Home ಜಿಲ್ಲೆ ಕಲಬುರಗಿ ಬಗರ್ ಹುಕುಂ ಸಾಗುವಳಿ ಸಕ್ರಮ ಸಮಿತಿ ಸಭೆ ಕರೆಯಲು ಒತ್ತಾಯ

ಬಗರ್ ಹುಕುಂ ಸಾಗುವಳಿ ಸಕ್ರಮ ಸಮಿತಿ ಸಭೆ ಕರೆಯಲು ಒತ್ತಾಯ

ಚಿಂಚೋಳಿ,ಮೇ.14-ಪ್ರತಿ ತಾಲೂಕಿನಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ, ಅಕ್ರಮ ಸಾಗುವಳಿ ಜಮೀನುಗಳನ್ನು ಸಕ್ರಮಿಕರಣಗೊಳಿಸಲು ಸಮಿತಿ ಇದ್ದು, ಸದರಿ ಸಮಿತಿಯು ನಿರಂತರವಾಗಿ ಸಕ್ರಮಕ್ಕಾಗಿ ಬಂದ ಅರ್ಜಿಗಳ ವಿಲೇವಾರಿಗಳನ್ನು ಮಾಡುತ್ತದೆ, ಆದರೆ ಚಿಂಚೋಳಿ ತಾಲೂಕಿನಲ್ಲಿ ಕಳೆದ 9 ವರ್ಷಗಳಿಂದ ಸಮಿತಿಯು ಅಸ್ತಿತ್ವದಲ್ಲಿದಲ್ಲಿರುವುದಿಲ್ಲ. ಈ ಹಿನ್ನಲೆಯಲ್ಲಿ ದಿನಾಂಕ 12.03.2026 ರಂದು ಸರಕಾರವು
ಅಧೀಕೃತ ಅಧಿಸೂಚನೆ ಹೊರಡಿಸಿ ಚಿಂಚೋಳಿಯ ಬಗರ್ ಹುಕುಂ ಸಾಗುವಳಿ ಸಕ್ರಮಿಕ ಸಮಿತಿಯನ್ನು ರಚನೆ ಮಾಡಿದೆ.
ಅಕ್ರಮ ಸಾಗುವಳಿದಾರರ ಅರ್ಜಿಗಳನ್ನು ಇತ್ಯರ್ಥಪಡಿಸದೇ ಹಲವು ವರ್ಷಗಳಿಂದ ಹಾಗೆ ಉಳಿದುಕೊಂಡಿದ್ದು, ಕೂಡಲೇ ಸಮಿತಿ ಸಭೆಯನ್ನು ಕರೆದು ಅಕ್ರಮ ಸಾಗುವಳಿದಾರರ ಅರ್ಜಿಗಳನ್ನು ಸಕ್ರಮಗೊಳಿಸಿ ವಿಲೇವಾರಿ ಮಾಡಬೇಕೆಂದು ಕಾಂಗ್ರೆಸ್ ಪಕ್ಷದ ತಾಲೂಕ ವಕ್ತಾರರಾದ ಶರಣು ಪಾಟೀಲ್ ಮೋತಕಪಳ್ಳಿ ಅವರು ಶಾಸಕ ಡಾ.ಅವಿನಾಶ್ ಜಾಧವ್ ಅವರಿಗೆ ಮನವಿ ಪತ್ರ ಸಲ್ಲಿಸಿ ಕೂಡಲೇ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಸಭೆ ಕರೆಯಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಇ.ಓ. ಸಂತೋಷ್ ಚೌವ್ಹಾಣ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸೈಯದ್ ಶಬ್ಬೀರ್, ಸುಭಾಷ ಚಂದ್ರ ಎಂಪಳ್ಳಿ, ಕಲೀಲ್ ಪಟೇಲ್, ಚಾಂದ ಅವರು ಇದ್ದರು.