Home ಜಿಲ್ಲೆ ಕಲಬುರಗಿ ಕನ್ನಡಕ್ಕೆ ಹೊಸ ದಿಕ್ಕು ತೋರಿದ ಬಸವಣ್ಣ

ಕನ್ನಡಕ್ಕೆ ಹೊಸ ದಿಕ್ಕು ತೋರಿದ ಬಸವಣ್ಣ

ಕಲಬುರಗಿ :ಏ.15: ವಿಶ್ವಗುರು ಬಸವಣ್ಣನವರು ಕನ್ನಡ ಸಾಹಿತ್ಯ ಮತ್ತು ಸಮಾಜಕ್ಕೆ ಹೊಸ ದಿಕ್ಕು ತೋರಿದ ಮಹಾನ್ ಸಮಾಜ ಸುಧಾರಕ, ಕವಿ ಮತ್ತು ತತ್ವಜ್ಞಾನಿ. ಅವರು ವಚನಗಳ ಮೂಲಕ ಸಾಮಾಜಿಕ ಸಮಾನತೆ, ಜಾತಿ ಪದ್ಧತಿ ನಿರ್ಮೂಲನೆ, ಸ್ತ್ರೀ ಸಮಾನತೆ ಮತ್ತು ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಸಾರಿದ್ದಾರೆ ಎಂದು ಕನ್ನಡ ಉಪನ್ಯಾಸಕ ಮಲ್ಲಿಕಾರ್ಜುನ ಬಿರಾದಾರ ಹೇಳಿದರು. ನಗರದ ಗಾಂಧಿ ನಗರದಲ್ಲಿನ ‘ಆಚಾರ್ಯ ಪದವಿ ಪೂರ್ವ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬಸವ ಜಯಂತಿ ಅಂಗವಾಗಿ ಜರುಗುತ್ತಿರುವ ಸರಣಿ ಉಪನ್ಯಾಸ ಮಾಲಿಕೆ-2ರಲ್ಲಿ ಬುಧವಾರ ಜರುಗಿದ “ಬಸವಣ್ಣ ಮತ್ತು ಕನ್ನಡ” ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡುತ್ತಾ, ಮಾತನಾಡಿದರು. ಉಪನ್ಯಾಸಕ, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ಬಸವಾದಿ ಶರಣರು ವಚನಗಳನ್ನು ಎಲ್ಲರಿಗೂ ತಿಳಿಯುವಂತೆ ಸರಳವಾಗಿ ಕನ್ನಡದಲ್ಲಿ ರಚನೆ ಮಾಡುವ ಮೂಲಕ ಕನ್ನಡವನ್ನು ಜನಸಾಮಾನ್ಯರ ಭಾಷೆಯನ್ನಾಗಿಸಿದರು. ಬಸವಣ್ಣನವರ ಸಾಹಿತ್ಯ ಮತ್ತು ವಿಚಾರಧಾರೆ ಕನ್ನಡ ಸಂಸ್ಕøತಿಯ ಅಡಿಪಾಯವಾಗಿದೆ. ಕನ್ನಡದ ಅಸ್ಮಿತೆಗೆ ಬಸವಾದಿ ಶರಣರ ಕೊಡುಗೆ ಅನನ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್. ಬಿರಾದಾರ, ಕಾಲೇಜಿನ ನಿರ್ದೇಶಕ ಡಾ.ಕಾಶಿನಾಥ ಕಣಜೆ, ಉಪನ್ಯಾಸಕರಾದ ಜ್ಯೋತಿ ಕಣಜೆ, ರವಿಚಂದ್ರ ಬಿರಾದಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.