Home ಜಿಲ್ಲೆ ಡಾ.ಬಾಬು ಜಗಜೀವನರಾಮ ರವರ ಜಯಂತಿ

ಡಾ.ಬಾಬು ಜಗಜೀವನರಾಮ ರವರ ಜಯಂತಿ

ಹುಬ್ಬಳ್ಳಿ,ಏ6: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕೇಂದ್ರ ಕಛೇರಿ, ಹುಬ್ಬಳ್ಳಿಯಲ್ಲಿ ಡಾ.ಬಾಬು ಜಗಜೀವನರಾಮ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವುದರ ಮೂಲಕ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮುಖ್ಯ ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿಗಳಾದ ಇಮಾಮ್ ಕಾಸಿಮ್ ಕಂದಗಲ್ ಮಾತನಾಡಿದರು.
ಅಧ್ಯಕ್ಷರ ಆಪ್ತ ಕಾರ್ಯದರ್ಶಿಗಳಾದ ಪಿ.ಆರ್.ಕಿರಣಗಿ ರವರು ಡಾ.ಬಾಬು ಜಗಜೀವನರಾಮ ಜೀವನ ಚರಿತ್ರೆಯ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿ.ಎಫ್.ಬಿಜಾಪೂರ, ಜಯಪ್ಪ ಮಳಗಿ, ದ್ಯಾಮಣ್ಣ ಭಜಂತ್ರಿ ಹಾಗೂ ಕೇಂದ್ರ ಕಛೇರಿಯ ಇನ್ನಿತರ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿ.ಎಫ್ ಬಿಜಾಪೂರ ರವರು ನಿರೂಪಿಸಿ ವಂದಿಸಿದರು.