Home ಜಿಲ್ಲೆ ಪ್ರತಿ ಮಗುವಿಗೆ ಶಿಕ್ಷಣ ಅವಶ್ಯಕ:ಶಾಂತವೀರ ಶ್ರೀಗಳು

ಪ್ರತಿ ಮಗುವಿಗೆ ಶಿಕ್ಷಣ ಅವಶ್ಯಕ:ಶಾಂತವೀರ ಶ್ರೀಗಳು

ಸೈದಾಪುರ:ಮಾ.೫:ಪ್ರತಿ ಮಗುವಿಗೆ ಶಿಕ್ಷಣ ಅವಶ್ಯಕವಾಗಿದೆ. ಇದನ್ನು ಯಾರು ಕಸಿದುಕೊಳ್ಳದ ಅಮೂಲ್ಯವಾದ ಸಂಪತ್ತಾಗಿದೆ ಎಂದು ಗುರುಮಠಕಲ್ ಖಾಸಮಠದ ಶಾಂತವೀರ ಮುರುಗರಾಜೇಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಸಮೀಪದ ಮಾದ್ವಾರ ಗ್ರಾಮದ ಸರ್.ಎಂ.ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ೧೫ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಗಡಿ ಗ್ರಾಮೀಣ ಭಾಗದಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಈ ಭಾಗದ ಮಕ್ಕಳಿಗೆ ಸಾಂಸ್ಕೃತಿಕ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇನ್ನೂ ಹೆಚ್ಚಿನ ಸಾಧನೆ ಇವರದಾಗಲಿ ಎಂದು ಹಾರೈಸಿದರು.

ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗಿದವು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಮೇಸ್ತಿç, ಸಿಪಿಐ ಶಿವನಾಂದ ಗರಡಿ, ಪಿಎಸಐ ಭೀಮರಾಯ ಕೂಡ್ಲೂರು, ವಿದ್ಯಾ ವರ್ಧಕ ಸಂಸ್ಥೆಯ ಲಿಂಗಾರೆಡ್ಡಿ ನಾಯಕ, ಹಂಪಣ್ಣ ಸಜ್ಜನಶೆಟ್ಟಿ, ಜಿ.ಎಂ.ಗುರುಪ್ರಸಾದ, ಗೂಳಪ್ಪ ಮಲ್ಹಾರ, ಕಾಶಿನಾಥ ಶೇಖಸಿಂದಿ, ಸಿಆರ್‌ಪಿ ಜೈಪಾಲರೆಡ್ಡಿ, ಕೆ.ಬಿ.ರಾಘವೇಂದ್ರ, ನರಸಪ್ಪ ನಾರಯಣನೋರ, ಭೀಮಣ್ಣ ವಡವಟ್, ಮಲ್ಲಿಕಾರ್ಜುನ ಅರಿಕೇರಿಕರ್, ರಾಮುಲು ಕಲಾಲ, ಶಂಕ್ರಪ್ಪ ಸಾಹುಕಾರ, ಶ್ಯಾಮಪ್ಪ, ಶರಣಗೌಡ, ಗೋಪಾಲ, ರವಿಂದ್ರ, ಶರಣು, ದೇವಸಿಂಗ, ಮೌನೇಶ ದೊಬ್ಬಲ್, ಸಂತೋಷ ಕಲಾಲ, ಸಿದ್ದು ಕಾಳಗಿ, ಪ್ರಭು ಹೂಗಾರ, ಜಾನುಕುಮಾರ, ರಮೇಶ, ದೇವಪ್ಪ ವಿಶ್ವಕರ್ಮ, ಡಾ.ಮಲ್ಲೇಶ, ಪ್ರಕಾಶ ಕಲಾಲ್, ವಿರುಪಾಕ್ಷಿ ಸಾಹುಕಾರ, ಶ್ರೀನಿವಾಸ ನಾಯಕ, ಆನಂದ ಗಡ್ಡೆ, ಆನಂದ ಮಡಿವಾಳ, ನರೇಂದ್ರ, ಈರದಮ್ಮಣ್ಣ, ನಾಗಪ್ಪ, ಜೇಮಿರಲಿ, ಚಹಾ ಹುಸೇನ್, ಮಲ್ಲು ಮೇಸ್ತಿçÃ, ಅಶೋಕ ಕಲಾಲ, ಮುಖ್ಯಗುರು ಶ್ರೀನಿವಾಸ, ಶಿಕ್ಷಕರು, ಗ್ರಾಮಸ್ಥರು ಸೇರಿದಂತೆ ಇತರರಿದ್ದರು.

ಗಡಿ ಗ್ರಾಮೀಣ ಭಾಗದಲ್ಲಿ ಕನ್ನಡ ಶಾಲೆಗಳ ಕೊರತೆ ಮಧ್ಯದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಕಾರ್ಯ ಸೇವಾ ಮನೋಭಾವನೆಯಿಂದ ಕೂಡಿದೆ. ಇದಕ್ಕೆ ಪೋಷಕರ ಸಹಕಾರ ಅತಿ ಮುಖ್ಯವಾಗಿದೆ. ಸಣ್ಣ ಪ್ರಮಾಣದಲ್ಲಿ ಅಸ್ಥಿತ್ವಕ್ಕೆ ಬಂದ ಶಾಲೆ ಉತ್ತಮ ಕಟ್ಟದೊಂದಿಗೆ ಬೆಳವಣಿಗೆಯಾಗಿದೆ. ಇನ್ನೂ ಹೆಚ್ಚಿನ ಸಾಧನೆ ಇವರದಾಗಲಿ.
ಕರಬಸಯ್ಯ ದಂಡಿಗಿಮಠ ಪ್ರಾಂಶುಪಾಲರು ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜು ಸೈದಾಪುರ.