
ಬಾದಾಮಿ,ಏ2: ಅಂತಾರಾಷ್ಟ್ರೀಯ ಪ್ರವಾಸಿ ತಾಣ. ರಾಜ ಮಹಾರಾಜರ ಕಾಲದ ಪ್ರವಾಸಿ ತಾಣಗಳನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬಾದಾಮಿಗೆ ಬರುತ್ತಾರೆ.
ಬಾದಾಮಿಯಿಂದ ಬನಶಂಕರಿ ಸುಕ್ಷೇತ್ರದಿಂದ ಮಹಾಕೂಟಕ್ಕೆ ಹೋಗುವ ಮಾರ್ಗದಲ್ಲಿ ಚಾಲುಕ್ಯರ ಕಾಲದ ನಾಗನಾಥ ಕೊಳ್ಳ ಎಂಬ ತಾಣ ಇದೆ. ಇದು ನಿರ್ಜನ ಪ್ರದೇಶ ಹಿಂದಿನ ಕಾಲದಲ್ಲಿ ನಾಗಸರ್ಪಗಳ ತಾಣ ಎಂದು ಇಲ್ಲಿ ನಾಗನಾಥ ದೇವಸ್ಥಾನವನ್ನು ಕಟ್ಟಿಸಿದ್ದಾರೆ ಎಂಬ ಪ್ರತೀತಿ ಇದೆ. ಈಗಲೂ ಇಲ್ಲಿ ವರ್ಷಕ್ಕೆ ಒಂದು ಸಲ ಪಕ್ಕದ ಗ್ರಾಮಸ್ಥರು ಆಗಮಿಸಿ ಶ್ರಾವಣ ಮಾಸದಲ್ಲಿ ನಾಗನಾಥ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ಸೇವೆ ಮಾಡುವುದು ವಾಡಿಕೆ ಇದೆ.
ಚಾಲುಕ್ಯರ ಕಾಲದ ನಾಗನಾಥ ದೇವಾಲಯದ ರಕ್ಷಣೆಗೆ ಹಾಕಿರುವ ಕಂಪೌಂಡ್ ಗೆ ಹಾಕಿರುವ ಗ್ರಿಲ್ ಗಳು ಮುರಿದು ಬಿದ್ದಿದ್ದವು. ಇದನ್ನು ಗಮನಿಸಿದ ಬಾದಾಮಿ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ದುರಸ್ತಿಮಾಡಿಸಿದ್ದಾರೆ.






















