
ಲಕ್ಷ್ಮೇಶ್ವರ, ಮೇ26: ಪಟ್ಟಣದ ಕಲಾಮಹ ವಿದ್ಯಾಲಯದ ಆವರಣದಲ್ಲಿ ನಿರ್ಮಿಸುತ್ತಿರುವ ಬೃಹತ್ ಮೇಲ್ಮಟ್ಟದ ಜಲಗಾರವನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಹಳೆ ವಿದ್ಯಾರ್ಥಿಗಳು ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಪಾಳಾ ಬಾದಾಮಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶರಣು ಗೋಡಿ ಪದ್ಮರಾಜ ಪಾಟೀಲ್, ಮಹೇಶ ಹೊಗೆಸೊಪ್ಪಿನ್, ತಿಪ್ಪಣ್ಣ ಸಂಶಿ ಅವರುಗಳು ಇತಿಹಾಸ ಹೊಂದಿರುವ ಕಲಾಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಿಸುತ್ತಿರುವ ವಿದ್ಯಾರ್ಥಿಗಳ ಪಾಲಿಗೆ ಕಂಟಕವಾಗುವ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಅಡ್ಡಿಯಾಗುವ ಜಲಾಗಾರ ನಿರ್ಮಾಣವನ್ನು ಜಿದ್ದಿಗೆ ಬಿದ್ದು ನಿರ್ಮಿಸಲು ಮುಂದಾದರೆ ಅದರಿಂದ ಆಗುವ ಯಾವುದೇ ಅನಾಹುತಕ್ಕೂ ನೇರವಾಗಿ ಜಿಲ್ಲಾ ಆಡಳಿತವೇ ಕಾರಣವಾಗುತ್ತದೆ.
ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ಮಾಡಿ ಕಾಲೇಜ್ ಕ್ಯಾಂಪಸ್ಸಿನಲ್ಲಿ ಜಲಾಗಾರ ನಿರ್ಮಾಣಕ್ಕೆ ಅನುಮೋದನೆ ನೀಡಿದ ಮುಖ್ಯ ಅಧಿಕಾರಿಯನ್ನು ಕೂಡ ಸಸ್ಪೆಂಡ್ ಮಾಡಿ ಕಾಮಗಾರಿಯನ್ನು ಸ್ಥಗಿತಗೊಳಿಸಲು ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಬೇಕು.
ಒಂದೊಮ್ಮೆ ಜಿಲ್ಲಾ ಆಡಳಿತ ನಿರ್ಲಕ್ಷ್ಯ ಮಾಡಿದರೆ ಜೂನ್ 1 ರಿಂದ ಉಗ್ರ ಹೋರಾಟಕ್ಕೆ ಹಳೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಮುಂದಾಗುವುದಾಗಿ ಎಚ್ಚರಿಸಿದರು.
ರಸ್ತೆ ತಡೆಯ ನಂತರ ಗ್ರೇಡ್ 2 ತಹಸಿಲ್ದಾರ್ ಮಂಜುನಾಥ ಅಮಾಸಿಯವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸದಾನಂದ ನಂದಣ್ಣವರ ಇಸ್ಮಾಯಿಲ್ ಆಡೂರ್ ಡಿಬಿ ಫಕೀರಪ್ಪ ಟಾಕಪ್ಪ ಸಾತಪೂತೆ ಸೇರಿದಂತೆ ಅನೇಕರಿದ್ದರು.
ಸಿಪಿಐ ಬಿ. ವಿ. ನ್ಯಾಮಗೌಡ, ಪಿಎಸ್‍ಐ ನಾಗರಾಜ್ ಗಡದ ನೇತೃತ್ವದಲ್ಲಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

























