Home ಜಿಲ್ಲೆ ಹೆಚ್ ಎಸ್ ಕೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈ ವರ್ಷದಿಂದ ಎಐ ಕೋರ್ಸ್

ಹೆಚ್ ಎಸ್ ಕೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈ ವರ್ಷದಿಂದ ಎಐ ಕೋರ್ಸ್

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.16: ನಗರದ ವೀರಶೈವ ವಿದ್ಯಾವರ್ಧಕ ಸಂಘದ ಪ್ರಖ್ಯಾತ ಹಾನಗಲ್ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈ ವರ್ಷ 2026-27 ನೇ ಸಾಲಿನಿಂದ ಆರ್ಟಿಫಿಷಲ್ ಇಂಟಲಿಜೆಂಟ್ಸಿ (ಎಐ) ಕೋರ್ಸ್ ನ್ನು  ಆರಂಭಿಸುತ್ತಿದೆಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಲ್ಲೇದ ಪ್ರಭಲಿಂಗ ಅವರು ಹೇಳಿದ್ದಾರೆ.

ಅವರು ಇಂದು ಕಾಲೇಜಿನಲ್ಲಿ ಸುದ್ದಿಗೋಷ್ಟಿ ನಡೆಸಿ.  ವಿದ್ಯಾರ್ಥಿಗಳು ಕಳೆದ ವರ್ಷದಿಂದ ಎಐ ಕೋರ್ಸ್ ಗೆ ಸಾಕಷ್ಟು ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆಯಲ್ಲಿ ಸಂಘದ ಆಡಳಿತ ಮಂಡಳಿಯ ಸಹಕಾರದಿಂದ ಈ ವರ್ಷ ಕಾಲೇಜಿನಲ್ಲಿ ಎಐ ಕೋರ್ಸ್ ಆರಂಭಿಸಲು ಸರ್ಕಾರದಿಂದ  ಅನುಮತಿ ಪಡೆದಿದೆ.

ಈ ವರ್ಷ ಅನುಮತಿ ಪಡೆದ ರಾಜ್ಯದ  4 ಕಾಲೇಜುಗಳಲ್ಲಿ ನಮ್ಮ ಕಾಲೇಜು ಒಂದಾಗಿದ್ದು ಇದು ಕಲ್ಯಾಣ ಕರ್ನಾಟಕದಲ್ಲಿಯೇ ಮೊದಲ ಕಾಲೇಜು ಆಗಿದೆ. ಈ  ವರ್ಷ 60 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ದೊರೆತಿದೆ .   40  ಸಾವಿರ ರೂ ಶುಲ್ಕವಿದೆಂದು ವಿವರಿಸಿದರು.

ಕಾಲೇಜಿನಲ್ಲಿ ಮೆಕಾನಿಕಲ್, ಸಿವಿಲ್, ಎಲೆಕ್ಟ್ರಿಕಲ್ ಸೇರಿದಂತೆ 7 ಬ್ರಾಂಚ್ ಇವೆ.  ಮುಂದಿನ ವರ್ಷ ಪೈರ್ ಅಂಡ್ ಸೇಫ್ಟಿ ಕೋರ್ಸ್  ಮಾಡುವ ಉದ್ದೇಶ ಇದೆ.

ಜೊತೆಗೆ ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ತರಬೇತಿ ನೀಡುವುದನ್ನು ಆರಂಭಿಸುವ ಉದ್ದೇಶ ಹೊಂದಿದೆಂದರು.

ಸಧ್ಯ ಕಾಲೇಜಿನಲ್ಲಿ 496 ಇಂನಟೇಕ್ ಇದೆ. ಒಟ್ಟು 1150 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

58 ಬೋದಕ ಸಿಬ್ಬಂದಿ ಸೇರಿ 80 ಜನ  ಸಿಬ್ವಂದಿ ಇದ್ದಾರೆ. ಶೇ 100 ನೋಂದಣಿ ಇದೆ.ಶೇ 80 ಕ್ಕೂ ಫಲಿತಾಂಶ ಇದೆ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಬಣಾಪುರ ಶ್ರೀಶೈಲಗೌಡ,

ಶ್ರೀಶೈಲಗೌಡ   ವಿಭಾಗದ ಮುಖ್ಯಸ್ಥರುಗಳಾದ  ನಾಗರಾಜ್,  ಗೌಸಿಯಾ ಬೇಗಂ  ಮೊದಲಾದವರು ಇದ್ದರು.