
ಯಾದಗಿರಿ:ಮಾ.೧:ಒಳಮೀಸಲು ಜಾರಿಗೆ ಸಂಬAಧಿಸಿದAತೆ ದಲಿತ ಸಮುದಾಯದ ಪರವಾಗಿ ದೃಢವಾದ ನಿಲುವು ತಾಳದ ದಲಿತ ಸಚಿವರು ಮತ್ತು ಶಾಸಕರು ತಮ್ಮ ಜವಾಬ್ದಾರಿಯನ್ನು ಅರಿತು ಸ್ಪಷ್ಟವಾಗಿ ಮಾತಾಡಬೇಕು ಎಂದು ಮಾದಿಗ ಹೋರಾಟ ಮೀಸಲಾತಿ ಸಮಿತಿ (ಎಂ.ಆರ್.ಎಚ್.ಎಸ್) ಜಿಲ್ಲಾ ಅಧ್ಯಕ್ಷ ಕಾಶಪ್ಪ ಮಾದಿಗ ಹೆಗ್ಗಣಗೇರಾ ಆಗ್ರಹಿಸಿದ್ದಾರೆ.
ನಗರದಲ್ಲಿ ಶನಿವಾರ ಪ್ರಕಟಿಸಿದ ಹೇಳಿಕೆಯಲ್ಲಿ ಅವರು, ಪರಿಶಿಷ್ಟ ಜಾತಿಗಳಿಗೆ ಒಳಮೀಸಲು ಕಲ್ಪಿಸುವ ವಿಚಾರ ದೀರ್ಘಕಾಲದಿಂದ ಬಾಕಿಯೇ ಉಳಿದಿದ್ದು, ಇದರಿಂದ ದಲಿತ ಸಮುದಾಯದ ಯುವಜನರಲ್ಲಿ ನಿರಾಶೆ ಹೆಚ್ಚುತ್ತಿದೆ ಎಂದು ಹೇಳಿದರು. ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಗಟ್ಟಿಯಾಗಿ ಧ್ವನಿ ಎತ್ತಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಅಗತ್ಯವಿದ್ದಲ್ಲಿ ಕಲಾಪ ಬಹಿಷ್ಕಾರಕ್ಕೂ ಮುಂದಾಗಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಹುದ್ದೆಗಳು ಖಾಲಿ ಉಳಿದಿರುವುದು ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಹೊಡೆತವಾಗಿದೆ. ಮೀಸಲಾತಿ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರ ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳಬೇಕು. ನ್ಯಾಯಾಲಯದಲ್ಲಿ ಸಮರ್ಥವಾದ ವಾದ ಮಂಡಿಸಿ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಳೆದ ಹಲವು ವರ್ಷಗಳಿಂದ ಒಳಮೀಸಲುಗಾಗಿ ಹೋರಾಟ ನಡೆಯುತ್ತಿದ್ದು, ಹೋರಾಟಗಾರರ ತ್ಯಾಗವನ್ನು ಮರೆಯಬಾರದು. ದಲಿತ ಸಮುದಾಯದ ಏಕತೆ ಮತ್ತು ಸಂಘಟಿತ ಹೋರಾಟವೇ ಶಾಶ್ವತ ಪರಿಹಾರಕ್ಕೆ ದಾರಿ ತೋರಲಿದೆ ಎಂದು ಕಾಶಪ್ಪ ಮಾದಿಗ ಹೇಳಿದರು.
ಸರಕಾರ ತಕ್ಷಣ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದರು.






















