
ಲಕ್ಷೆ÷್ಮÃಶ್ವರ,ಮೇ.೨೮: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದ ಹಿಂಬದಿಯಲ್ಲಿರುವ ಎಲ್ಲಾ ಮಾಂಸದ ಅಂಗಡಿಗಳನ್ನು ಸ್ಥಳಾಂತರಿಸುವAತೆ ಆಗ್ರಹಿಸಿ ಶ್ರೀರಾಮ ಸೇನಾ ಮತ್ತು ಹಿಂದೂ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ ಶ್ರೀ ಸೋಮೇಶ್ವರ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಬರುತ್ತಿದ್ದು ದೇವಸ್ಥಾನದ ಹಿಂಬದಿಯಲ್ಲಿ ಮೀನು ಚಿಕನ್ನು ಮತ್ತು ಮಾಂಸ ಮಾರಾಟದ ಅಂಗಡಿಗಳು ಇದ್ದು ಇದು ಹಿಂದುಗಳ ಭಾವನೆಗೆ ಧಕ್ಕೆ ತರುವಂತಿದೆ.
ಈ ಅಂಗಡಿಗಳನ್ನು ಸ್ಥಳಾಂತರಿಸುವAತೆ ಅನೇಕ ಬಾರಿ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಪುರಸಭೆ ಅವರಿಗೆ ಮನವಿಗಳನ್ನು ಕೊಟ್ಟಿದ್ದರು ಎಲ್ಲರೂ ಕಣ್ಮುಚ್ಚಿ ಕುಳಿತಿದ್ದಾರೆ ೧೫ ದಿನಗಳೊಳಗಾಗಿ ಎಲ್ಲಾ ಅಂಗಡಿಗಳನ್ನು ಸ್ಥಳಾಂತರಿಸದಿದ್ದರೆ ಹಿಂದೂಪರ ಸಂಘಟನೆಗಳು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರೇಡ್ ೨ ತಹಸಿಲ್ದಾರ್ ಮಂಜುನಾಥ್ ಅಮಾಸಿಯವರು ಮನವಿ ಪತ್ರ ಸ್ವೀಕರಿಸಿ ಸೂಕ್ತ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಕಳುಹಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ತಾಲೂಕ ಘಟಕದ ಅಧ್ಯಕ್ಷ ಈರಣ್ಣ ಪೂಜಾರ ಗಂಗಾಧರ ಮೆಣಸಿನಕಾಯಿ ದುಂಡೇಶಕೊಟಗಿ ವಿಜಯ ಕುಂಬಾರ್ ಶಕ್ತಿ ಕತ್ತಿ ವಿಶಾಲ್ ಬಟಕುರ್ಕಿ ನವೀನ್ ಹಿರೇಮಠ ಮಹಾಂತೇಶ ರಗಟಿ ಅಮಿತ್ ಗುಡಿಗೇರಿ ಉಳಿವೇಶ್ ಗೌಡ ಪಾಟೀಲ್ ಸಂಗಮೇಶ ಬೆಳವಾಳಕೊಪ್ಪ ಪ್ರಶಾಂತ ಗಾಂಜಿ ಅಕ್ಷಯ್ ಕುಂಶಿ ನಾಗರಾಜ್ ಪಾಟೀಲ್ ಯಶವಂತ ಶಿರಹಟ್ಟಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

























