
ಅಫಜಲಪುರ:ಮೇ.14:ತಾಲೂಕಿನ ಮಾತೋಳಿ ಗ್ರಾಮದಲ್ಲಿ ಸೋಮವಾರ ರಾತ್ರಿ 8:30ಕ್ಕೆ ಹೊಲದಲ್ಲಿ ಕಬ್ಬಿಗೆ ನೀರುಣಿಸಲು ಹೋಗಿದ್ದಾಗ ಹಾವು ಕಚ್ಚಿ ರೈತ ಸೈಬಣ್ಣ ಗುರುಬಾಳ ಜಮಾದಾರ(30) ಮೃತಪಟ್ಟಿದ್ದಾರೆ.
ಅಫಜಲಪುರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತ ರೈತನಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ರಾತ್ರಿ ವೇಳೆ ಹೊಲಗದ್ದೆಗಳ ವಿದ್ಯುತ್ ಕೊಡುತ್ತಿದ್ದಾರೆ. ಬೇಸಿಗೆ ಇರುವ ಕಾರಣ ರಾತ್ರಿಯ ತಂಪಿನಲ್ಲಿ ವಿಷ ಸರ್ಪಗಳು ಹೊರಗಡೆ ಬಂದು ಹೀಗೆ ಕಚ್ಚಿ ರೈತರ ಸಾವಿಗೆ ಕಾರಣವಾಗುತ್ತಿವೆ.
ಜೇಸ್ಕಾಂ ಇಲಾಖೆಯವರು ದಿನದಲ್ಲಿ ವಿದ್ಯುತ್ ಸಂಪರ್ಕ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.























