
ಬೆಂಗಳೂರು, ಸೆ. ೧೯- ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ಎರಡು-ಮೂರು ಬಾರಿ ಬಿತ್ತನೆ ಮಾಡಿದರೂ ಬೀಜ ಮೊಳಕೆಯೊಡೆಯದೆ ರೈತರು ನಷ್ಟ ಅನುಭವಿಸಿದ್ದಾರೆ. ಇಂತಹ ರೈತರಿಗೆ ಸರ್ಕಾರ ಯಾವ ಪರಿಹಾರ ನೀಡಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಅಧಿವೇಶನದಲ್ಲಿ ಬರಗಾಲದ ಕುರಿತು ಚರ್ಚೆಯಾಗಬೇಕು. ಮಳೆ ಕೊರತೆಯಿಂದ ಬಿತ್ತನೆ ನಾಶವಾಗಿದ್ದು, ಕುಡಿಯುವ ನೀರಿನ ಸಮಸ್ಯೆಯೂ ಹಲವು ಕಡೆ ಬಗೆಹರಿದಿಲ್ಲ. ಈ ಕುರಿತು ಮುಖ್ಯ ಕಾರ್ಯದರ್ಶಿಗಳು ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ತಾವು ಈ ಹಿಂದೆಯೇ ದಿಶಾ ಸಭೆಯಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾಗಿ ಅವರು ಹೇಳಿದರು.
ಬರ ಪರಿಸ್ಥಿತಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ರೈತರ ಸಾಲಮನ್ನಾ ಮಾಡಬೇಕು ಎಂಬ ಬೇಡಿಕೆಯೂ ಕೇಳಿಬರುತ್ತಿದೆ. ಹಿಂದೆ ತಮ್ಮ ಸರ್ಕಾರ ಹಾಗೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಾಜ್ಯದ ತೆರಿಗೆ ಹಣದಿಂದಲೇ ಸಾಲಮನ್ನಾ ಮಾಡಲಾಗಿದೆ. ಹೀಗಿರುವಾಗ ಸಾಲಮನ್ನಾಕ್ಕೆ ಕೇಂದ್ರದ ಸಹಕಾರ ಬೇಕು ಎಂದು ಹೇಳುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.
“ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸಾಲಮನ್ನಾಕ್ಕಾಗಿ ಕೇಂದ್ರದ ಬಳಿ ಹೋಗಿದ್ದೆನಾ? ಹಣ ಕೊಡಿ ಎಂದು ಕೇಳಿದ್ದೆನಾ? ಕೇಂದ್ರದಲ್ಲಿ ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗ ಅವರ ಬಳಿ ಹೋಗಿ ಸಾಲಮನ್ನಾ ಮಾಡಿ ಎಂದು ಕೇಳಿದ್ದೆನಾ?” ಎಂದು ಅವರು ಪ್ರಶ್ನಿಸಿದರು.
ಸಾಲಮನ್ನಾ ಮಾಡಲು ಮುಖ್ಯಮಂತ್ರಿ ಮನಸ್ಸು ಮಾಡಿದರೆ ಸಾಕು. ಅನಗತ್ಯವಾಗಿ ಕೇಂದ್ರದತ್ತ ಬೊಟ್ಟು ಮಾಡುವ ಬದಲು ಸಾಧ್ಯವಾದಷ್ಟು ಕೆಲಸ ಮಾಡಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಅವರು ಸಲಹೆ ನೀಡಿದರು.
ಜಿಲ್ಲಾ ಮಟ್ಟದ ಸಚಿವ ಸಂಪುಟ ಸಭೆಗೂ ಆಕ್ಷೇಪ
ಜಿಲ್ಲೆಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವ ಸರ್ಕಾರದ ಕ್ರಮಕ್ಕೂ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. “ವಿಧಾನಸೌಧ ಇರುವುದು ಏಕೆ? ಜಿಲ್ಲೆ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸುವುದರಿಂದ ಏನು ಸಾಧನೆ? ಈ ಹಿಂದೆ ಹಲವು ಜಿಲ್ಲೆಗಳಲ್ಲಿ ಕ್ಯಾಬಿನೆಟ್ ಸಭೆ ನಡೆದಿವೆ. ಅದರಿಂದ ಜನರಿಗೆ ಎಷ್ಟು ಫಲ ಸಿಕ್ಕಿದೆ?” ಎಂದು ಪ್ರಶ್ನಿಸಿದರು.
ಜಿಲ್ಲೆಗಳಿಗೆ ತೆರಳಿ ಸಭೆ ನಡೆಸುವ ಸಂದರ್ಭದಲ್ಲಿ ಆಗುವ ದುಂದುವೆಚ್ಚವನ್ನು ಕಡಿಮೆ ಮಾಡಿ, ಆ ಹಣವನ್ನು ರೈತರ ಸಂಕಷ್ಟ ನಿವಾರಣೆಗೆ ಬಳಸಬಹುದಿತ್ತು. “ಇದೇನು ಟೂರಿಂಗ್ ಟಾಕೀಸಾ?” ಎಂದು ಅವರು ಸರ್ಕಾರದ ಕ್ರಮವನ್ನು ವ್ಯಂಗ್ಯವಾಡಿದರು.
ಬರಪೀಡಿತ ಪ್ರದೇಶಗಳ ರೈತರಿಗೆ ತಕ್ಷಣ ಪರಿಹಾರ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಬೆಳೆ ನಷ್ಟಕ್ಕೆ ಸೂಕ್ತ ನೆರವು ಕಲ್ಪಿಸುವತ್ತ ಸರ್ಕಾರ ಆದ್ಯತೆ ನೀಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು. ಕಸ್ತೂರಿರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತವಾಗುತ್ತಿದೆ ಈ ವರದಿ ಜಾರಿಯಾಗಬಾರದು ಎಂಬ ನಿಲುವಿಗೆ ನನ್ನ ಬೆಂಬಲವೂ ಇದೆ ಈ ಭಾಗದ ಜನರ ಮಾತಿಗೆ ನಾವೆಲ್ಲ ದ್ವನಿ ಯಾಗಬೇಕು ಎಂದು ಹೇಳಿದರು ಕುಮಾರಸ್ವಾಮಿ ಹಿಟ್‌ಅಂಡ್ ರನ್ ಎಂಬ ಟೀಕೆಗಳಿಗೆ ಪ್ರತಿಕ್ರಿಸಿದ ಅವರು ಯಾರು ಹಿಟ್ ಅಂಡ್ ರನ್ ಎಂಬುದನ್ನ ಕಾಲ ನಿರ್ಧರಿಸುತ್ತದೆ ಗ್ರಾಮೀಣಾಭಿವೃದ್ಧಿ ಇಂಜಿನಿಯರ್ ಗಳ ನೇಮಕಾತಿ ಸಂಬಂಧ ನಾನು ಕೇಳಿದ್ದ ಪ್ರಶ್ನೆಗೆ ಪ್ರಿಯಾಂಕ ಖರ್ಗೆ ಇದುವರೆಗೂ ಉತ್ತರ ನೀಡಿಲ್ಲ.
ಎಂದರು ಕೆಲ ನಾಯಕರು ನನ್ನ ಬಳಿ ಬಂದು ನಮ್ಮವರೊಬ್ಬರು ಮುಖ್ಯಮಂತ್ರಿಯಾಗಿದ್ದಾರೆ ಬಿಟ್ಟುಬಿಡಿ ಎಂದೆಲ್ಲಾ ಮಾತನಾಡಿದ್ದಾರೆ ಆಗ ನಾನು ಹಳೆಯದನ್ನೆಲ್ಲ ಬಿಡುತ್ತೇನೆ ಮುಂದಾದರು ಒಳ್ಳೆಯ ಕೆಲಸ ಮಾಡಿಕೊಂಡು ಹೋಗುತ್ತಾರ ಕೇಳಿ ಎಂದು ಮರು ಪ್ರಶ್ನೆ ಹಾಕಿದ್ದೇನೆ ಒಂದು ಜಾತಿಯವರು ಮುಖ್ಯಮಂತ್ರಿ ಆದ ತಕ್ಷಣ ಆ ಜಾತಿಯವರೆಲ್ಲ ಸಂಪತ್ ಭರಿತರಾಗುತ್ತಾರಾ ಮುಖ್ಯಮಂತ್ರಿ ಹುದ್ದೆ ಒಂದು ಜಾತಿಗೆ ಸೀಮಿತವಲ್ಲ ಆರೂವರೆ ಕೋಟಿ ಕನ್ನಡಿಗರ ಹಿತ ರಕ್ಷಣೆಗೆ ಇರುವುದು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.































