
ಅಫಜಲಪುರ:ಮಾ.30: ತಾಲೂಕಿನ ಬಡದಾಳ ಗ್ರಾಮದಲ್ಲಿ ಪುರಾತನ ಕಾಲದ ದೇಗುಲದಲ್ಲಿ ನಿಧಿಗಾಗಿ ಶೋಧ ಮಾಡುವುದಕ್ಕಾಗಿ ಶಿವಲಿಂಗ,ನಂದಿ, ಆಂಜನೇಯ ವಿಗ್ರಹಗಳನ್ನು ಧ್ವಂಸಗೊಳಿಸಿ ನೆಲ ಅಗೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಗುಲಕ್ಕೆ ಸಿಪಿಐ ಲಖನ್ ಮಸಗುಪ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಪಿಎಸ್‍ಐ ಸೋಮಲಿಂಗ್ ಒಡೆಯರ್, ಗ್ರಾಮಸ್ಥರು ಅಧಿಕಾರಿಗಳಿಗೆ ಸಹಕಾರ ನೀಡಿದರು. ಅಲ್ಲದೆ ಈ ದೇಗುಲವನ್ನು ಮೂರನೇ ಬಾರಿಗೆ ಅಗೆಯಲಾಗುತ್ತಿದ್ದು ಸಾಕಷ್ಟು ನಿಧಿ ಸಿಕ್ಕಿರಬಹುದು. ಅದಕ್ಕಾಗಿಯೇ ಪದೇ ಪದೇ ನೆಲ ಅಗೆಯಲಾಗುತ್ತಿದೆ. ಹೀಗಾಗಿ ಪೆÇಲೀಸ್ ಇಲಾಖೆ ಈ ಬಾರಿಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿಧಿ ಶೋಧದ ಹೆಸರಲ್ಲಿ ಪವಿತ್ರ ಶಿವಲಿಂಗ, ನಂದಿ, ಆಂಜನೇಯ ಸ್ವಾಮಿ ವಿಗ್ರಹಗಳನ್ನು ಧ್ವಂಸಗೊಳಿಸಿದವರನ್ನು ಪತ್ತೆ ಮಾಡಿ ಕಾನೂನು ರೀತಿಯಲ್ಲಿ ಶಿಕ್ಷೆ ಕೊಡಿಸಬೇಕು ಅಲ್ಲದೆ ಸರ್ಕಾರ ಮತ್ತು ಸಂಬಂಧ ಪಟ್ಟವರು ಪಾಳು ಬಿದ್ದ ದೇಗುಲವನ್ನು ಜೀರ್ಣೋದ್ದಾರಗೊಳಿಸಬೇಕು ಎಂದರು.




















