Home ಜಿಲ್ಲೆ ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭ

ಲಕ್ಷ್ಮೇಶ್ವರ,ಏ4: ಪಟ್ಟಣದ ಜಗದ್ಗುರು ವೀರ ಗಂಗಾಧರ ಸಮುದಾಯ ಭವನದಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ 2026 ಶಿರಹಟ್ಟಿ ಮಂಡಲ ಬಿಜೆಪಿ ವತಿಯಿಂದ ಎರಡು ದಿನಗಳ ಈ ಅಭಿಯಾನದ ಸಮಾರೋಪ ಜರುಗಿತು.


ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಜ್ಯೋತಿ ಪಾಟೀಲ್ ಅವರು ಕಾರ್ಯ ವಿಸ್ತರಣೆ ಮತ್ತು ನಮ್ಮ ದೃಷ್ಟಿಕೋನ ಈ ಕುರಿತು ಕಾರ್ಯಕರ್ತರಿಗೆ ಸಮಗ್ರ ಮಾಹಿತಿ ನೀಡಿದರು.


ಬಿಜೆಪಿ ಯುವ ಮೋರ್ಚಾದ ಮಲ್ಲಿಕಾರ್ಜುನ್ ಬಾಳಿಕಾಯಿಯವರು ಬಿಜೆಪಿ ಇತಿಹಾಸ ಮತ್ತು ವಿಕಾಸದ ಕುರಿತು ಮಾತನಾಡಿದರು ನಮ್ಮ ಕಾರ್ಯ ಇವುಗಳ ಕುರಿತು ಶಶಿಧರ್ ಹೊಸಳ್ಳಿ ಸೈದ್ಧಂತಿಕ ಅಧಿಷ್ಠಾನ ಕುರಿತು ಗದಗ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮೋಹನ್ ಮಾಳ ಶೆಟ್ಟಿ ವಿಷಯ ಪ್ರಸ್ತಾಪಿಸಿದರು.


ಕಾರ್ಯಕ್ರಮದಲ್ಲಿ ಶಿರಹಟ್ಟಿ ಮಂಡಲ ಬಿಜೆಪಿ ಅಧ್ಯಕ್ಷ ಸುನಿಲ ಮಹಾಂತ ಶೆಟ್ಟರ ಗದಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಬಸವರಾಜ್ ಇಟಗಿ ಗಂಗಾಧರ ಮೆಣಸಿನಕಾಯಿ ಸೋಮಣ್ಣ ಉಪನಾಳ ವಿಜಯ ಕುಂಬಾರ ಪ್ರವೀಣ್ ಬೋಮಲೆ ನವೀನ್ ಹಿರೇಮಠ ಸೇರಿದಂತೆ ಅನೇಕರಿದ್ದರು.