Home ಜಿಲ್ಲೆ ಕಲಬುರಗಿ ಕನ್ನಡ ನಾಡು-ನುಡಿಗೆ ಡಾ.ಎ.ಎನ್.ನರಸಿಂಹಯ್ಯನವರ ಕೊಡುಗೆ ಅನನ್ಯ

ಕನ್ನಡ ನಾಡು-ನುಡಿಗೆ ಡಾ.ಎ.ಎನ್.ನರಸಿಂಹಯ್ಯನವರ ಕೊಡುಗೆ ಅನನ್ಯ

ಕಲಬುರಗಿ:ಮೇ.23: ಡಾ.ಎ.ಎನ್.ನರಸಿಂಹಯ್ಯನವರು ಕನ್ನಡ ನಾಡು-ನುಡಿಯನ್ನು ಕಟ್ಟಿ ಬೆಳೆಸುವಲ್ಲಿ ಅಆರವಾಗಿ ಶ್ರಮಿಸಿದ್ದಾರೆ. ಶಿಕ್ಷಣ ತಜ್ಞ, ಕನ್ನಡದ ವಿದ್ವಾಂಸರಾಗಿದ್ದ ಅವರು, ಬಂಗಾಳಿ ಭಾμÉಯನ್ನು ಅಧ್ಯಯನ ಮಾಡಿ ಕನ್ನಡಕ್ಕೆ ತಂದವರಲ್ಲಿ ಮೊದಲಿಗರು. ರವೀಂದ್ರನಾಥ ಠಾಕೂರರ ಸಾಹಿತ್ಯ ಪ್ರಬಂಧಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಉಪನ್ಯಾಸಕ,ಲೇಖಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪದ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀμï ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ‘ಡಾ.ಎ.ಎನ್.ನರಸಿಂಹಯ್ಯನವರ 136ನೇ ಜನ್ಮದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ನರಸಿಂಹಯ್ಯನವರು ಶಿಕ್ಷಣ ಇಲಾಖೆಯ ಕೋರಿಕೆಯಂತೆ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಶಾಲೆಗಳ ಉಪಯೋಗಕ್ಕಾಗಿ ಪ್ರತ್ಯೇಕ ಕನ್ನಡ ವ್ಯಾಕರಣ ಪುಸ್ತಕಗಳನ್ನೂ ಸಿದ್ಧಗೊಳಿಸಿದರು. ‘ಕನ್ನಡ ಪ್ರಥಮ ವ್ಯಾಕರಣ’ ಎಂಬುದು ಹಲವಾರು ಮುದ್ರಣ ಕಂಡ ಪುಸ್ತಕ. ಪುರಾಣ ಪರಿಚಯ(1935) ಎಂಬುದು ಮತ್ತೊಂದು ಕಿರು ಪುಸ್ತಕ. ಇದಲ್ಲದೆ ಸಂಸ್ಕøತದಲ್ಲಿ ‘ಸಂಗೀತ ಗಂಗಾಧರಂ’ ಮತ್ತು ‘ಶಿವಪಾದ ರೇಣುಕಾ ಸಹಸ್ರಂ’ ಎಂಬ ಎರಡು ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ‘ಕಾಶಕೃತ್ಸ್ನ ಶಬ್ದ ಕಲಾಪ ಧಾತುಪಾಟ’ ಎಂಬ ನಿಘಂಟನ್ನು ಪುಣೆಯ ಡೆಕ್ಕನ್ ಕಾಲೇಜಿನ ಸ್ನಾತಕೋತ್ತರ ಹಾಗೂ ಸಂಶೋಧನ ವಿಭಾಗದವರು ಪ್ರಕಟಿಸಿದ್ದಾರೆ. ಪಾಳಿ ಮತ್ತು ಸಂಸ್ಕøತ ವ್ಯಾಕರಣ ಶಾಸನಗಳಲ್ಲಿನ ಹಸ್ತಪ್ರತಿ ರೂಪದಲ್ಲಿದ್ದು ಅವುಗಳನ್ನು ಮುದ್ರಣ ಮಾಡುವ ಕಾರ್ಯವಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಸಾಹಿತಿ ಶಿವಯೋಗೆಪ್ಪಾ ಎಸ್.ಬಿರಾದಾರ, ಡಾ.ರಾಜಶೇಖರ ಪಾಟೀಲ, ದಿನೇಶ್ ಮಿಶ್ರಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.