Home ಜಿಲ್ಲೆ ಕಲಬುರಗಿ ಮೆಹ್ತಾ ಶಾಲೆಯಲ್ಲಿ ಸಿಎ ದಿನಾಚರಣೆ: ವೃತ್ತಿ ಮಾರ್ಗದರ್ಶನ ಸಂವಾದ

ಮೆಹ್ತಾ ಶಾಲೆಯಲ್ಲಿ ಸಿಎ ದಿನಾಚರಣೆ: ವೃತ್ತಿ ಮಾರ್ಗದರ್ಶನ ಸಂವಾದ

ಕಲಬುರಗಿ,ಜು 2: ನಗರದ ಪ್ರತಿಷ್ಠಿತ ಎಸ್. ಆರ್. ಎನ್. ಮೆಹ್ತಾ ಸಿ.ಬಿ.ಎಸ್.ಇ ಶಾಲೆಯಲ್ಲಿ ಅದ್ಬುತವಾಗಿ ಆಚರಿಸಲಾದ ಸಿ ಎ ದಿನಾಚರಣೆಯ ಅಂಗವಾಗಿ ವೃತ್ತಿ ಮಾರ್ಗದರ್ಶನ ಸಂವಾದವನ್ನು ತುಂಬಾ ಮಾಹಿತಿಪೂರ್ಣವಾಗಿ ಜರುಗಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಪನ್ಮೂಲ ವ್ಯಕ್ತಿಗಳಾದ ಇನ್ನರ್ ವೀಲ್ ಸಂಸ್ಥೆಯ ಯುವ ಚಾರ್ಟ್‍ರ್ಡ್‍ಅಕೌಂಟೆಂಟ್ ಪ್ರಶಾಂತ್ ಬಿಜಸ್ಪುರ್ ಅವರು ಆಗಮಿಸಿ ಉತ್ತಮಪೂರ್ಣ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಎಸ್. ಆರ್. ಎನ್. ಮೆಹ್ತಾ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಪ್ರೌಢಶಾಲಾ
ವಿದ್ಯಾರ್ಥಿಗಳು ಭಾಗವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಎಸ್. ಆರ್. ಎನ್. ಮೆಹ್ತಾ ಶಾಲೆಯಪ್ರಾಂಶುಪಾಲರಾದ ರಾಜಶೇಖರ ರೆಡ್ಡಿ ಅವರು ಮತ್ತು ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು.