Home ಜಿಲ್ಲೆ ರಸಪ್ರಶ್ನೆ ಸ್ಫರ್ಧೆ; ಬಹುಮಾನ ವಿತರಣೆ

ರಸಪ್ರಶ್ನೆ ಸ್ಫರ್ಧೆ; ಬಹುಮಾನ ವಿತರಣೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಏ.16: ಸಂವಿಧಾನಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಶ್ರೀಕೃವಿವಿಯ ಡಾ. ಬಿ.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನಾ ಮತ್ತು ವಿಸ್ತರಣ ಕೇಂದ್ರವು ಇತ್ತೀಚೆಗೆ ಆಯೋಜಿಸಿದ್ದ ರಸಪ್ರಶ್ನೆ ಸ್ಫರ್ಧೆ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.

ಅಂಬೇಡ್ಕರ್ ಅವರ ಜಯಂತಿಯಂದು ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ನಗರದ ಮುನಿಸಿಪಲ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರಾದ ನಾ ರಾ ಭರತ್‍ರೆಡ್ಡಿ ಅವರು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಿದರು. ಮಹಾನಗರ ಪಾಲಿಕೆ ಮೇಯರ್ ಪಿ ಗಾದೆಪ್ಪ, ಲೀಡ್ಕರ್ ಅಧ್ಯಕ್ಷರಾದ ಮುಂಡ್ರಿಗಿ ನಾಗರಾಜ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ವಿವಿಯ ವಿದ್ಯಾರ್ಥಿಗಳಾದ ಚರಣ್ ನಜರೆತ್, ಬಸವರಾಜ್ ಮತ್ತು ಕಾರ್ತಿಕ್ ಕೆ.ಬಿ. (ರಾಜ್ಯಶಾಸ್ತ್ರ) ಹಾಗೂ ಅನುಶ್ರೀ ಮತ್ತು ವಿಜಯಲಕ್ಷ್ಮಿ (ವಾಣಿಜ್ಯಶಾಸ್ತ್ರ) ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಕ್ಕಾಗಿ ಗೌರವಿಸಲಾಯಿತು.