Home ಜಿಲ್ಲೆ ಕಸಾಪಗೆ ದತ್ತಿನಿಧಿ ಅರ್ಪಣೆ

ಕಸಾಪಗೆ ದತ್ತಿನಿಧಿ ಅರ್ಪಣೆ


ರಬಕವಿ-ಬನಹಟ್ಟಿ,ಮಾ.೨೯: ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಮಹಾಲಿಂಗಪುರದ ಶ್ರೀಮತಿ ದಾಕ್ಷಾಯಣಿ ಶಂಕರ ಹುಣಶ್ಯಾಳ (ಮಂಡಿ) ದತ್ತಿ ದಾನಿಗಳು ತಮ್ಮ ಪತಿ ದಿವಂಗತ ಶಂಕರ ತಮ್ಮಣ್ಣೆಪ್ಪ ಹುಣಶ್ಯಾಳ ಮಹಾಲಿಂಗಪುರ ಅವರ ಹೆಸರಿನಲ್ಲಿ ೨೫ಸಾವಿರ ರೂ.ಗಳ ಡಿಡಿಯನ್ನು ಬನಹಟ್ಟಿಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿಯವರ ಮೂಲಕ ಕೇಂದ್ರ ಕಸಾಪಗೆ ಅರ್ಪಿಸಿದರು.


ಪ್ರತಿ ವ?Àð ಸೆಪ್ಟೆಂಬರ್ ತಿಂಗಳ ೯ನೇ ತಾರೀಕಿನಂದು ದತ್ತಿ ಕಾರ್ಯಕ್ರಮವನ್ನು ನಡೆಸುವುದು. ಜೊತೆಗೆ ಬಾಗಲಕೋಟೆ ಜಿಲ್ಲೆಯ ಒಬ್ಬ ಶಿಕ್ಷಕ ಸಾಹಿತಿಗೆ ದತ್ತಿ ಪ್ರಶಸ್ತಿಯನ್ನು ನೀಡುವುದು. ಶ್ರೀ ಶಂಕರ ಹುಣಶ್ಯಾಳ ಪ್ರತಿ?Á್ಠನ ಮಹಾಲಿಂಗಪುರ ಇವರ ಸಹಯೋಗದಲ್ಲಿ ಪ್ರತಿ ವ?Àð ಕಾರ್ಯಕ್ರಮವನ್ನು ನಡೆಸುವುದು. ವಚನ ಸಾಹಿತ್ಯ, ಜಾನಪದ ಸಾಹಿತ್ಯ, ಮಹಿಳಾ ಸಾಹಿತ್ಯ ಕುರಿತು ಉಪನ್ಯಾಸ ಹಮ್ಮಿಕೊಳ್ಳುವುದು ದತ್ತಿ ಆಶಯವಾಗಿದೆ ಎಂದು ಜಿಲ್ಲಾಧ್ಯಕ್ಷ ಶೆಲ್ಲಿಕೇರಿ ಹೇಳಿದರು.


ರಬಕವಿ-ಬನಹಟ್ಟಿ ತಾಲೂಕಾ ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಮಾತನಾಡಿ ರಬಕವಿಯ ಕವಿ ಈಶ್ವರ ಸಣಕಲ್ಲ ಪ್ರತಿಷ್ಠಾನದವರು ೫೦ಸಾವಿರ ರೂ.ಗಳ ದತ್ತಿನಿಧಿ ಸ್ಥಾಪಿಸಿದ್ದಾರೆ. ಇದೀಗ ಮಹಾಲಿಂಗಪುರದ ದಾಕ್ಷಾಯಣಿ ಶಂಕರ ಹುಣಶ್ಯಾಳ (ಮಂಡಿ) ಅವರು ೨೫ಸಾವಿರ ರೂ.ಗಳ ದತ್ತಿಯನ್ನು ತಮ್ಮ ಪತಿಯ ಹೆಸರಿನಲ್ಲಿ ಅರ್ಪಿಸಿದ್ದು, ದತ್ತಿ ಆಶಯದಂತೆ ತಾಲೂಕಾ ಕಸಾಪ ಪ್ರತಿವರ್ಷವೂ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದರು. ಎ,೧೨ರಂದು ಪುಸ್ತಕಾವಲೋಕನ-೫೨ ರಬಕವಿ-ಹೊಸೂರಿನಲ್ಲಿ ನಡೆಯಲಿದೆ. ನ್ಯಾಯವಾದಿಗಳಾದ ವೆಂಕಟೇಶ ಟಿ. ನಿಂಗಸಾನಿ ಅವರು ಅಧ್ಯಕ್ಷತೆ ವಹಿಸುವರು. ಜಮಖಂಡಿಯ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಇಂಡಿಯವರ ತವನಿಧಿ ಕೃತಿಯನ್ನು ಸಾಹಿತಿ ಡಾ. ವಾಯ್. ವಾಯ್. ಕೊಕ್ಕನವರ ಅವಲೋಕಿಸುವರು. ಎಂದರು.


ತೇರದಾಳ ತಾಲೂಕಾ ಕಸಾಪ ಅಧ್ಯಕ್ಷ ಗಂಗಾಧರ ಮೋಪಗಾರ, ಅಶೋಕ ಮಂಡಿ, ಶಾಂತ ಮಂಡಿ, ಸ್ಫೂರ್ತಿ ಹುಣಶ್ಯಾಳ, ರವೀಂದ್ರ ಕಾಂಬಳೆ ಈ ಸಂದರ್ಭದಲ್ಲಿದ್ದರು.