
ಕಲಬುರಗಿ,ಜು.2: ನಗರದ ಎಸ್. ಆರ್. ಎನ್. ಮೆಹ್ತಾ ಸಿ.ಬಿ.ಎಸ್.ಇ ಶಾಲೆಯಲ್ಲಿ ಡಾಕ್ಟರ್ಸ್ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಪ್ರತಿಯೊಬ್ಬರೂ ಆರೋಗ್ಯ ಶಿಕ್ಷಣದ ಬಗ್ಗೆ ಮಾಹಿತಿ ಹೊಂದುವುದರೊಂದಿಗೆ ಸದೃಢವಾದ ಆರೋಗ್ಯ ಕಾಪಾಡಿಕೊಂಡು ಸ್ವಾಸ್ಥ್ಯ ಜೀವನ ನಡೆಸಬೇಕು ಎಂದು ಮಾರ್ಗದರ್ಶನ ಮಾಡಿದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಮಲ್ಹಾರರಾವ್ ಮಲ್ಲೆ ಅವರು ಉತ್ತಮ ಆರೋಗ್ಯಕರ ಮಾಹಿತಿ ನೀಡಿದರು. ಸುಮಾರು 95 ವಿದ್ಯಾರ್ಥಿಗಳು ವೈದ್ಯರ ಉಡುಗೆ ಧರಿಸಿಕೊಂಡು ಕಾರ್ಯಕ್ರಮದಲ್ಲಿ ಮೆರುಗು ನೀಡಿದರು.
ಕಾರ್ಯಕ್ರಮದಲ್ಲಿ ಎಸ್. ಆರ್. ಎನ್. ಮೆಹ್ತಾ ಶಾಲೆಯ ಪ್ರಾಂಶುಪಾಲ ರಾಜ ಶೇಖರ ರೆಡ್ಡಿ ಅವರು ಮತ್ತು ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು.
























