
ಕಲಬುರಗಿ:ಜೂ.21:ವಿದ್ಯಾರ್ಥಿಗಳಲ್ಲಿ ದಂತ ಆರೋಗ್ಯ ಮತ್ತು ನೈರ್ಮಲ್ಯ ಜಾಗೃತಿ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರೋಟ್ರಿ ಕ್ಲಬ್ ಗುಲಬರ್ಗಾ ಇವರ ಸಹಯೋಗದೊಂದಿಗೆ ಎಸ್. ಆರ್. ಎನ್. ಮೆಹ್ತಾ ಗ್ರುಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ದಂತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಶಿಬಿರದಲ್ಲಿ ತಜ್ಞ ದಂತ ವೈದ್ಯರು ವಿದ್ಯಾರ್ಥಿಗಳ ದಂತ ತಪಾಸಣೆ ನಡೆಸಿ, ಹಲ್ಲುಗಳ ಸ್ವಚ್ಛತೆ ಸರಿಯಾದ ಹಲ್ಲುಜ್ಜುವ ವಿಧಾನ. ಆರೋಗ್ಯಕರ ಆಹಾರ ಪದ್ಧತಿ ಹಾಗೂ ದಂತ ಆರೈಕೆಯ ಮಹತ್ವದ ಕುರಿತು ಮಾಹಿತಿ ನೀಡಿದರು.
ವಿದ್ಯಾರ್ಥಿಗಳು ಶಿಬಿರದಲ್ಲಿ ಉತ್ಸಾಹದಿಂದ ಭಾಗವಹಿಸಿ ಅಗತ್ಯ ಸಲಹೆಗಳನ್ನು ಪಡೆದರು. ಇಂತಹ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಉತ್ತಮ ಆರೋಗ್ಯ ಮತ್ತು ಸ್ವಚ್ಛತಾ ಅಭ್ಯಾಸಗಳನ್ನು ಬೆಳೆಸಲು ಸಹಕಾರಿಯಾಗಿವೆ.
ಶಿಬಿರದಲ್ಲಿ ಮುಖ್ಯ ಅತಿಥಿಗಳ ಸ್ಥಾನವನ್ನು ಸನ್ಮಾನ್ಯ ಶ್ರೀ ಪ್ರೀತಮ್ ಮೆಹ್ತಾ ಎಸ್. ಆರ್. ಎನ್ ಮೆಹ್ತಾ ಶಾಲೆಯ ಚೆರಮನ್‍ರು, ಹಾಗೂ ಖಣಟಿ. (ರೋಟ್ರಿಯನ್) ಸನ್ಮಾನ್ಯ ಶ್ರೀ ಉದಯ. ಪಿ. ಹೊಂಗುಂಟಿಕರ್ ಅಧ್ಯಕ್ಷರು ರೋಟ್ರಿ ಕ್ಲಬ್ ಗುಲಬರ್ಗಾ ಹಾಗೂ ಖಣಟಿ. (ರೋಟ್ರಿಯನ್) ಶ್ರೀ ಚನ್ನಬಸಪ್ಪ. ವಾಯ್. ಸಮನೆ ರೋಟ್ರಿ ಕ್ಲಬ್ ಗ್ರೂಪ್ ಲೀಡರ್ ಹಾಗೂ ಖಣಟಿ. (ರೋಟ್ರಿಯನ್) Pಊಈ ಶ್ರೀ ಮಲಕಣ್ಣ ಕಣ್ಣಿ ಸೆಕ್ರೆಟರಿ ರೋಟ್ರಿ ಕ್ಲಬ್ ಗುಲಬರ್ಗ ಹಾಗೂ ಶಾಲೆಯ ಪ್ರಾಂಶುಪಾಲರು ಸನ್ಮಾನ್ಯ ಶ್ರೀ ರಾಜಶೇಖರ ರೆಡ್ಡಿ ಸರ್ ಭಾಗವಹಿಸಿದ್ದರು. ಅಲ್ಲದೆ ತಜ್ಞರು ದಂತ ವೈದ್ಯರಾದ ಡಾ|| ಸಚಿನ್ ದೇಶಪಾಂಡೆ ಮತ್ತು ದಂತ ವ್ಯದ್ಯರಾದ ಡಾ|| ಮನಾಲಿ ಸಚೀನ್ ದೇಶಪಾಂಡೆ ಉಪಸ್ತಿತರಾಗಿದ್ದು ಸುಮಾರು 200 ರವರೆಗೆ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆಯನ್ನು ಮಾಡಿದ್ದಾರೆ.


























