Home ಜಿಲ್ಲೆ ಸುಸಂಸ್ಕøತ ಸಮಾಜ ನಿರ್ಮಿಸಲು ಮಕ್ಕಳನ್ನು ಸಿದ್ಧಪಡಿಸಬೇಕು: ಶಿಲ್ಪಾ ಭಸ್ಮೆ

ಸುಸಂಸ್ಕøತ ಸಮಾಜ ನಿರ್ಮಿಸಲು ಮಕ್ಕಳನ್ನು ಸಿದ್ಧಪಡಿಸಬೇಕು: ಶಿಲ್ಪಾ ಭಸ್ಮೆ

ವಿಜಯಪುರ:ಮೇ.1: ಸುಸಂಸ್ಕೃತ ಸಮಾಜ ನಿರ್ಮಿಸಲು ಮಕ್ಕಳನ್ನು ಸಿದ್ಧಪಡಿಸಬೇಕು. ನಾಗರಿಕ ಸಮಾಜದ ವಾಸ್ತವಿಕ ಸಂಗತಿಗಳನ್ನು ತಿಳಿಸಬೇಕು.
ಮಕ್ಕಳೆ ತಾವು ಇಪ್ಪತ್ತೊಂದನೆಯ ಶತಮಾನದ ರೂವಾರಿಗಳು. ಈ ದೇಶದ ಹಣೆಬರಹ ಬದಲಾಯಿಸುವ ಶಕ್ತಿ ನಿಮ್ಮಲ್ಲಿದೆ. ಜಗತ್ತಿಗೆ ಭಾರತ ಮಾದರಿಯ ರಾಷ್ಟ್ರವಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಗುರುವಾರ ನಗರದ ಜ್ಞಾನ ಯೋಗಾಶ್ರಮದಲ್ಲಿ ಬೇಸಿಗೆ ಸಂಸ್ಕಾರ ಶಿಬಿರದ ನಾಲ್ಕನೆಯ ದಿನದ “ನೀತಿ ಕಥೆಗಳು ” ಎಂಬ ವಿಶೇಷ ಉಪನ್ಯಾಸವನ್ನು ಮಾಡುತ್ತಾ ಶಿಕ್ಷಣ ಬದುಕುವದನ್ನು ಕಲಿಸಿದರೆ ಸಂಸ್ಕಾರ ಹೇಗೆ ಬದುಕಬೇಕೆಂದು ಅರಿವು ಮೂಡಿಸುತ್ತದೆ. ಮಾನವ ಮಾನವೀಯ ಸದ್ಗುಣಗಳಿಂದ ಬದುಕು ಸಾಗಿಸಬೇಕು. ಇಂದು ಮಕ್ಕಳು ಅಂಕಗಳಿಸುವ ಯಂತ್ರಗಳಾಗುತ್ತಿದ್ದಾರೆ.ಭಾರತೀಯ ಸಂಸ್ಕೃತಿಯೊಂದಿಗೆ ಸಂವಿಧಾನದ ಆಶಯಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಭಾರತ ಬಹುಭಾಷಿಕರ. ಬಹುಧಮಿ9ಯ ಬಹು ಸಂಸ್ಕೃತಿಯ ಪ್ರತೀಕವಾಗಿದೆ. ಆದ್ದರಿಂದ ನಾವೆಲ್ಲರೂ ಭಾರತೀಯರು ಎಂದು ಹೆಮ್ಮೆಪಡೋಣ.ಮಕ್ಕಳು ಕುಟುಂಬದ ಹಿರಿಯರೊಂದಿಗೆ ಬೆರೆತು ಜೀವಿಸಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?.ಎಂಬ ಗಾದೆಯಂತೆ ಸಂಸ್ಕಾರವನ್ನು ಬಾಲ್ಯದಲ್ಲಿ ನೀಡಬೇಕು.ಸಂಸ್ಕಾರವಂತ ಮಕ್ಕಳು ಮನೆಗೆ ಹಾಗೂ ದೇಶಕ್ಕೆ ಸ್ಪೂರ್ತಿ ಹಾಗೂ ಸಂಪತ್ತು. ಬೇಸಿಗೆ ಶಿಬಿರ ಮಕ್ಕಳಿಗೆ ಎರಡು ತಿಂಗಳ ವರೆಗೆ ಉಚಿತವಾದ ಶಿಬಿರ ಜ್ಞಾನ ಯೋಗಾಶ್ರಮ ಸಂಘಟಿಸಿದ್ದು ಶ್ಲಾಘನೀಯ ಕಾರ್ಯವಾಗಿದೆ.
ಆದರ್ಶ ವ್ಯಕ್ತಿಗಳ ಜೀವನ. ದೇಶಕ್ಕಾಗಿ ಪ್ರಾಣ ತ್ಯಾಗ ಬಲಿದಾನ ಮಾಡಿದವರ ಚರಿತ್ರೆ. ಸಂಗೀತ ಕ್ಷೇತ್ರ ಶ್ರೀಮಂತಗೊಳಿಸಿದವರನ್ನು ಸ್ಮರಿಸಿಕೊಳ್ಳುವದು. ಸತ್ಯ ಹರಿಶ್ಚಂದ್ರ ಕಥೆ. ಶ್ರೀರಾಮ ಚರಿತ್ರೆ.ಮಹಾಭಾರತದಲ್ಲಿಯ ನೀತಿ ಕಥೆಗಳು. ಚಿತ್ರ ಕಲೆ. ಭಾರತ ರತ್ನ ಪಡೆದವರ ಪರಿಚಯ. ರಾಷ್ಟ್ರ ಕವಿಗಳು. ಜ್ಞಾನಪೀಠ ಪುರಸ್ಕೃತ ಕುರಿತು ಅವರ ಸೇವೆ ಸ್ಮರಿಸುವದು. ದೇಶದ ಆಧ್ಯಾತ್ಮಿಕ. ಸಾಮಾಜಿಕ. ಸಾಂಸ್ಕೃತಿಕ. ಮೌಲ್ಯಯುತ ರಾಜಕೀಯ ಮುಂತಾದವರ ಕುರಿತು ಮಕ್ಕಳಿಗೆ ನೀತಿ ಕಥೆಗಳನ್ನು ಹೇಳುವ ಮೂಲಕ ಮಕ್ಕಳಲ್ಲಿ ಆಚಾರ-ವಿಚಾರ. ರಾಷ್ಟ್ರೀಯ ಮನೋಭಾವನೆ. ದೇಶ ಸೇವೆ ಅಭಿಮಾನ ಮೂಡಿಸುವಂತಹ ನೀತಿ ಕಥೆಗಳು ಮಕ್ಕಳ ಜೀವನ ಬದಿಸುವಲ್ಲಿ ಪ್ರೇರಕ ಶಕ್ತಿಯಾಗಿದೆ ಎಂದರು.
ದಿವ್ಯ ಸಾನ್ನಿಧ್ಯವನ್ನು ಬಸವಲಿಂಗ ಮಹಾಸ್ವಾಮೀಜಿ ವಹಿಸಿದ್ದರು. ಬೇಸಿಗೆ ಶಿಬಿರದಲ್ಲಿ 500 ವಿದ್ಯಾರ್ಥಿಗಳು ಭಾಗವಹಿಸಿದ್ದರು.