Home ಜಿಲ್ಲೆ ಸಾಂಸ್ಕೃತಿ ಕಾರ್ಯಕ್ರಮ

ಸಾಂಸ್ಕೃತಿ ಕಾರ್ಯಕ್ರಮ

ನವಲಗುಂದ,ಮೇ೨೭ : “ಒಗ್ಗಟ್ಟೇ ಬಲ, ನಾವೆಲ್ಲ ಒಂದು ನಾವೆಲ್ಲ ಬಂಧು” ಎಂಬ ಸಂದೇಶ ನೀಡಿ, ನೀವು ಇದೇ ತರಹ ಕೂಡಿ ಬಾಳಬೇಕು. ನಿಮ್ಮನ್ನು ಈ ತರಹದ ವೇಷದಲ್ಲಿ ನೋಡಲು ನಮಗೆ ಎರಡು ಕಣ್ಣುಗಳು ಸಾಲವು ಎಂದು ಕಾಲೇಜಿನ ಪ್ರಾಂಶುಪಾಲರಾದ ಎಸ್.ವಿ.ಬಡಿಗೇರ ಹೇಳಿದರು.

ಪಟ್ಟಣದಲ್ಲಿರುವ ಶ್ರೀ ಶಂಕರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಹಮ್ಮಿಕೊಳ್ಳಲಾಗಿದ್ದ `ಟ್ವೀನ್ಸ್ ಡೇ’ ಸಾಂಸ್ಕöÈತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಎಂ. ಎನ್ ಹಾರೋಗೇರಿ ಮಾತನಾಡಿ “ವಿದ್ಯಾರ್ಥಿಗಳಲ್ಲಿ ಒಗ್ಗಟ್ಟು, ಸ್ನೇಹ ಮನೋಭಾವ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಲು ಇಂತಹ ವಿನೂತನ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.

ಮಹಾವಿದ್ಯಾಲಯದಲ್ಲಿ ಕೇವಲ ಓದಷ್ಟೇ ಅಲ್ಲದೆ, ವಿದ್ಯಾರ್ಥಿಗಳ ಮಾನಸಿಕ ಉಲ್ಲಾಸಕ್ಕೂ ಇದು ಸಹಕಾರಿಯಾಗಿದೆ “ಎಂದು ಸಾಂಸ್ಕöÈತಿಕ ಕಾರ್ಯಾಧ್ಯಕ್ಷ ಆರ್ ಎಸ್ ಹಿರೇಮಠ ಅಭಿಪ್ರಾಯ ವ್ಯಕ್ತಪಡಿಸಿದರು.

`ಟ್ವೀನ್ಸ್ ಡೇ’ ಸಾಂಸ್ಕöÈತಿಕ ಕಾರ್ಯಕ್ರಮದಿಂದ ಕಾಲೇಜು ಆವರಣದಲ್ಲಿ ನೂರಾರು ವಿದ್ಯಾರ್ಥಿಗಳು ತಮ್ಮ ಆಪ್ತ ಸ್ನೇಹಿತರೊಂದಿಗೆ ಒಂದೇ ಮಾದರಿಯ, ಒಂದೇ ಬಣ್ಣದ ಉಡುಪುಗಳನ್ನು ಧರಿಸಿ, ಒಂದೇ ತರಹದ ಕೇಶ ವಿನ್ಯಾಸ ಮಾಡಿಕೊಂಡಿದ್ದರು.

ಪ್ರಾಧ್ಯಾಪಕರಾದ ಶೀಲಾ ತುಬಚಿ, ಎ.ಜಿ.ಜಕ್ಕನಗೌಡ್ರ, ಆರ್.ಪಿ ಚವ್ಹಾಣ, ಆರ್ ಎಂ ಸರ್ವದೆ, ಜಿ ಎಸ್ ಚಿಣಗಿ, ಪ್ರೊ. ವಿಜಯಲಕ್ಷಿ÷್ಮ ಸಾವಂತ, ಪ್ರೊ. ದಾವಲಸಾಬ ಕಲಬುರ್ಗಿ , ಪ್ರೊ. ಅಂದಾನಿಗೌಡ ಕಿತ್ತೂರ, ಎಂ.ವಿ.ಹೊಳೆಯಣ್ಣವರ, ಬಿ ಕೆ ಮಹೇಶ ಸೇರಿ ಸಮಿತಿಯ ಸಂಚಾಲಕರು, ಎಲ್ಲಾ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.