
ಸಂಜೆವಾಣಿ ವಾರ್ತೆ
ಸುರಪುರ: ಮಾ.೧೨:ನಗರದ ಗೋಲ್ಡನ್ ಕೇವ್ ಬುದ್ದ ವಿಹಾರದಲ್ಲಿ ಈ ಹಿಂದೆ ಶ್ರೀಲಂಕಾ ಶಿಲ್ಪಿಯಿಂದ ನಿರ್ಮಿಸಿದ ಭಗವಾನ್ ಬುದ್ದರ ಮೂರ್ತಿಯನ್ನು ಲೋಕಾರ್ಪಣೆ ಮಾಡುವದು ಮತ್ತು ಬೌದ್ಧ ಸಂಸ್ಕಾರದAತೆ ಸಾಮೂಹಿಕ ವಿವಾಹವನ್ನು ಏರ್ಪಡಿಸುವ ಕಾರ್ಯಾಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲು ತಾಲೂಕಿನ ದಲಿತ ಸಂಘಟನೆಗಳ ಮುಖಂಡರುಗಳ ಬೆಂಬಲವನ್ನು ಕೋರಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ರವರ ಹೆಸರಲ್ಲಿ ನಾವುಗಳು ಹೋರಾಟಗಳನ್ನು ಮಾಡಿಕೊಂಡು ಸಂಘರ್ಷಗಳನ್ನು ಹೆದರಿಸಿಕೊಂಡು ಬಂದಿದ್ದೆವೆ. ಆದರೆ ಬಾಬಾಸಾಹೇಬರು ತೋರಿದ ಬುದ್ದರ ಮಾರ್ಗ ಧಮ್ಮದ ಶಾಂತಿ ಮಾರ್ಗವನ್ನು ನಾವುಗಳು ಮರೆಯದೆ ಅವರ ದಾರಿಯಲ್ಲಿ ನಡೆದು ಬೌದ್ಧ ಸಂಸ್ಕಾರದAತೆ ಮುನ್ನೆಡೆಯವುದು ಕೂಡ ಅವಶ್ಯವಿದೆ ಎಂದರು. ಶ್ರೀಲಂಕಾದ ಶಿಲ್ಪಿಯಿಂದ ನಿರ್ಮಿಸಿದ ಭಗವಾನ್ ಬುದ್ದರ ಮೂರ್ತಿಯನ್ನು ಲೋಕಾರ್ಪಣೆ ಮಾಡುವದು ಹಾಗೂ ಬೌದ್ಧ ಸಂಸ್ಕಾರದAತೆ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲು ನಾವೆಲ್ಲರೂ ಸಲಹೆ ಸೂಚನೆಗಳನ್ನು ಕೊಟ್ಟು ಈ ಪೂರ್ವ ಭಾವಿ ಸಭೆಯಲ್ಲಿ ಚರ್ಚಿಸಿ ಗೋಲ್ಡನ್ ಕೇವ್ ಬುದ್ದ ವಿಹಾರದಲ್ಲಿನ ಅಭೀವೃದ್ದಿಗಾಗಿ ಪ್ರತಿಯೋಬ್ಬರು ಜವಬ್ದಾರಿಯಿಂದ ಕಾರ್ಯಾನಿರ್ವಹಿಸಬೇಕೆಂದು ಹೆಳಿದರು.
ಸಭೆಯ ಅದ್ಯಕ್ಷತೆಯನ್ನು ಡಿಎ???ಸ್ ಜಿಲ್ಲಾ ಸಂಚಾಲಕ ಶ್ರೀನಿವಾಸ ನಾಯಕ ಬೊಮ್ಮನಹಳ್ಳಿಯವರು ಎಲ್ಲ ಸಂಘಟನೆಗಳ ಪರವಾಗಿ ವಹಿಸಿಕೊಂಡು ಬಾಬಾಸಾಹೇಬ್ ಡಾ.ಅಂಬೇಡ್ಕರ್ ಅನುಯಾಯಿಗಳು ಎಲ್ಲರು ಬುದ್ಧ ವಿಹಾರದ ಮಹತ್ವವನ್ನು ಅರಿತು ಹೆಚ್ಚು ಹೆಚ್ಚು ಉಪಾಸಕ ಬಂಧುಗಳು ಆಗಮಿಸಬೇಕು. ಕಾರ್ಯಾಕ್ರಮವನ್ನು ಯಶಸ್ವಿಗೋಳಿಸಬೆಕು ಎಂದರು.
ಸಭೆಯಲ್ಲಿದ್ದ ಜಿಬಿಟಿ ಟ್ರಸ್ಟ್ ಅದ್ಯಕ್ಷ ವೆಂಕಟೆಶ ಹೊಸಮನಿ, ಪ್ರಧಾನ ಕಾರ್ಯದರ್ಶಿ ರಾಹುಲ್ ಹುಲಿಮನಿ ತ್ರಿಸರಣ ಪಂಚಶೀಲ ಪಠಿಸಿ ಎಲ್ಲರನ್ನು ಸಭೆಗೆ ಸ್ವಾಗತಿಸಿ, ಸಭೆಯಲ್ಲಿ ಚರ್ಚೆಮಾಡುವ ಅಜೆಂಡಾಗಳನ್ನು ತಿಳಿಸಿದರು. ಬೌದ್ಧ ಅನುಯಾಯಿಗಳ ಜವಬ್ದಾರಿ ಹಾಗೂ ಹಕ್ಕಿನ ಬಗ್ಗೆ ಸಭೆಯಲ್ಲಿ ವಿವರಿಸಿದರು.
ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಚಂದ್ರಶೇಖರ ಕಟ್ಟಿಮನಿ, ವೆಂಕಟೇಶ್ವರ ಸುರಪುರ, ಭೀಮರಾಯ ಸಿಂದಗೇರಿ, ಮಾಳಪ್ಪ ಕಿರದಳ್ಳಿ, ರಾಜು ದೊಡ್ಡಮನಿ, ಸಿದ್ದಪ್ಪ ಸುರಪುರಕರ್, ಶಿವಶರಣ ಯಾಳಗಿ, ತಿಪ್ಪಣ್ಣ ಶೆಳ್ಳಗಿ, ಮಹಾದೇವ ದೇವಾಪುರ, ಮಾನಪ್ಪ ಬಳಬಟ್ಟಿ, ಹಣಮತ ತೇಲ್ಕರ್, ಶೇಖರ ಮಂಗಳೂರು, ಶರಣು ತಳವಾರಗೇರ, ಮಲ್ಲು ಮುಷ್ಠಳ್ಳಿ, ಬಸವರಾಜ ಬೊಮ್ಮನಹಳ್ಳಿ, ಮರೆಪ್ಪ ಮಲ್ಲಾ ಮಲ್ಲಿಕಾರ್ಜುನ್ ವಾಗಿಣಗೇರ, ವೈಜನಾಥ ಹೊಸಮನಿ, ಶರಣು ಹಸನಾಪೂರ, ಶ್ರೀರಾಮ್ ದೇವರಗೋನಾಲ್, ಗೋಪಾಲ್ ಕುಂಬಾರಪೇಟೆ, ವಿಕ್ರಮ್ ಕರಡಕಲ್, ರಾಜು ಬಡಿಗೇರ್, ರಮೇಶ ಬಡಿಗೇರ, ಆಕಾಶ ಕಟ್ಟಿಮನಿ, ಮುಖುಲ್ ತೇಲ್ಕರ್, ಚಂದಪ್ಪ ಪಂಚಮ್, ಗಣೇಶ್ ದೇವಿಕೇರಿ, ನಾಗರಾಜ ಬೇವಿನಾಳ, ಅವಿನಾಶ ಚಿಕ್ಕನಹಳ್ಳಿ, ಸುರೇಶ್ ಚಿಕ್ಕನಹಳ್ಳಿ, ಲಿಂಗರಾಜ್ ಮಂಗಿಹಾಳ , ಗಜ ತಳವಾರ, ಮಲ್ಲು ಕುಂಬಾರಪೇಟೆ, ಇತರರು ಬಾಗವಹಿಸಿದ್ದರು.
ಕರ್ನಾಟಕ ಸರ್ಕಾರ ಈಬಾರಿಯ ಬಜೆಟಿನಲ್ಲಿ ನಾಡಿನ ಬಿಕ್ಕು ಸಂಘದ ಭಂತೆ ಬೋಧಿದತ್ತ ಥೇರ ಹಾಗೂ ಭಂತೆ ವರಜ್ಯೋತಿ ಥೇರ ಇವರುಗಳ ನೇತೃತ್ವದಲ್ಲಿ ಕೆಲವು ಬೌದ್ಧ ಉಪಾಸಕರ ಸತತ ಪರಿಶ್ರಮದಿಂದ ಕಳೆದ ವರ್ಷ ಹಮ್ಮಿಕೊಂಡಿದ್ದ ಬೌದ್ಧ ಧಮ್ಮದ ಪಂಚಶೀಲ ಪಾದಾಯಾತ್ರೆ ಮತ್ತು ಇತ್ತಿಚಿಗೆ ರಾಜ್ಯ ಮಟ್ಟದ ಎಲ್ಲ ದಲಿತ ನಾಯಕರುಗಳ ಒತ್ತಾಯದ ಮೆರೆಗೆ ಬೌದ್ಧ ಅಭಿವೃದ್ದಿ ನಿಗಮ ಸ್ಥಾಪನೆ ಮಾಡುತ್ತೆವೆಂದು ಮುಖ್ಯಮತ್ರಿಗಳು ಘೋಷಿಸಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿ ಸಭೆಯ ನಂತರ ನಗರದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವದರ ಮುಖಾಂತರ ಸಲ್ಲಿಸಲಾಯಿತು.






















