
ಕಲಬುರಗಿ,ಮೇ.31-ನಗರದ ಸೂಪರ್ ಮಾರ್ಕೆಟ್ನಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಕಮಲಾಕರ್ ಪವಾರ್ ಅವರಿಗೆ ಬ್ಯಾಂಕಿನಲ್ಲಿ ಶನಿವಾರ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ದೀನ್ ದಯಾಳನ್ ಮತ್ತು ಬ್ಯಾಂಕಿನ ಸಿಬ್ಬಂದಿ ಕಮಲಾಕರ್ ಪವಾರ್ ದಂಪತಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ದೀನ್ ದಯಾಳನ್ ಅವರು “ಕಮಲಾಕರ್ ಪವಾರ್ ಅವರು ಸುಮಾರು 40 ವರ್ಷಗಳ ಕಾಲ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುವುದುರ ಮೂಲಕ ಸಿಬ್ಬಂದಿಗಳ ಪ್ರೀತಿ, ವಿಶ್ವಾಸಗಳಿಸಿದ್ದಾರೆ. ಅವರು ತಮ್ಮಾ ಸೇವಾ ಅವಧಿಯಲ್ಲಿ ಬ್ಯಾಂಕಿನ ಆಧಾರಸ್ತಂಭದಂತೆ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು. ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಅವರು ಶುಭ ಹಾರೈಸಿದರು.
ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಪ್ರವೀಣ್ ದೇಶಪಾಂಡೆ, ನಿವೃತ್ತ ಸಿಬ್ಬಂದಿ ಡಿ.ಕೆ.ಕುಲಕರ್ಣಿ ಅವರು ಮಾತನಾಡಿ, ” ಕಮಲಾಕರ್ ಪವಾರ್ ಅವರು ಎಲ್ಲರಿಗೂ ಬೇಕಾದ ಸ್ವಚ್ಛ ಮನಸ್ಸಿನ ವ್ಯಕ್ತಿ. ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲದಂತೆ ಅವರು ಬ್ಯಾಂಕಿನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದು, ಅವರ ನಿವೃತ್ತ ಜೀವನ ಆನಂದ ದಾಯಕವಾಗಿರಲಿ” ಎಂದು ಶುಭ ಕೋರಿದರು.
ಬ್ಯಾಂಕಿನ ಸಿಬ್ಬಂದಿಗಳು ಕಮಲಾಕರ್ ಅವರ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಬ್ಯಾಂಕಿನ ವ್ಯವಸ್ಥಾಪಕ ಸುಂಧರ್, ಉಪ ವ್ಯವಸ್ಥಾಪಕರಾದ ಆಕಾಶ್, ಸಾಯಿರಾಮ್, ಕ್ಲರ್ಕ್ ಕಾಮೇಶ್ವರಿ, ನಿವೃತ್ತ ಸಿಬ್ಬಂದಿಗಳಾದ ಜಾಂಬೇಕರ್, ಪದ್ಮಾವತಿ ಮದುಗುಣಿ, ಕಿಶೋರ ಗಾಯಕವಾಡ, ಡೇವಿಡ್, ಸಂಜೆವಾಣಿ ಪತ್ರಿಕೆಯ ಕಲಬುರಗಿ ಆವೃತ್ತಿಯ ಸಂಪಾದಕ ಟಿ.ಗಣೇಶಕುಮಾರ ಸೇರಿದಂತೆ ಕಮಾಲಾಕರ್ ಪವಾರ್ ಅವರ ಕುಟುಂಬ ವರ್ಗದವರು, ಆತ್ಮೀಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

























