Home ಜಿಲ್ಲೆ ಕಲಬುರಗಿ ಪಟ್ಟಣ್ ಶೆಟ್ಟರ್ ಗೆ ಕಾಯಕಯೋಗಿ ಪ್ರಶಸ್ತಿ

ಪಟ್ಟಣ್ ಶೆಟ್ಟರ್ ಗೆ ಕಾಯಕಯೋಗಿ ಪ್ರಶಸ್ತಿ

ಕಲಬುರಗಿ: ಏ.29:ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ
ವತಿಯಿಂದ ಕೊಡುವ ರಾಜ್ಯಮಟ್ಟದ ಕಾಯಕ ಯೋಗಿ ಪ್ರಶಸ್ತಿಗೆ ಮುದ್ರಣನಗರಿ ಗದುಗಿನ ಶೈಕ್ಷಣಿಕ ಭೀಷ್ಮ, ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಪೆÇ್ರ ಎಸ್ ಎಸ್ ಪಟ್ಟಣ್ ಶೆಟ್ಟರ್
ಆಯ್ಕೆಯಾಗಿದ್ದಾರೆ ಇವರು ಸತತ ನಾಲ್ಕು ದಶಕಗಳ ಕಾಲ ಶೈಕ್ಷಣಿಕ ಕ್ಷೇತ್ರದಲ್ಲಿ ಸತ್ಯ ಶುದ್ಧ ಕಾಯಕ ಪ್ರಾಮಾಣಿಕ ಸೇವೆ ಸಲ್ಲಿಸಿದಕ್ಕಾಗಿ ಕಾಯಕಯೋಗಿ ಪ್ರಶಸ್ತಿ ಒಲಿದು ಬಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಅಮೋಘವಾದ, ಮೊಹೊನ್ನತ ಶೈಕ್ಷಣಿಕ ಸೇವೆಯನ್ನು ಸಲ್ಲಿಸಿದ್ದಾರೆ. ಈ ಹಿಂದೆ ಹಲವಾರು ರಾಜ್ಯಮಟ್ಟದ ಅತ್ಯುನ್ನತ ಪ್ರಶಸ್ತಿಗಳಾದ ಸೇವಾರತ್ನ, ಸಮಾಜ ಸೇವಾಭೂಷಣ, ಶಿಕ್ಷಣ ರತ್ನ, ಹಲವಾರು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ. ಇಂತಹ ಮಹಾನ್ ಶೈಕ್ಷಣಿಕ ಸಂತರಿಗೆ ಪ್ರಶಸ್ತಿಗಳು ನೀಡುವುದರಿಂದ ಸಮಾಜಕ್ಕೆ ಅತ್ಯುತ್ತಮ ಸಂದೇಶ ನೀಡಿದಂತೆ. ಪ್ರಶಸ್ತಿಗೆ ಭಾಜನರಾದ ಶಿಕ್ಷಣ ತಜ್ಞ ಎಸ್ ಎಸ್ ಪಟ್ಟಣ್ ಶೆಟ್ಟರ್ ಅವರಿಗೆ ಅಭಿನಂದನೆಗಳ ಮಹಾಪೂರವೆ ಹರಿಯುತ್ತಿದೆ.