
ಮುನವಳ್ಳಿ,ಏ.೭: ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಜನಗಣತಿ ೨೦೦೭ ರ ಅಂಗವಾಗಿ ಮೂರು ದಿನಗಳ ತರಬೇತಿ ಕಾರ್ಯಗಾರ À ಜರುಗಿತು.
ದಂಡಾಧಿಕಾರಿ ಮಲ್ಲಿಕಾರ್ಜುನ ಹೆಗ್ಗನ್ನವರ ಸಸಿಗೆ ನೀರು ಹಾಕುವುದರ ಮೂಲಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸ್ವಯಂ ಗಣತಿಯನ್ನು ಮಾಡಿ ಕೊಳ್ಳಬೇಕೆಂದು ಎಲ್ಲಾ ಮೇಲ್ವಿಚಾರಕರು, ಗಣತಿದಾರರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಎಮ್.ಎಮ್.ತಿಮ್ಮಾಣಿ, ಪುರಸಭೆ ಅಧ್ಯಕ್ಷ ಈಶ್ವರ ಕರಿಕಟ್ಟಿ, ಉಪಾಧ್ಯಕ್ಷ ಡಿ.ಡಿ.ಕಿನ್ನೂರಿ, ಚಿದಾನಂದ ಬಾರ್ಕಿ, ಪಿಲ್ಡ್ ಟ್ರೆöÊನರ್ ಎಫ್.ಜಿ ನವಲಗುಂದ, ಮೇಲ್ವಿಚಾರಕರು, ಗಣತಿದಾರರು ಹಾಗೂ ಪುರಸಭೆ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.






















