Home ಜಿಲ್ಲೆ ಜಿಲ್ಲಾ ಬ್ಯಾಂಕರ್ಸ್ ಪ್ರಗತಿ ಪರಿಶೀಲನಾ ಸಭೆ

ಜಿಲ್ಲಾ ಬ್ಯಾಂಕರ್ಸ್ ಪ್ರಗತಿ ಪರಿಶೀಲನಾ ಸಭೆ


ಧಾರವಾಡ,ಮಾ.೧೧: ಮಾ.೧೦: ಜಿಲ್ಲೆಯಲ್ಲಿ ಇರುವ ಎಲ್ಲ ಸರ್ಕಾರಿ, ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಎಲ್ಲ ಬ್ಯಾಂಕ್‌ಗಳು ತಮ್ಮ ಕಚೇರಿಯ ವ್ಯವಹಾರಗಳಲ್ಲಿ ಸರ್ಕಾರದ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಗ್ರಾಹಕರಿಗೆ ವಿಶೇಷವಾಗಿ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆ, ಅಸಹಕಾರ ಉಂಟಾದಲ್ಲಿ ಜಿಲ್ಲಾ ಸಮಿತಿಯು ಗಂಭೀರವಾಗಿ ಅದನ್ನು ಪರಿಗಣಿಸುತ್ತದೆ. ಮತ್ತು ನಿಯಮಾನುಸಾರ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡುತ್ತದೆ ಎಂದು ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಹೇಳಿದರು.


ಅವರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ (ಡಿಎಲ್‌ಆರ್‌ಸಿ) ಸಭೆ ಹಾಗೂ ಜಿಲ್ಲಾ ಮಟ್ಟದ ಸಲಹಾ ಸಮಿತಿ (ಡಿಸಿಸಿ) ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ಕೈಗಾರಿಕೆಗಳ ಜೊತೆಗೆ ಕೃಷಿ ವಲಯಕ್ಕೂ ಹೆಚ್ಚು ಆಧ್ಯತೆ ನೀಡಬೇಕು. ರೈತರಿಗೆ ಸಕಾಲದಲ್ಲಿ ಸಾಲ ವಿತರಿಸಬೇಕು. ಮತ್ತು ಸಾಲ ವಸೂಲಾತಿಯಲ್ಲಿ ಆರ್‌ಬಿಐ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸಾಲ ವಸೂಲಾತಿ ಬಗ್ಗೆ ತೊಂದರೆಗಳಿದ್ದರೆ, ಸಮಿತಿ ಸಭೆಯಲ್ಲಿ ಚರ್ಚಿಸಬೇಕು. ಅನಗತ್ಯವಾಗಿ ಹಾಗೂ ನಿಯಮ ಮೀರಿ ರೈತರಿಗೆ ಹಾಗೂ ಇತರರಿಗೆ ತೊಂದರೆ ನೀಡಬಾರದು ಎಂದು ಅವರು ಹೇಳಿದರು.
ಬ್ಯಾಂಕ್‌ಗಳ ವ್ಯವಹಾರದ ಬಗ್ಗೆ ಅಥವಾ ಬ್ಯಾಂಕರ್ಸ ಬಗ್ಗೆ ಗ್ರಾಹಕರಿಗೆ, ರೈತರಿಗೆ ತೊಂದರೆಗಳಿದ್ದಲ್ಲಿ ನೇರವಾಗಿ ದೂರು ಸಲ್ಲಿಸಲು ಅನುಕೂಲವಾಗುವಂತೆ ಸರಿಯಾದ ಮಾಹಿತಿಯನ್ನು ಆಯಾ ಬ್ಯಾಂಕ್ ಶಾಖೆಗಳು ನೀಡಬೇಕು. ಒಂಬುಡ್ಸöಮನ್ ಹಾಗೂ ಬ್ಯಾಂಕ್‌ಗಳ ದೂರು ಸಮಿತಿಗಳ ಬಗ್ಗೆ ಬಿತ್ತಿ ಪತ್ರಗಳನ್ನು, ಫೊಸ್ಟರ್‌ಗಳನ್ನು ಅಳವಡಿಸಬೇಕು ಎಂದು ಅವರು ಸೂಚಿಸಿದರು.


ಡಿಸೆಂಬರ್ ೨೦೨೫ ಅಂತ್ಯದವರೆಗೆ ಜಿಲ್ಲೆಯ ಒಟ್ಟು ಆದ್ಯತೆ ಕ್ಷೇತ್ರ ಸಾಲದ ಗುರಿ ಸಾಧನೆಯಾಗಿದ್ದರೂ, ಕುಂದಗೋಳ ತಾಲ್ಲೂಕಿಗೆ ನೀಡಲಾದ ಗುರಿ ಸಂಪೂರ್ಣ ಸಾಧನೆಯಾಗಿಲ್ಲ. ಕುಂದಗೋಳ ತಾಲ್ಲೂಕಿನಲ್ಲಿ ರೂ. ೪೩೨.೨೪ ಕೋಟಿ ಗುರಿಗೆ ಎದುರು ರೂ. ೪೧೬.೨೩ ಕೋಟಿ ಮಾತ್ರ ಸಾಲ ವಿತರಣೆಗೊಂಡಿದೆ. ಈ ಹಿನ್ನೆಲೆಯಲ್ಲಿ ಕುಂದಗೋಳ ತಾಲ್ಲೂಕಿನ ಎಲ್ಲಾ ಬ್ಯಾಂಕುಗಳು ವಿಶೇ?À ಗಮನ ನೀಡಿ ಮಾರ್ಚ್ ಅಂತ್ಯದೊಳಗೆ ಗುರಿ ಸಾಧಿಸಬೇಕು ಎಂದು ಸೂಚಿಸಿದರು.


ರಾಜ್ಯ ಸರ್ಕಾರದ ಅನುದಾನಿತ ಸಾಲ ಯೋಜನೆಗಳ ಕುರಿತು ಮಾತನಾಡಿದ ಅವರು, ವಿವಿಧ ಇಲಾಖೆಗಳ ಅರ್ಜಿಗಳು ಇನ್ನೂ ಮಂಜೂರಾತಿಗೆ ಬಾಕಿ ಇರುವುದನ್ನು ಗಮನಕ್ಕೆ ತಂದರು. ಅವುಗಳಲ್ಲಿ ದೇವರಾಜ ಅರಸು ಅಭಿವೃದ್ಧಿ ನಿಗಮದ ಸ್ವಾವಲಂಬಿ ಸಾರಥಿ ಯೋಜನೆಯ ೧೩, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ೧೬, ಬೋವಿ ಅಭಿವೃದ್ಧಿ ನಿಗಮದ ೭, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ೫೫ ಹಾಗೂ ಪಿಎಂ ವಿಶ್ವಕರ್ಮ ಯೋಜನೆಯ ೪೦೮ ಅರ್ಜಿಗಳು ವಿವಿಧ ಬ್ಯಾಂಕುಗಳಲ್ಲಿ ಮಂಜೂರಾತಿಗೆ ಬಾಕಿ ಇರುವುದಾಗಿ ತಿಳಿಸಿದರು.


ಇದೇ ಸಂದರ್ಭದಲ್ಲಿ ಪಿಎಂ ಸ್ವನಿಧಿ ಯೋಜನೆಯಡಿ ಇನ್ನೂ ಕೆಲವು ಸಾಲ ಅರ್ಜಿಗಳು ವಿತರಣೆಗಾಗಿ ಬಾಕಿ ಇರುವುದರಿಂದ, ಅವುಗಳನ್ನು ತಕ್ಷಣ ಮಂಜೂರು ಮಾಡಿ ವಿತರಣೆ ಪ್ರಕ್ರಿಯೆಯನ್ನು ವೇಗಗೊಳಿಸಬೇಕು. ಎಲ್ಲಾ ಯೋಜನೆಗಳ ಬಾಕಿ ಇರುವ ಅರ್ಜಿಗಳನ್ನು ಮಾರ್ಚ್ ಅಂತ್ಯದೊಳಗೆ ನಿವಾರಣೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಭುವನೇಶ ಪಾಟೀಲ ಅವರು ಬ್ಯಾಂಕುಗಳಿಗೆ ಕಡ್ಡಾಯವಾಗಿ ಸೂಚಿಸಿದರು.
ಜಿಲ್ಲಾ ಮಟ್ಟದ ಸಮಾಲೋಚನಾ ಸಮಿತಿ (ಆಐಖಅ) ಸಭೆಯಲ್ಲಿ ಸಾರ್ವಜನಿಕರ ದೂರು ಪರಿಹಾರ ವ್ಯವಸ್ಥೆ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ದೇವಿದಾಸ್ ಪಾಟೀಲ ಅವರು ಬ್ಯಾಂಕುಗಳು ಸಾರ್ವಜನಿಕರಿಗೆ ದೂರು ಪರಿಹಾರ ವ್ಯವಸ್ಥೆಯ ಕುರಿತು ಸರಿಯಾದ ಮಾಹಿತಿ ನೀಡಬೇಕು ಎಂದು ಸೂಚಿಸಿದರು.


ಸಭೆಯಲ್ಲಿ ಉಪಸ್ಥಿತರಿದ್ದ ಭಾರತೀಯ ರಿಸರ್ವ್ ಬ್ಯಾಂಕ್‌ನ ಸಹಾಯಕ ಮಹಾಪ್ರಬಂಧಕ ಅರುಣಕುಮಾರ್ ಅವರು ಆರ್‌ಬಿಐ ಒಂಬುಡ್ಸöಮನ್ ದೂರು ಪರಿಹಾರ ಪ್ರಕ್ರಿಯೆ ಕುರಿತು ವಿವರಿಸಿದರು. ಬ್ಯಾಂಕಿAಗ್ ಸೇವೆಗಳ ಕುರಿತು ಗ್ರಾಹಕರಿಗೆ ಯಾವುದೇ ದೂರು ಇದ್ದಲ್ಲಿ ಮೊದಲು ಸಂಬAಧಿಸಿದ ಬ್ಯಾಂಕ್ ಶಾಖೆಗೆ ಅಥವಾ ಬ್ಯಾಂಕ್‌ನ ಗ್ರಾಹಕ ಸೇವಾ ಕೇಂದ್ರಕ್ಕೆ ಲಿಖಿತವಾಗಿ ಅಥವಾ ಆನ್‌ಲೈನ್ ಮೂಲಕ ದೂರು ಸಲ್ಲಿಸಬೇಕು ಎಂದು ತಿಳಿಸಿದರು.


ಗ್ರಾಹಕರು hಣಣಠಿs://ems.ಡಿbi.oಡಿg.iಟಿ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ದೂರು ದಾಖಲಿಸಬಹುದು. ಈ ಮೂಲಕ ಆರ್‌ಬಿಐ ಸಂಬAಧಿಸಿದ ಬ್ಯಾಂಕಿನಿAದ ವಿವರ ಪಡೆದು ದೂರು ಪರಿಶೀಲಿಸಿ ಪರಿಹಾರ ಕ್ರಮ ಕೈಗೊಳ್ಳುತ್ತದೆ. ಸಾರ್ವಜನಿಕರು ಬ್ಯಾಂಕಿAಗ್ ಸೇವೆಗಳ ಕುರಿತು ಯಾವುದೇ ತೊಂದರೆ ಎದುರಾದರೆ ಈ ಆರ್‌ಬಿಐ ಒಂಬುಡ್ಸöಮನ್ ದೂರು ಪರಿಹಾರ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು.


ಧಾರವಾಡ ಜಿಲ್ಲೆಯಲ್ಲಿ ಬ್ಯಾಂಕುಗಳು ಆದ್ಯತೆ ಕ್ಷೇತ್ರ (Pಡಿioಡಿiಣಥಿ Seಛಿಣoಡಿ) ಅಡಿಯಲ್ಲಿ ಒಟ್ಟು ರೂ. ೧೧,೫೮೭.೬೮ ಕೋಟಿ ಸಾಲವನ್ನು ಮಂಜೂರು ಮಾಡಿರುವುದಾಗಿ ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಬಡವರಾಜ ಗಡದವರ ಅವರು ಮಾಹಿತಿ ನೀಡಿದರು.


ಧಾರವಾಡದ ಲೀಡ್ ಬ್ಯಾಂಕ್ ಮ್ಯಾನೇಜರ್ ಬಡವರಾಜ ಗಡದವರ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.
ಸಭೆಯಲ್ಲಿ ಬ್ಯಾಂಕ್ ಆಫ್ ಬರೋಡಾದ ಉಪ ಪ್ರಾದೇಶಿಕ ವ್ಯವಸ್ಥಾಪಕ ಅಮರೀಶ್ ಗೌಡ, ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

¸