Home ಜಿಲ್ಲೆ ಗ್ರಾಮ ಆಡಳಿತಕ್ಕೆ ಡಿಜಿಟಲ್ ಸ್ಪರ್ಶ: ಶಾಸಕ ಶರಣಗೌಡ ಕಂದಕೂರರಿAದ ಲ್ಯಾಪ್‌ಟಾಪ್ ವಿತರಣೆ

ಗ್ರಾಮ ಆಡಳಿತಕ್ಕೆ ಡಿಜಿಟಲ್ ಸ್ಪರ್ಶ: ಶಾಸಕ ಶರಣಗೌಡ ಕಂದಕೂರರಿAದ ಲ್ಯಾಪ್‌ಟಾಪ್ ವಿತರಣೆ

ಗುರುಮಠಕಲ್:ಏ.೩೦: ತಾಲೂಕಿನ ಗ್ರಾಮ ಮಟ್ಟದ ಆಡಳಿತ ವ್ಯವಸ್ಥೆಗೆ ಡಿಜಿಟಲ್ ವೇಗ ನೀಡುವ ಉದ್ದೇಶದಿಂದ ಶಾಸಕ ಶರಣಗೌಡ ಕಂದಕೂರು ಅವರು ಗ್ರಾಮ ಆಡಳಿತ ಅಧಿಕಾರಿಗಳು (ಗಿಂ) ಮತ್ತು ಕಂದಾಯ ನಿರೀಕ್ಷಕರಿಗೆ (ಖI) ನೂತನ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದರು. ನಗರದಲ್ಲಿರುವ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಉಪಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕರು, ತಂತ್ರಜ್ಞಾನ ಬಳಕೆಯ ಮೂಲಕ ಗ್ರಾಮ ಮಟ್ಟದಲ್ಲೇ ಸೇವೆಗಳನ್ನು ತ್ವರಿತವಾಗಿ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು. ಲ್ಯಾಪ್‌ಟಾಪ್‌ಗಳ ನೆರವಿನಿಂದ ಪಹಣಿ, ಜಾತಿ ಹಾಗೂ ಆದಾಯ ಪ್ರಮಾಣಪತ್ರ ಸೇರಿದಂತೆ ವಿವಿಧ ಕಂದಾಯ ದಾಖಲೆಗಳ ವಿಲೇವಾರಿ ವೇಗವಾಗಿ ನಡೆಯಲಿದೆ ಎಂದು ತಿಳಿಸಿದರು.

ಅಧಿಕಾರಿಗಳು ಕಚೇರಿಗಳ ಸುತ್ತಾಟವಿಲ್ಲದೆ ಸ್ಥಳದಲ್ಲೇ ಜನರ ಸಮಸ್ಯೆಗಳನ್ನು ಪರಿಹರಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದರು. ಸಣ್ಣಪುಟ್ಟ ಕೆಲಸಗಳಿಗೂ ದಿನಗಟ್ಟಲೆ ಕಾಯಬೇಕಾಗುವ ಸಾರ್ವಜನಿಕರ ಸಮಸ್ಯೆಗಳನ್ನು ಈ ಡಿಜಿಟಲ್ ಉಪಕರಣಗಳು ಕಡಿಮೆ ಮಾಡಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮ ಮಟ್ಟದಲ್ಲಿ ಡಿಜಿಟಲೀಕರಣವನ್ನು ಬಲಪಡಿಸುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರರಾದ ಚನ್ನಮಲ್ಲಪ್ಪ ಘಂಟಿ, ನರಸಿಂಹ ಸ್ವಾಮಿ, ಉಪ ತಹಸೀಲ್ದಾರರಾದ ಅಶೋಕ ರಾಜಗೀರೆ, ಬಸವರಾಜ ಸಜ್ಜನ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.