
ಲಕ್ಷೆ÷್ಮÃಶ್ವರ,ಮಾ.೧೧: ಪಟ್ಟಣದ ಪುರಸಭೆ ವ್ಯಾಪ್ತಿಯ ತಮ್ಮಾ _ ತಿಮ್ಮಿ ಜಮೀನಿನಲ್ಲಿ ಈಗಾಗಲೇ ಫಲಾನುಭವಿಗಳಿಗೆ ಆಶ್ರಯ ಹಕ್ಕು ಪತ್ರ ವಿತರಿಸಿ ದ್ದು ಬಾಕಿ ಉಳಿದ ೨೧೦ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸುವಂತೆ ಮತ್ತು ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಫಲಾನುಭವಿಗಳಿಗೆ ಭೂಮಿ ಖರೀದಿಸಿ ಆಶ್ರಯ ಮನೆ ವಿತರಿಸುವಂತೆ ಒತ್ತಾಯಿಸಿ ಕಿಸಾನ್ ಜಾಗೃತಿ ವಿಕಾಸ ಸಂಘದವರು ತಹಶೀಲ್ದಾರ್ ಎಂ ಧನಂಜಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಿಸಾನ್ ಜಾಗೃತಿ ವಿಕಾಸ ಸಂಘದ ಗದಗ ಜಿಲ್ಲಾ ಅಧ್ಯಕ್ಷರಾದ ಎನ್ ಡಿ ಭಂಡಾರಿ ತಾಲೂಕ ಘಟಕದ ಅಧ್ಯಕ್ಷ ಶಿವಾನಂದ ಲಿಂಗ ಶೆಟ್ಟಿ ಶಿರಹಟ್ಟಿ ಮತ್ತು ಮುಂಡರಗಿ ತಾಲೂಕ ಘಟಕಗಳ ಅಧ್ಯಕ್ಷರು ಇದ್ದರು.
ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ್ ಧನಂಜಯ ಎಂ ಅವರು ಜಿಲ್ಲಾಧಿಕಾರಿಗಳ ಮುಖಾಂತರ ಸಂಬAಧಪಟ್ಟ ಇಲಾಖೆಗೆ ಕಳುಹಿಸುವುದಾಗಿ ಹೇಳಿದರು.

























