Home ಜಿಲ್ಲೆ ರೈತ ಮುಖಂಡರೊಂದಿಗೆ ಜಿಲ್ಲಾಧಿಕಾರಿಗಳ ಸಭೆ

ರೈತ ಮುಖಂಡರೊಂದಿಗೆ ಜಿಲ್ಲಾಧಿಕಾರಿಗಳ ಸಭೆ

ಧಾರವಾಡ, ಏ.17: ಜಿಲ್ಲೆಯ ರೈತರಿಂದ ಕೃಷಿ ಹಾಗೂ ರೈತರ ಅಹವಾಲುಗಳನ್ನು ಸ್ವೀಕರಿಸಿ, ಪರಿಹರಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ರೈತ ಮುಖಂಡರುಗಳ, ರೈತರ ಸಭೆ ಜರುಗಿಸಿದರು.


ಸಭೆಯಲ್ಲಿ ಮಾತನಾಡಿದ ವಿವಿಧ ರೈತ ಮುಖಂಡರು ಕಡಲೆ ಖರೀದಿ, ಸಕ್ಕರೆ ಕಾರ್ಖಾನೆ ಆರಂಭ, ಗೋವಿನಜೋಳ, ಸೂರ್ಯಕಾಂತಿ, ಕುಸಬೆ ಖರೀದಿಗೆ ಪ್ರಾಸ್ತಾವನೆ ಸಲ್ಲಿಕೆ, ಸರಿಯಾದ ಸಮಯಕ್ಕೆ ವಿದ್ಯುತ್ ಪೂರೈಕೆ, ಬೀಜ, ರಸಗೊಬ್ಬರ ಪೂರೈಕೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಅನೇಕ ವಿಷಯಗಳ ಕುರಿತು ಜಿಲ್ಲಾಧಿಕಾರಿಗಳಿಗೆ ವಿವರಿಸಿ, ಪರಿಹಾರಕ್ಕೆ ಮನವಿ ಮಾಡಿದರು.


ರೈತರ ಮುಖಂಡರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮಾತನಾಡಿ, ಜಿಲ್ಲಾಮಟ್ಟದಲ್ಲಿ ಕ್ರಮವಹಿಸಿ, ಪರಿಹರಿಸಬಹುದಾದ ಸಮಸ್ಯೆಗಳಿಗೆ ಇಲಾಖಾ ಅಧಿಕಾರಿಗಳನ್ನು ಕರೆದು ಸಭೆ ಜರುಗಿಸಿ, ಸೂಕ್ತ ಕ್ರಮವಹಿಸಲಾಗುತ್ತದೆ. ಸರ್ಕಾರದ ಹಂತದಲ್ಲಿ ಆಗಬೇಕಾಗಿರುವ ಕ್ರಮಗಳ ಕುರಿತು ಪ್ರಸ್ತಾವನೆಗಳನ್ನು ಜಿಲ್ಲಾಡಳಿತದಿಂದ ಸಲ್ಲಿಸಲಾಗುವುದು ಎಂದು ಹೇಳಿದರು.


ಪ್ರತಿ ರೈತರು ಫ್ರೂಟ್ಸ್ ಐಡಿ ಹೊಂದುವುದು ಈಗ ಕಡ್ಡಾಯವಾಗಿದೆ. ಕಾರಣ ಫ್ರೂಟ್ಸ್ ಐಡಿ ಆಧರಿಸಿ, ರಸಗೊಬ್ಬರ, ಬೀಜ, ಬೆಳೆ ಪರಿಹಾರ ಹಾಗೂ ಕೃಷಿಗೆ ಸಂಬಂಧಿಸಿದ ಇತರ ಸರ್ಕಾರಿ ಸೌಲಭ್ಯಗಳನ್ನು ನೀಡಲು ಸರ್ಕಾರವು ಫ್ರೂಟ್ಸ್ ಐಡಿಯನ್ನು ಅವಲಂಭಿಸಿದೆ. ಆದ್ದರಿಂದ ಪ್ರತಿಯೊಬ್ಬ ರೈತರು ತಾವು ಹೊಂದಿರುವ ಎಲ್ಲ ಜಮೀನುಗಳನ್ನು ಫ್ರೂಟ್ಸ್ ತಂತ್ರಾಂಶಕ್ಕೆ ಒಳಗೊಳ್ಳುವಂತೆ ಮಾಡಬೇಕು. ಪ್ರಸಕ್ತ ಸಾಲಿನಲ್ಲಿ ಫ್ರೂಟ್ಸ್ ಐಡಿ ಹೊಂದಿರುವ ರೈತರಿಗೆ ಮಾತ್ರ ರಸಗೊಬ್ಬರ ವಿತರಿಸಲು ಸರ್ಕಾರ ಸೂಚಿಸಿದೆ.


ಕೃಷಿ ಇಲಾಖೆ ಅಭಿವೃದ್ಧಿ ಪಡಿಸಿರುವ ಪ್ರೂಟ್ಸ್ ತಂತ್ರಾಂಶದಲ್ಲಿ ಧಾರವಾಡ ಜಿಲ್ಲೆಯ 3,21,762 ಜಮೀನುಗಳು (ತಾಕುಗಳು) ಪ್ರೂಟ್ಸ್ (ಈಖUIಖಿS) ತಂತ್ರಾಂಶದಲ್ಲಿ ನೋಂದಣಿ ಆಗಬೇಕಿದ್ದು, ಇದರಲ್ಲಿ ಈಗಾಗಲೇ 2,47,145 ಜಮೀನುಗಳು (ತಾಕುಗಳು) ಯಶಸ್ವಿಯಾಗಿ ನೋಂದಣಿಯಾಗಿವೆ. ಮತ್ತು 74,617 ಜಮೀನುಗಳು (ತಾಕುಗಳು) ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಪ್ರಗತಿಯಲ್ಲಿದೆ. ಒಟ್ಟಾರೆ ಶೇ. 77 ರಷ್ಟು ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ದಾಖಲಾಗಿದ್ದು, ಜಿಲ್ಲೆಯ ಒಟ್ಟು 2,44,870 ರೈತರು ಪ್ರೂಟ್ಸ್ ಗುರಿತನ ಸಂಖ್ಯೆ (ಐಡಿ) ಹೊಂದಿದ್ದಾರೆ. ಉಳಿದ ರೈತರು ಆದಷ್ಟು ಬೇಗ ಫ್ರೂಟ್ಸ್ ತಂತ್ರಾಂಶಕ್ಕೆ ನೋಂದಣಿಯಾಗಬೇಕು ಎಂದು ಅವರು ಹೇಳಿದರು.


ಬೆಳೆ ಹಾನಿ ಸಂಭವಿಸಿದ ಸಂದರ್ಭದಲ್ಲಿ ಪರಿಹಾರ ವಿತರಣೆಯನ್ನು ವಿಳಂಬವಿಲ್ಲದೆ ನೀಡುವಂತೆ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಿದರು. ರೈತರು ಅರ್ಜಿ ಸಲ್ಲಿಸಿದ ನಂತರ ತ್ವರಿತವಾಗಿ ಪರಿಶೀಲನೆ ನಡೆಸಿ, ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಪರಿಹಾರವನ್ನು ನೀಡಬೇಕು ಎಂದು ಅವರು ಹೇಳಿದರು.


ರಸಗೊಬ್ಬರ ಅಕ್ರಮ ತಡೆಗಟ್ಟಲು ಕೃಷಿ ಇಲಾಖೆಯು ಎಫ್‍ಐಡಿ ಕಡ್ಡಾಯಗೊಳಿಸಿದ್ದು, ಪ್ರತಿ ತಿಂಗಳು ಎಕರೆಗೆ ಒಂದು ಚೀಲ, ಕಬ್ಬು ಬೆಳೆಗಾರರಿಗೆ ಎರಡು ಚೀಲ ಗೊಬ್ಬರ ನೀಡಲಾಗುತ್ತಿದೆ. ರೈತರು ಗೊಬ್ಬರ ಮಿತವಾಗಿ ಬಳಸಬೇಕು ಎಂದು ತಿಳಿಸಿದರು.


ವೇದಿಕೆಯಲ್ಲಿ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಗುಂಜನ್ ಆರ್ಯ, ಎಡಿಸಿ ಗೀತಾ ಸಿ.ಡಿ., ಜಿಲ್ಲಾ ನಗರಾಭಿವೃದ್ಧಿಕೊಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಎಸಿ ಶಾಲಂ ಹುಸೇನ ಉಪಸ್ಥಿತರಿದ್ದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಸ್ವಾಗತಿಸಿ, ಸಭೆ ನಿರ್ವಹಿಸಿದರು.


ಸಭೆಯಲ್ಲಿ ತೋಟಗಾರಿಕೆ ಜಂಟಿ ನಿರ್ದೇಶಕ ಕೆ.ಸಿ.ಭದ್ರಣ್ಣವರ, ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ.ಸಂತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ವೀರಣ್ಣಗೌಡ ಪಾಟೀಲ, ಜಿಲ್ಲಾ ಪಂಚಾಯತ ಸಹಾಯಕ ಕಾರ್ಯದರ್ಶಿ ಅಜಯ ಎನ್. ಹಾಗೂ ರೈತ ಮುಖಂಡರಾದ ಚಂದ್ರಗೌಡ ಎಸ್.ಫಕ್ಕೀರಗೌಡ, ಮುತ್ತು ಪಾಟೀಲ, ಗಂಗಾಧರ ಪಾಟೀಲ ಕುಲಕರ್ಣಿ, ಬಸವರಾಜ ಯೋಗಪ್ಪನವರ, ಹೇಮಣ್ಣಗೌಡ ಬಸನಗೌಡರ, ವೀರೇಶ ಸೊಬರದಮಠ, ಎಚ್.ಆರ್.ಭೂದಿಹಾಳ, ಆರ್.ಡಿ.ನಡುವಿನಮನಿ, ಸಣಕಲ್ಲಪ್ಪ ಒಂಟಿ, ಮೊಲ್ಲಾಸಾಬ ನದಾಫ, ತಮ್ಮಣ್ಣ ಗುಂಡಗೊವಿ ಸೇರಿದಂತೆ ವಿವಿಧ ರೈತ ಸಂಘಟನೆಗಳ ನವಲಗುಂದ, ಅಣ್ಣಿಗೇರಿ, ಧಾರವಾಡ, ಕಲಘಟಗಿ, ಕುಂದಗೋಳ, ಹುಬ್ಬಳ್ಳಿ, ಅಳ್ನಾವರ ಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.