
ಸೇಡಂ ,ಜೂ,21:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಹಾಗೂ ಶಿಶು ಅಭಿವೃದ್ಧಿ ಯೋಜನೆ ಸೇಡಂ ಇವರ ಸಂಯುಕ್ತಾಶ್ರಯದಲ್ಲಿ ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯಡಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಗಳ ಸದಸ್ಯರುಗಳಿಗೆ, ಪಂಚಾಯತಿ ಸದಸ್ಯರುಗಳಗೆ, ಪಂಚಾಯತಿ ವ್ಯಾಪ್ತಿಯ ಮೇಲ್ವಿಚಾರಕಿಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಆರೋಗ್ಯ ಮಹಿಳಾ ಸಹಾಯಕಿ ಹಾಗೂ ಇತರ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿ/ಸಿಬ್ಬಂದಿಗಳಿಗೆ ಬೇಟಿ ಬಚಾವ್ ಬೇಟಿ ಪಡೋ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮ ತಾಲೂಕಿನ ಕೋಲ್ಕುಂದಾ ಗ್ರಾಮ ಪಂಚಾಯತಿ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ತಾಲೂಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಅನುರಾಧಾ ಎಸ್ ಪಾಟೀಲ್ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಈ ವೇಳೆಯಲ್ಲಿ ಮದನಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಮೈಹಿಮುದ ಸಾಬ್,ಪಂಚ ಗ್ಯಾರಂಟಿ ಸದಸ್ಯರಾದ ಶೋಭಾ ವಾಲಿಕರ್,ರಾಜಶೇಖರ್ ರೆಡ್ಡಿ ಪಾಟೀಲ್ ಕೊಲ್ಕುಂದಾ, ನಾಗರೆಡ್ಡಿ ಗೌಡ,ವೀರಣ್ಣ ಗೌಡ ಮಾಲಿಪಾಟೀಲ್, ಭೀಮರೆಡ್ಡಿ.ಪಾಟೀಲ್. ಪತ್ತಿ ಶ್ರೀಗಂಗಾಧರ್.ವಿವಿಎಂ ಕೋಲ್ಕುಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇಂದ್ರಪ್ಪ ನಾಯಕ್,ಹುಸೇನಪ್ಪ ಫಿರಂಗಿ ಮಾಜಿ ಗ್ರಾಂ.ಪಂಚಾಯತ್. ಸದಸ್ಯರು, ಸುರೇಖಾ ಆರೋಗ್ಯ ಸಹಾಯಕಿ ಕೋಲ್ಕುಂದ, ಹಾಗೂ ಅಂಗನವಾಡಿಯ ಶಿಕ್ಷಕರು ಹಾಗೂ ಸಹಾಯಕಿಯರು ಆಶಾ ಕಾರ್ಯಕರ್ತರು ಪಾಲಕರು ಇದ್ದರು


























