
ಕಲಬುರಗಿ,ಜು.7: ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯ ಪ್ರಾರಂಭಗೊಂಡು ಐದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ‘ಸಹಕಾರ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಚಿತ್ತಾಪುರ ತಾಲೂಕಿನ ಹೆಬ್ಬಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದಲ್ಲಿ ಸೋಮವಾರ (ದಿನಾಂಕ: 06-07-2026 ರಂದು) ಯಶಸ್ವಿನಿ ಕಾರ್ಡ್ ವಿತರಿಸುವ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕ ಅಣವೀರಪ್ಪ, ಗ್ರಾಮ ಪಂಚಾಯತಿಯ ಅಧ್ಯಕ್ಷ ಸುನಿಲ್ ವಟಾವಟಿ, ಮಾಜಿ ಗ್ರಾಮ್ ಪಂಚಾಯಿತಿಯ ಅಧ್ಯಕ್ಷ ನಾಗರಾಜ್ ದಿವಟಗಿ ಹಾಗೂ ಸಂಘದ ಕಾರ್ಯದರ್ಶಿಗಳಾದ ರೇವಣಸಿದ್ದಪ್ಪ, ಜಿಲ್ಲಾ ಸಹಕಾರ ಒಕ್ಕೂಟ ಸಿಬ್ಬಂದಿ ವರ್ಗದವರು ಮತ್ತು ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದರು.



























