರಾಸಕ್ತಿ ತೋರುತ್ತಿದ್ದಾರೆ.
ತಾಲೂಕಿನಲ್ಲಿ ಯಳವತ್ತಿ ಅಡರಕಟ್ಟಿ ಮತ್ತು ಟಿಎಪಿಸಿಎಂಎಸ್ ನಲ್ಲಿ ಖರೀದಿ ಕೇಂದ್ರ ಸ್ಥಾಪನೆ ಮಾಡಲಾಗಿದೆ ಆದರೆ ಯಳವತ್ತಿ ಹೊರತುಪಡಿಸಿ ಎಲ್ಲಿಯೂ ರೈತರು ಮುಗಿಬಿದ್ದು ಹೆಸರು ನೋಂದಾಯಿಸುವುದು ಕಂಡು ಬರುತ್ತಿಲ್ಲ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ ಯಳವತ್ತಿ ಕೇಂದ್ರದಲ್ಲಿ ಇದುವರೆಗೆ 791 ರೈತರು ಹೆಸರು ನೋಂದಾಯಿಸಿದ್ದಾರೆ ಅಡರಕಟ್ಟಿಯಲ್ಲಿ ಕೇವಲ 45 ರೈತರು ಮತ್ತು ಟಿಪಿಸಿ ಎಂ ಎಸ್ ನಲ್ಲಿ 120 ರೈತರು ಹೆಸರನ್ನು ನೋಂದಾಯಿಸಿದ್ದಾರೆ.
ರೈತರು ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಹೆಸರನ್ನು ನೋಂದಾಯಿಸಲು ನಿರಾಸಕ್ತಿ ತೋರಲು ಪ್ರಮುಖವಾಗಿ ಖರೀದಿ ಕೇಂದ್ರದಲ್ಲಿನ ಅನೇಕ ತಾಂತ್ರಿಕ ಕಾರಣಗಳು ಕಾರಣ ಎನ್ನಲಾಗುತ್ತಿದೆ ಆದರೆ ಡಿಸೆಂಬರ್ ನಲ್ಲಿಯೇ ಬಿತ್ತನೆ ಮಾಡಿ ಕಳೆದ ತಿಂಗಳು ಕೊಯ್ಲು ಮಾಡಿ ರೈತರು ಮುಕ್ತ ಮಾರುಕಟ್ಟೆಯಲ್ಲಿ ಮಾರಿದ್ದಾರೆ ಎಂಬ ಅಂಶ ತಿಳಿದು ಬಂದಿದೆ.
ಏಕೆಂದರೆ ರೈತರು ಸದಾ ಸಾಲದ ನೆರಳಿನಲ್ಲಿ ಬದುಕು ಸಾಗಿಸಬೇಕಾಗಿರುವುದರಿಂದ ರೈತರು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದು ಒಂದು ಕಾರಣವಾದರೆ ಬಹಳಷ್ಟು ರೈತರ ಎಫ್ ಐ ಡಿ ಯಲ್ಲಿ ಗೋವಿನ ಜೋಳ ನಮದಾಗಿದ್ದು ಒಂದು ಕಾರಣವಾದರೆ ಖರೀದಿ ಕೇಂದ್ರದಲ್ಲಿ ಇದುವರೆಗೂ ಖರೀದಿ ಪ್ರಕ್ರಿಯೆ ಆರಂಭವಾಗದಿರುವುದರಿಂದ ರೈತರು ಕಾದು ಕೂಡುವಷ್ಟು ವ್ಯವಧಾನ ರೈತರಿಗಿಲ್ಲ ಎಂಬುದು ಒಂದಾದರೆ ಖರೀದಿ ಕೇಂದ್ರಗಳಿಗೆ ಇದುವರೆಗೂ ರೈತರಿಗೆ ಅವಶ್ಯವಾಗಿ ಪೂರೈಸುವ ಚೀಲಗಳು ಬಾರದಿರುವುದು ಮತ್ತು ರೈತರು ಮುಕ್ತ ಮಾರುಕಟ್ಟೆಯಲ್ಲಿ ಮತ್ತು ಬೆಂಬಲ ಬೆಲೆಯಲ್ಲಿ ಬಹಳಷ್ಟು ವ್ಯತ್ಯಾಸ ಇರದರಿಂದ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ನಿಧಾನ ಧೋರಣೆ ರೈತರ ಪಾಲಿಗೆ ಖರೀದಿ ಕೇಂದ್ರಗಳು ವರವಾಗಿ ಪರಿಣಮಿಸುತ್ತಿಲ್ಲ ಎಂಬುದಾಗಿದೆ.
ಈ ಕುರಿತು ಯುವ ರೈತ ಮಲ್ಲಿಕಾರ್ಜುನ ಕಳಸಾಪುರ ಪ್ರತಿಕ್ರಿಯೆ ನೀಡಿ ಸರ್ಕಾರ ಬೆಂಬಲ ಬೆಲೆಯ ಖರೀದಿ ಕೇಂದ್ರಗಳನ್ನು ಆಯಾ ಬಿತ್ತನೆ ಸಮಯದಲ್ಲಿ ಆರಂಭ ಮಾಡಿದರೆ ರೈತರು ಉತ್ಪನ್ನಗಳನ್ನು ಅಲ್ಲಿ ಮಾರಾಟ ಮಾಡಬಹುದು ಆದರೆ ಎಲ್ಲಾ ಪ್ರಕ್ರಿಯೆ ಮುಗಿಯಲು ತಿಂಗಳುಗಟ್ಟಲೆ ಹಿಡಿಯುವುದರಿಂದ ರೈತರು ಅಷ್ಟು ಕಾಯಲು ಸಾಧ್ಯವಿಲ್ಲದಂತಹ ಒತ್ತಡದಲ್ಲಿ ಇರುತ್ತಾರೆ ಸರ್ಕಾರಕ್ಕೆ ರೈತರು ಹಿತಾಸಕ್ತಿ ಮತ್ತು ಬದ್ಧತೆಯನ್ನು ಕಾಪಾಡುವ ನಿಜವಾದ ಕಳಕಳಿ ಇದ್ದರೆ ಮುಂಗಾರು ಮತ್ತು ಹಿಂಗಾರಿನಲ್ಲಿ ಬಿತ್ತನೆಯ ಸಮಯದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಹೇಳಿದ್ದಾರೆ.
























