
ಚನ್ನಮ್ಮನ ಕಿತ್ತೂರು,ಮೇ೨೮: ಕ್ಷೇತ್ರದ ವಿವಿಧಡೆ ತಾಲೂಕಿನ ಮಾರ್ಗನ ಕೊಪ್ಪ ಗ್ರಾಮದ ಪ್ರಮುಖ ಸಿಸಿ ಹಾಗೂ ಮೆಟ್ಲಿಂಗ್ ಕಾಮಗಾರಿಗೆ ಶಾಸಕ ಬಾಬಾಸಾಹೇಬ ಪಾಟೀಲ್ ಭೂಮಿ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಜೊತೆಗೆ ಇದೇ ಗ್ರಾಮದ ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೂ ಚಾಲನೆ ನೀಡಲಾಯಿತು.
ನಂತರ ಅವರು ಮಾತನಾಡಿ ಈ ಕಾಮಗಾರಿಗಳು ಕಳಪೆಯಾಗದಂತೆ ಗುತ್ತಿಗೆದಾರರು ನೋಡಿಕೊಳ್ಳಬೇಕು. ಈಗಾಗಲೇ ಕ್ಷೇತ್ರದ ಹಲವು ರಸ್ತೆ ಕಾಮಗಾರಿಗಳು ಪೂರ್ಣಗೊಂಡಿದ್ದು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ ಎಂದರು.
ಈ ವೇಳೆ ಮುಖಂಡರುಗಳಾದ ಬ್ಲಾಕ ಅಧ್ಯಕ್ಷ ಸಂಗನಗೌಡ ಪಾಟೀಲ್, ಶಿವಯೋಗಿ ದೊಡ್ಡಮನಿ, ಸುರೇಶ ಕಾಕತಿ, ಸಾಗರ್ ದೇಸಾಯಿ, ಲಕ್ಷ÷್ಮಣ್ ಪಾಟೀಲ್, ಮಾಜಿ ತಾಪಂ ಸದಸ್ಯ ಮುದಕಪ್ಪ ಮರಡಿ, ಪಿಡಿಓ ವಿನಾಯಕ ಕೊರವಿ ಬಸನಗೌಡ ಪಾಟೀಲ್, ಬಸವರಾಜ ಬಸರಕೋಡ, ಶಿವು ಪಾಟೀಲ, ಅಪುö್ಪ ಕಳಸನ್ನವರ್, ಮರೆಣ್ಣವರ್ ಸೇರಿದಂತೆ ಗ್ರಾಮಸ್ಥರು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

























