Home ಜಿಲ್ಲೆ ದಿಂಡಿ ಉತ್ಸವ ಕಾರ್ಯಕ್ರಮ

ದಿಂಡಿ ಉತ್ಸವ ಕಾರ್ಯಕ್ರಮ

ಲಕ್ಷ್ಮೇಶ್ವರ,ಮಾ13: ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದವರು ಪ್ರತಿವರ್ಷದಂತೆ ದಿಂಡಿ ಉತ್ಸವವನ್ನು ಮೂರು ದಿನಗಳ ಕಾಲ ಪೇಠೆ ರಸ್ತೆಯಲ್ಲಿರುವ ವಿಠ್ಠಲ ರುಕುಮಾಯಿ ದೇವಸ್ಥಾನದಲ್ಲಿ ಸೋಮವಾರದಿಂದ ಪ್ರಾರಂಭವಾಗಿದ್ದು, ಪೋತಿ ಸ್ಥಾಪನೆ, ಗುಲಾ ಕೀರ್ತನೆ, ಪ್ರವಚನ ಇತ್ಯಾದಿ ಕಾರ್ಯಕ್ರಮಗಳು ಜರುಗಿದವು.


ಸೋಮವಾರ ನಸುಕಿನ 5 ಗಂಟೆಗೆ ಕಾಕಡಾರತಿ ಜರುಗಿ ನಂತರ 7 ಗಂಟೆಯಿಂದ ಭಾವಸಾರ ಕ್ಷತ್ರಿಯ ಸಮಾಜದ ಪುರುಷರು ಮತ್ತು ಮಹಿಳೆಯರು ಸೇರಿ ದೇವಸ್ಥಾನದ ಆವರಣದಲ್ಲಿ ಶ್ರೀ ಜ್ಞಾನೇಶ್ವರಿ ಗ್ರಂಥದ ಸಾಮುದಾಯಕ ಪಾರಾಯಣ ಜರುಗಿತು. ನಂತರ ಪ್ರವಚನ, ನಾಮಜಪ, ಕೀರ್ತನ ಇತ್ಯಾದಿಗಳು ಸಂಪ್ರದಾಯದಂತೆ ಜರುಗಿದವು. ಎರಡನೇ ದಿನವಾದ ಮಂಗಳವಾರ ಸಂಜೆ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಈ ವೇಳೆ ಮಾತನಾಡಿದ ಕೊಪ್ಪಳದ ಹಭಪ ವಿಠ್ಠಲ್ ಗುರೂಜಿ ಬಿಳಮಕರ್ ಅವರು ಮನುಷ್ಯನಿಗೆ ವಿದ್ಯೆ ಅತಿಅವಶ್ಯ, ವಿದ್ಯೆ ಇದ್ದಲ್ಲಿ ಆ ಉತ್ತಮ ಜೀವನ ಸಾಗಿಸಬಹುದು ಆದರೆ ಅದರ ಜೊತೆ ಮನಸ್ಸಿಗೆ ನೆಮ್ಮದಿ ನೀಡುವ ಜೀವನದ ಉತ್ಸಾಹ ಹೆಚ್ಚಿಸುವ ಪಾರಮಾರ್ಥಿಕ ಜೀವನಕ್ಕೂ ನಮ್ಮ ಸಮಯವನ್ನು ಮೀಸಲಿಡಬೇಕು, ಮಕ್ಕಳಿಗೆ ಧಾರ್ಮಿಕ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಹೆಚ್ಚು ತೊಡಗಿಸಿಕೊಳ್ಳುವದರ ಜೊತೆ ನಮ್ಮ ಸಂಪ್ರದಾಯ, ಸಂಸ್ಸøತಿಗಳನ್ನು ಅವರ ಮನದಲ್ಲಿ ಬಿತ್ತುವಂತಹ ಕಾರ್ಯವಾಗಬೇಕಾಗಿದೆ. ಕೀರ್ತನೆ ಭಜನೆಗಳನ್ನು ಆಲಿಸುವುದರಿಂದ ಮನಸ್ಸಿನ ದುಃಖ ದುಮ್ಮಾನಗಳು ಕಳೆದು ನೆಮ್ಮದಿಯ ಬದುಕು ಪ್ರಾಪ್ತವಾಗುತ್ತದೆ, ಬದುಕಿನ ಮೌಲ್ಯಗಳನ್ನು ಸಮಾಜಕ್ಕೆ ತಿಳಿಸುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ತೊಡಗಿಸಿಕೊಳ್ಳುವದು ಇಂದಿನ ಕಾಲಘಟ್ಟದಲ್ಲಿ ಅಗತ್ಯವಾಗಿದೆ ಎಂದು ಹೇಳಿದರು.


ಎಸ್‍ಎಸ್‍ಎಲ್‍ಸಿ, ಪಿಯುಸಿಗಳಲ್ಲಿ ಹೆಚ್ಚು ಅಂಕಗಳಿಸಿದ ಮಕ್ಕಳನ್ನು ಸಮಾಜದ ವತಿಯಿಂದ ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಮಾಜದ ಮಹಿಳಾ ಮಂಡಳದ ಅಧ್ಯಕ್ಷೆ ರುಕ್ಮಿಣಿ ರಂಪೂರೆ ವಹಿಸಿದ್ದರು. ತುಕಾರಾಮ ಗುರೂಜಿ ಹಜಾರೆ, ದಿಗಂಬರ ಪೂಜಾರ, ಮಂಜುನಾಥ ಹೊಗೆಸೊಪ್ಪಿನ್, ಚಂದನಾ ಅಜಿತ್ ಬರಿಗಾಲಿ, ಮಾರುತಿ ಮಾಳದಕರ, ಪುಂಡಲೀಕರಾವ ಮಾತಾಡೆ, ಕಾಶೀನಾಥ ಬೋಮಲೆ, ಕಿರಣ ನವಲೆ, ಸತೀಶ ಮಾಂಡ್ರೇ, ಸತೀಶ ಬೋಮಲೆ, ಸಂತೋಷ ಸರ್ವದೆ, ವಾಸು ಬೋಮಲೆ, ಅರುಣ ನವಲೆ, ಪ್ರಭು ನವಲೆ, ರಮೇಶ ನವಲೆ, ಪ್ರವೀಣ ಮಾತಾಡೆ, ಶಂಕರ ಹಾವಳೆ, ರವಿ ಬೋಮಲೆ, ಸಂಜಯ ಮಾಂಡ್ರೇ, ಪ್ರಭು ಬೋಮಲೆ, ಪ್ರವೀಣ ಬೋಮಲೆ ಮುಂತಾದವರಿದ್ದರು.