
ನವಲಗುAದ,ಮೇ.೨೬: ಪಾಲಕರುಗಳು ಮಕ್ಕಳನ್ನು ಶಾಲೆಗೆ ಕಳಿಸಿದರೆ ನಮ್ಮ ಕೆಲಸ ಮುಗಿಯಿತೆಂದು ಭಾವಿಸಬೇಡಿ ಪ್ರತಿದಿನ ಮಕ್ಕಳಿಗೆ ಶಾಲೆಯಲ್ಲಿ ಕೊಟ್ಟಿರುವ ಕೆಲಸ ಕಾರ್ಯವನ್ನು ಗಮನಿಸಿ ಶಾಲೆಯ ಶಿಕ್ಷಕ ಬಳಗದೊಂದಿಗೆ ಚರ್ಚಿಸಿ ಮಗುವಿನ ಪ್ರಗತಿಯನ್ನು ಹೆಚ್ಚಿಸಬೇಕು ಎಂದು ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಎಚ್ ನೆಗಲಿ ಹೇಳಿದರು.
ವಿದ್ಯಾರಣ್ಯ ಕೋಚಿಂಗ್ ಸೆಂಟರ್ ನಿಂದ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ ಬೀಳ್ಕೊಡುಗೆ ಸಮಾರಂಭ ಹಾಗೂ ಪ್ರಸ್ತಕ ಸಾಲಿನ ಎಸ್ ಎಸ್ ಎಲ್ ಸಿ ಯಲ್ಲಿ ಶೇ ೯೦ ಕ್ಕಿಂತಲೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಶಿಕ್ಷಣ ಎಂಬುದು ಸದಾಕಾಲ ಹರಿಯುವ ನೀರಂತಾಗಬೇಕು ಪಾಲಕರು ವಿದ್ಯಾರ್ಥಿಗಳಿಗೆ ಆಸಕ್ತಿ ತುಂಬಬೇಕು ಎಂದರು
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವಿ ಬಿ ನವಲಗುಂದ ಮಾತನಾಡಿ ನಮ್ಮ ತಾಲ್ಲೂಕಿನ ಮಕ್ಕಳು ಬೇರೆ ಬೇರೆ ನಗರಗಳಿಗೆ ಹೋಗಿ ಶಿಕ್ಷಣ ಪಡೆಯುವಂತಾಗದೆ ಉತ್ತಮ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶಿಸಿ ಮಕ್ಕಳಿಗೆ ಉನ್ನತಾಭ್ಯಾಸ ನೀಡುತ್ತಿದೆ ನಮ್ಮಲ್ಲಿ ಕೋಚಿಂಗ್ ಪಡೆದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಈ ಬಾರಿ ಅತ್ಯುನ್ನತ ಅಂಕ ಪಡೆದು ಜಿಲ್ಲಾ ಮಟ್ಟದಲ್ಲಿ ಉನ್ನತ ಸ್ಥಾನ ಹೊಂದಿದ್ದಾರೆ. ಅದೇ ಮಾರ್ಗದಲ್ಲಿ ಮುಂದೆ ಬರುವಂತ ಮಕ್ಕಳು ಉನ್ನತ ಅಂಕವನ್ನು ಪಡೆದು ತಾಲ್ಲೂಕು ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸಾಧನೆಗೈಯಲಿ ಎಂದು ಹೇಳಿದರು.
ಅಳಗವಾಡಿ ಎಂವಿಎನ್ ಶಾಲೆ ಮುಖ್ಯೋಪಾಧ್ಯರಾದ ಚಂದ್ರಶೇಖರ್ ಡಂಬರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶಿವಾನಂದ ಬುಡ್ಡಮ್ಮನವರು, ಶಿವಯೋಗಿ ಬಡಕಲಿ, ಶರಣಪ್ಪ ಮನಕವಾಡ, ಶಿವಯೋಗಿ ಬಡಕಲಿ, ಪಿ,ಕೆ,ಹಿರೇಗೌಡ್ರ, ಬೆಟಿಗೇರಿ, ಚಂದ್ರು ಹಾಗೂ ರೈತ ಮುಖಂಡರು ವೇದಿಕೆಯಲ್ಲಿದ್ದರು ಉಪಸ್ಥಿತರಿದ್ದರು. ಜ್ಯೋತಿ ಮ್ಯಾಗೇರಿ, ಶ್ವೇತಾ ಉಳ್ಳಾಗಡ್ಡಿ, ಉಡಚವ್ವ ಹೂನಕುದರಿ ನಿರೂಪಣೆ, ವಿರೇಶ ಬಡಿಗೇರ ಸ್ವಾಗತ, ಶ್ರೀಕಾಂತ ದೊಡಮನಿ ವಂದನಾರ್ಪಣೆ ಮಾಡಿದರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು.

























