
ಧಾರವಾಡ.,ಮೇ.೨೬: ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಧಾರವಾಡ ಕ್ರಿಕೇಟ್ ಅಕಾಡೆಮಿ ವತಿಯಿಂದ ಹುರುಕಡ್ಲಿಅಜ್ಜ ಕಾನೂನು ಮಹಾವಿದ್ಯಾಲಯದ ಮೈದಾನದಲ್ಲಿಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಅಧ್ಯಕ್ಷರಾಗಿ ಸಂಸ್ಥೆಯ ಕಾರ್ಯಾಧ್ಯಕ್ಷ ರಾಜಶೇಖರ. ಯು. ಬೆಳ್ಳಕ್ಕಿ ಆಗಮಿಸಿದ್ದರು. ಗೌರವ ಅತಿಥಿಗಳಾಗಿ ಜಂಟಿ ಕಾರ್ಯದರ್ಶಿ .ಶಿವಪುತ್ರ.ಎಂ. ಅಗಡಿ, ಧಾರವಾಡ ಜಿಲ್ಲಾ ಓಲಂಪಿಕ್ ಅಸೋಸಿ ಏಷನ್ ಸದಸ್ಯ ಬಿ.ಎಸ್. ತಾಳಿಕೋಟಿ, ಕಚೇರಿ ಅಧೀಕ್ಷಕರಾದ ಶಿವಲಿಂಗ ನೀಲಗುಂದ ಪಾಲ್ಗೊಂಡಿದ್ದರು. ಇದೇ ಸಂಧರ್ಭದಲ್ಲಿ ಧಾರವಾಡ ಜೋನ್ ಅಂಡರ್ ೧೫ ಕ್ರಿಕೇಟ್ ತಂಡಕ್ಕೆ ಈ ಅಕಾಡೆಮಿಯಿಂದ ಆಯ್ಕೆಯಾದ ಕುಮಾರಿ ವರ್ಷಾ ಕರೀಕಟ್ಟಿ, ಪ್ರಿಯಾಂಕಾ ಆನಾಡ, ಸೃಷ್ಠಿ ಕಣ್ಣನ್ನವ ರ್ಮತ್ತು ಅಂಡರ್ ೧೯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಕುಮಾರಿ ರೂಹಿ ದೊಡ್ಡಮನಿ, ಕುಮಾರಿ ಆರಾಧನಾ ಹೆಬ್ಳಿಕರ್, ಕುಮಾರಿ ತ್ರಿವೇಣಿ ಗುಲಗಂಜಿ ಇವರನ್ನು ಕ್ರಿಕೆಟ್ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಧಾರವಾಡ ಕ್ರಿಕೆಟ್ ಅಕಾಡೆಮಿಯವರು ಅಧ್ಯಕ್ಷರು ಹಾಗೂ ಮುಖ್ಯ ಅತಿಥಿಗಳನ್ನು ಸಹ ಇದೇ ಸಂದರ್ಭದಲ್ಲಿ ಸನ್ಮಾನಿಸಿದರು. ರಾಜಶೇಖರ ಬೆಳ್ಳಕ್ಕಿ ಇವರು ಮಾತನಾಡುತ್ತ ಇಂದಿವನ ದಿನಗಳಲ್ಲಿ ಪಾಲಕರು ತಮ್ಮ ಮಕ್ಕಳ ಮೇಲೆ ನಿಗಾ ಇಡಬೇಕು ಎಂದರು.
ಅತಿಥಿಗಳಾದ ಬಿ.ಎಸ್.ತಾಳಿಕೋಟಿ ಮಾತನಾಡಿ ಇಂದಿನ ಮಕ್ಕಳು ಅತೀಯಾಗಿ ಮೊಬೈಲ್ ಮೋರೆಹೋಗಿರುವುದರಿಂದ ಅವರ ನರಗಳ ಮೇಲೆ ದುಷ್ಪರಿಣಾಮ ಬೀರುತ್ತಿವೆ ಆದಷ್ಟು ಮಕ್ಕಳನ್ನು ಮೊಬೈಲ್‌ಗಳಿಂದ ದೂರ ವಿಡುವಂತೆ ತಿಳಿ ಹೇಳಿದರು. ಶಿವಲಿಂಗ ನೀಲಗುಂದ ಜ್ಯೋತಿಸ ಸಾಲಟ್ಟಿ ಕೊಣ್ಣುರ, ಮಹಾಂತೇಶ ಕ್ವಾಟಿ, ಸೋಮಶೇಖರ ಕರಡಿಗುಡ್ಡ ಸೇರಿದಂತೆ ಶಿಬಿರಾರ್ಥಿಗಳು ಹಾಗೂ ಅವರಪಾಲಕರು ಪಾಲ್ಗೊಂಡಿದ್ದರು.

























