Home ಜಿಲ್ಲೆ ಕಲಬುರಗಿ ಮಳೆಗಾಗಿ ಪ್ರಾರ್ಥಿಸಿ ರೈತರ ಪಾದಯಾತ್ರೆ

ಮಳೆಗಾಗಿ ಪ್ರಾರ್ಥಿಸಿ ರೈತರ ಪಾದಯಾತ್ರೆ

ಆಳಂದ: ಜೂ.21:ಮುಂಗಾರು ಮಳೆ ಬಾರದ ಹಿನ್ನೆಲೆಯಲ್ಲಿ ಬಿತ್ತನೆಗೆ ನಿಂತುಕೊಂಡಿದ್ದ ರೈತ ಸಮುದಾಯ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿ ಆಳಂದ ಪಟ್ಟಣ ಸೇರಿ ನೆರೆ ಹೊರೆಯ ಏಳು ಗ್ರಾಮಗಳ ಹನುಮಾನ ದೇವರಿಗೆ ಪಾದಯಾತ್ರೆಯ ಮೂಲಕ ತೆರಳಿ ಶನಿವಾರ ಜಲಾಭಿಷೇಕ ನೆರವೇರಿಸಿದರು.
ಶನಿವಾರ ಬೆಳಗಿನ ಜಾವ ಪಟ್ಟಣದಲ್ಲಿನ ಗ್ರಾಮ ದೇವತ ಶ್ರೀ ಹನುಮಾನ ದೇವಸ್ಥಾನ ಆವರಣದಲ್ಲಿ ಲುಂಗಿ, ಟೊಪ್ಪಿಗೆ, ಕಾವಿ ಶಲ್ಯದೊಂದಿಗೆ ಬೀಳಿವಸ್ತ್ರ ಧರಿಸಿ ಭಜನೆ ಮಾಡುತ್ತಾ ಕೊಡಲಹಂಗರಗಾ, ಹಳ್ಳಿಸಲಗರ, ಹೊಸಳ್ಳಿ, ಎಲೆನಾವದಗಿ, ಬಾಳಿ, ಹೊನ್ನಳ್ಳಿ ಮರಳಿ ಆಳಂದ ಸೇರಿ ಏಳು ಗ್ರಾಮಗಳಿಗೆ ಭಕ್ತಿಯೊಂದಿಗೆ ಭಜನೆ ಕೈಗೊಂಡು ಜಯ ಘೋಷದೊಂದಿಗೆ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ರೈತ ಮುಖಂಡ ಶ್ರೀಶೈಲ ಪಾಟೀಲ ನೇತೃತ್ವದಲ್ಲಿ ಈರಣ್ಣಾ ವರನಾಳೆ, ಲಾಡಪ್ಪ ವರನಾಳೆ,ಶಿವಾನಂದ ನಾವದಗಿ, ಅರ್ಜುನ ಹಿರೋಳಿ, ಸುನಿಲ ಅಚಲೇರಿ,ಚಂದು ಲಂಗೋಟೆ, ಹುಬ್ಬಣ್ಣಾ ನಾಗದೆ, ಸಿದ್ಧು ವಣದೆ,ಅಹ್ಮದ್ ಅಲಿ ಪಡತಾಲೆ, ಶ್ರೀಕಾಂತ ಹತ್ತಿ, ಲಾಡಪ್ಪ ಕಲಶೆಟ್ಟಿ, ಅಶೋಕ ಬಾರಾಮಣಿ, ಕಲ್ಯಾಣಿ ಪೂಜಾರಿ, ಅರುಣ ಸುತಾರ, ಸಂತೋಷ ಪಾಟೀಲ, ಸಂಜು ಮೇಂತೆ ಸೇರಿದಂತೆ ಅನೇಕ ರೈತರು ಪಾದಯಾತ್ರೆಯ ಮೂಲಕ ಕುಂಬ ಹೊತ್ತುಕೊಂಡು ಏಳು ಗ್ರಾಮಗಳಿಗೆ ಭಜನೆ ಕೈಗೊಳ್ಳುತ್ತಾ ತೆರಳಿ ಹನುಮಾನ ದೇವರಿಗೆ ಜಲಾಭಿಷೇಕ ಕೈಗೊಂಡು ಮಹಾಮಂಗಲ ನೆರವೇರಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.