
ಧಾರವಾಡ, ಏ.2: ಪೆÇಲೀಸ್ ಇಲಾಖೆಯು ತ್ಯಾಗ, ಶಿಸ್ತು, ಸಮಯಪ್ರಜ್ಞೆಗೆ ಸಾಕ್ಷಿಯಾಗಿದೆ. ಪೆÇಲೀಸ್ ಸಿಬ್ಬಂದಿಗಳಲ್ಲಿನ ಶಿಸು,್ತ ಸಾಮಾಜಿಕ ಕಳಕಳಿ ಮತ್ತು ಸಮಯ ಪ್ರಜ್ಞೆಯು ನಮ್ಮ ಗೌರವ ಹೆಚ್ಚಿಸುತ್ತದೆ. ಇಲಾಖೆಗೆ ಸೇರುವಾಗ ಕೇಳಿದ ಪಾಠ, ಇಲಾಖೆಯ ನೀತಿ ನಿಯಮಗಳನ್ನು ನಿವೃತ್ತಿಯವರೆಗೂ ಸ್ಮರಿಸಿ ಅಳವಡಿಸಿಕೊಂಡು ಮುನ್ನಡೆದರೆ, ಸಾರ್ಥಕ ಸೇವೆ ನಮ್ಮದಾಗುತ್ತದೆ ಎಂದು ನಿವೃತ್ತ ಪೆÇಲೀಸ್ ಉಪನಿರೀಕ್ಷಕಿ ಡಿ. ಚಾಮುಂಡೇಶ್ವರಿ ಅವರು ಹೇಳಿದರು.
ಅವರು ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೆÇಲೀಸ್ ಪಡೆಯ ಕವಾಯತು ಮೈದಾನದಲ್ಲಿ ಜಿಲ್ಲಾ ಪೆÇಲೀಸ್ ಇಲಾಖೆ ಆಯೋಜಿಸಿದ ಪೆÇಲೀಸ್ ಧ್ವಜ ದಿನಾಚರಣೆ ಮತ್ತು ನಿವೃತ್ತರ ಸೇವಾ ಸ್ಮರಣೆ ಹಾಗೂ ಗೌರವ ಸಮರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು.
ಪೆÇಲೀಸ್ ಇಲಾಖೆ ಒಂದು ಕುಟುಂಬವಿದ್ದಂತೆ, ಕೆಳಹಂತದ ಅಧಿಕಾರಿ ಸಿಬ್ಬಂದಿಗಳು ಆಕಸ್ಮಿಕವಾಗಿ ಮಾಡುವ ತಪ್ಪುಗಳನ್ನು ಮನ್ನಿಸಿ, ಹಿರಿಯ ಅಧಿಕಾರಿಗಳು ಮಾರ್ಗದರ್ಶನ ನೀಡಬೇಕು. ಇಲಾಖೆಯಿಂದ ಸಿಗುವ ಪೆÇ್ರೀತ್ಸಾಹ, ಗೌರವ, ಪ್ರೀತಿ, ವಿಶ್ವಾಸಗಳು ಸಿಬ್ಬಂದಿಗಳಲ್ಲಿ ಆತ್ಮವಿಶ್ವಾಸ ತುಂಬಿ ಅವರ ವೃತ್ತಿಪರತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಪೆÇಲೀಸ್ ಇಲಾಖೆಯಲ್ಲಿ ಸಾಕಷ್ಟು ಆಧುನಿಕತೆ ಬಂದಿದೆ. ಅಪರಾಧ ಪತ್ತೆ, ಇಲಾಖೆಯಲ್ಲಿ ಚೈತನ್ಯ, ವೃತ್ತಿ ಕೌಶಲ್ಯ ತುಂಬಲು ವಿಜ್ಞಾನ ತಂತ್ರಜ್ಞಾನ ಬಳಸಲಾಗುತ್ತಿದೆ. ಎಲ್ಲರೂ ಹೊಸತನ್ನು ಅಳವಡಿಸಿಕೊಂಡು ಸುಗಮವಾಗಿ ಮತ್ತು ಅಕ್ಕರೆಯಿಂದ ತಮ್ಮ ಕೆಲಸಕಾರ್ಯಗಳನ್ನು ನಿರ್ವಹಿಸುವ ವಾತಾವರಣ ಎಲ್ಲಾ ಪೆÇಲೀಸ್ ಕಚೇರಿ ಮತ್ತು ಠಾಣೆಗಳಲ್ಲಿ ಮೂಡಬೇಕೆಂದು ಅವರು ಹೇಳಿದರು.
ನಮ್ಮ ಪೆÇಲೀಸ್ ಇಲಾಖೆಯಲ್ಲಿ ನಾವೆಲ್ಲರೂ ಒಂದು ಕುಟುಂಬದಂತೆ ಬದುಕುತ್ತಿದ್ದೇವೆ. ಒಬ್ಬರಿಗೆ ನೋವಾದರೆ ಇನ್ನೊಬ್ಬರು ಅದಕ್ಕೆ ಸಹಾಯಕವಾಗಿ ಸ್ಪಂದಿಸುವ ಮನೋಭಾವ ನಮ್ಮೆಲ್ಲರದು. ಎಲ್ಲಾ ರೀತಿಯ ಅಡೆತಡೆಗಳು ಇಲಾಖೆಯಲ್ಲಿ ಬರುತ್ತದೆ. ಅವುಗಳಿಗೆ ತಗ್ಗದೇ ಬಗ್ಗದೇ, ಹೆದರದೇ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ ಎಂದು ಡಿ.ಚಾಮುಂಡೇಶ್ವರಿ ಅವರು ಹೇಳಿದರು.
ಇಲಾಖೆಗೆ ಬಂದ ಮೇಲೆ ಇಲಾಖೆಯನ್ನು ಬೈಯುವುದು, ಹೀಯಾಳಿಸುವುದು ಅದು ನೌಕರರಿಗೆ ಶೋಭೆಯಲ್ಲ, ಒಂದು ಸಲ ನಮ್ಮ ಪಾಲಿಗೆ ಬಂದಿದ್ದು ಪಂಚಾಮೃತವೆಂದು ನಾವು ನಮ್ಮ ಆತ್ಮಸಂತೋಷದಿಂದ ಸ್ವೀಕರಿಸದರೆ, ಅದು ನಮ್ಮ ಜೀವನದ ವೈಭವವಾಗುತ್ತದೆ. ಮತ್ತು ಇಲಾಖೆಗೆ ಕಳಸವಾಗುತ್ತದೆ. ಪೆÇಲೀಸ್ ಇಲಾಖೆಯಲ್ಲಿ ಹಲವಾರು ರೀತಿಯ ಆಧುನಿಕ ತಂತ್ರಜ್ಞಾನ, ಅಪರಾಧ ಪತ್ತೆ ಹಚ್ಚುವ ಹಲವಾರು ವಿಧಾನಗಳು ಈಗಾಗಲೇ ಆವಿμÁ್ಕರ ಮಾಡಿ ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಗುಂಜನ್ ಆರ್ಯ ಅವರು ಸ್ವಾಗತಿಸಿ ಪೆÇಲೀಸ್ ಕಲ್ಯಾಣ ಚಟುವಟಿಕೆಗಳ ಕುರಿತು ವರದಿ ವಾಚನ ಮಾಡಿದರು. ಎಸ್‍ಆರ್‍ಎಸ್‍ಐಗಳಾದ ವೈಎಂ ದೊಡ್ಡಮನಿ ಹಾಗೂ ಪಿ.ಎಚ್.ಡಾವಣಗೇರಿ ಅವರು ಕಾರ್ಯಕ್ರಮ ನಿರೂಪಿಸಿದರು. ಡಿಎಆರ್ ಡಿಎಸ್‍ಪಿ ಡಿ.ಎಸ್.ಧನಗರ ಅವರು ವಂದಿಸಿದರು.
ನಿವೃತ್ತರಿಗೆ ಗೌರವ ಸಮರ್ಪಣೆ: ಪೊಲೀಸ್ ಇಲಾಖೆಯಲ್ಲಿ ದೀಘಾವದಿಗೆ ಸೇವೆ ಸಲ್ಲಿಸಿ ನಿವೃತ್ತರಾದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಾದ ಪಿಎಸ್‍ಐ ಎಂ.ಹೆಚ್.ಮುಂದಿನಮನಿ, ಪಿಎಸ್‍ಐ ಆರ್.ಬಿ.ಹಳ್ಳಿ, ಮಹಿಳಾ ಪಿಎಸ್‍ಐ ಕೆ.ವಿ ವಾಲಿಕಾರ ಹಾಗೂ ಎಎಸ್‍ಐಗಳಾದ ಎಸ್.ಐ.ಗದಗ, ಎಸ್.ಸಿ.ಗಂಡಲಾಟಿ, ಹೆಚ್.ಟಿ.ಬಂಡಿವಡ್ಡರ, ಐ.ಡಿ.ಭಾವಿಮನಿ, ಎಂ.ಆರ್.ಗೋಲಂದಾಜ್, ವೈ.ಎಸ್.ಮೇಟಿ, ಹೆಚ್.ಜೆ.ಜಾಧವ ಮತ್ತು ಸಿಹೆಚ್‍ಸಿಗಾಳದ ಡಿ.ವೈ.ಮುಮ್ಮಿಗಟ್ಟಿ, ಎನ್.ವಾಯ್.ಭರಮನ್ನವರ, ಯು.ಆರ್.ಮೆಟ್ಟಿನ, ಎ.ಎನ್.ಚಿಕಣಿ, ಎಂ.ಎಸ್.ಕೊಟಂಕಿ. ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಗೌರವವಂದನೆ: ಪೆÇಲೀಸ್ ಧ್ವಜ ದಿನಾಚರಣೆ ಅಂಗವಾಗಿ ಪರೇಡ್ ಕಮಾಂಡರ್ ಡಿಎಆರ್ ಆರ್.ಪಿ.ಐ.ಗಳಾದ ಎಫ್.ಆರ್.ಡೊಕ್ಕಣ್ಣನವರ ಮತ್ತು ಆರ್.ಎಸ್. ಗುಡನಟ್ಟಿ ಮುಂದಾಳತ್ವದಲ್ಲಿ ಆರ್ ಎಸ್‍ಐ ವಾಸು ರಕ್ಷೇದ ನೇತೃತ್ವದ 1ನೆ ತಂಡ, ಧಾರವಾಡ ಗ್ರಾಮೀಣ ಪೆÇಲೀಸ್ ಠಾಣೆ ಪಿ.ಎಸ್.ಐ. ಸುನೀಲಕುಮಾರ ಎಂ.ಎಲ್ ನೇತೃತ್ವದ 2ನೇ ತಂಡ ಹಾಗೂ ಎಸ್‍ಪಿ ಕಚೇರಿಯ ನಿಸ್ತಂತು ವಿಭಾಗದ ಜಿಲ್ಲಾ ನಿಯಂತ್ರಣದ ಕೊಠಡಿಯ ಮಹಿಳಾ ಪಿಎಸ್‍ಐ ನಿರ್ಮಲಾ ಜಂಬಗಿ, ಡಿಎಆರ್ ಆರ್‍ಎಸ್‍ಐ ಮಂಜುನಾಥ ಕುರುಗೋಡಿ ನೇತೃತ್ವದ 4ನೇ ತಂಡದ ಸದಸ್ಯರು ಆಕರ್ಷಕ ಪಥ ಸಂಚಲನದ ಮೂಲಕ ಗೌರವ ವಂದನೆ ಸಲ್ಲಿಸಿದರು.






















