Home ಜಿಲ್ಲೆ ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭ

ಮುನವಳ್ಳಿ,ಮೇ೨೭: ಕಟಕೋಳ ಗ್ರಾಮದ ಪ್ರಿಯದರ್ಶಿನಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ೨೦೨೬-೨೭ ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಉದ್ಘಾಟನೆ, ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ, ಶಾಲಾ ಪ್ರಾರಂಭೋತ್ಸವದ ಸಮಾರಂಭವನ್ನು ಶ್ರೀ ವೀರಭದ್ರೇಶ್ವರ ಜ್ಞಾನಮಂಟಪದಲ್ಲಿ ದಿವ್ಯಸಾನಿಧ್ಯ ವಹಿಸಿದ ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯ ಶ್ರೀಗಳು ಉದ್ಘಾಟಿಸಿ ಮಾತನಾಡಿ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬ ನಾನುಡಿಯಂತೆ ಮಕ್ಕಳಿಗೆ ಚಿಕ್ಕವರಿದ್ದಾಗಲೇ ಸಂಸ್ಕಾರ ಹಾಗೂ ಶಿಕ್ಷಣ ನೀಡಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವದು ಪಾಲಕರು ಹಾಗೂ ಶಿಕ್ಷಕರ ಕರ್ತವ್ಯವಾಗಿದೆ ಮಠ ಮಾನ್ಯಗಳ ಶಾಲೆಗಳಲ್ಲಿ ಕಲಿತ ಮಕ್ಕಳು ಉನ್ನತ ಸ್ಥಾನಕ್ಕೆ ತಲುಪಿದ ವಿಧ್ಯಾರ್ಥಿಗಳು ಶಾಲೆಗಳನ್ನು ಹಾಗೂ ಶಿಕ್ಷಕರನ್ನು ಮರೆಯಬಾರದೆಂದರು.


ನೇತೃತ್ವವನ್ನು ಶ್ರೀ ರೇಣುಕ ಗಡದೇಶ್ವರ ದೇವರು ವಹಿಸಿದ್ದರು.


ಅಧ್ಯಕ್ಷತೆಯನ್ನು ಟಿ.ಪಿ.ಮನ್ನೊಳ್ಳಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷ ಪಿ.ಎನ್.ತೋಲಗಿ, ಪ್ರಧಾನ ಕಾರ್ಯದರ್ಶಿ ಎ.ಸಿ.ಸುರಗ, ನಿರ್ದೇಶಕರುಗಳಾದ ಜಿ.ಆಯ್.ಮಾಳಪ್ಪನವರ, ಶ್ರೀಮತಿ ಎಸ್.ಎಸ್.ಗುರ್ಲಹೊಸೂರ, ಶ್ರೀಮತಿ ಎಸ್.ಎಮ್.ಸುನ್ನಾಳ, ಹಾಗೂ ಬಸವರಾಜ ಮಾಢಳ್ಳಿ, ಮಾರೂತಿ ಮಾಢಳ್ಳಿ, ಡಿ.ವಾಯ್.ಮಾಢಳ್ಳಿ, ಆಯ್.ಎನ್ ನಿಂಗನಗೌಡ್ರ, ಶಾಲಾ ಸಿಬ್ಬಂದಿವರ್ಗ, ಶಿಕ್ಷಕರು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಜಿ.ಸಿ.ನಾವಲಗಿ ಸ್ವಾಗತಿಸಿದರು, ವಿ.ಎಸ್.ಜಂಗಣ್ಣವರ ನಿರೂಪಿಸಿದರು, ಎಂ.ಎಸ್.ಹಗೇದಾಳ ವಂದಿಸಿದರು.